Isaiah · chapter 66 · verse 10
Isaiah 66:10 in Kannada
ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ.
Yeroosalemina sangada neevu santoshi siri, avalannu preeti maaduvavarellare, avalom dige ullaasapadiri; avaligoskara duhkhisidava rellare, avala santoshakkaagi aanandapadiri.
Isaiah 66:10 in English
- King James Version (KJV)
- Rejoice ye with Jerusalem, and be glad with her, all ye that love her: rejoice for joy with her, all ye that mourn for her:
- World English Bible (WEB)
- “Rejoice with Jerusalem, and be glad for her, all you who love her. Rejoice for joy with her, all you who mourn over her;
- American Standard Version (ASV)
- Rejoice ye with Jerusalem, and be glad for her, all ye that love her: rejoice for joy with her, all ye that mourn over her;
- Bible in Basic English (BBE)
- Have joy with Jerusalem, and be glad with her, all you her lovers: take part in her joy, all you who are sorrowing for her:
- Darby Translation (DBY)
- Rejoice with Jerusalem, and be glad for her, all ye that love her; rejoice for joy with her, all ye that mourn over her:
- Webster's Bible (WBS)
- Rejoice ye with Jerusalem, and be glad with her, all ye that love her: rejoice for joy with her, all ye that mourn for her:
- Young's Literal Translation (YLT)
- Rejoice ye with Jerusalem, And be glad in her, all ye loving her, Rejoice ye with her for joy, All ye are mourning for her,
Read in context
- 8ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು.
- 9ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ.
- 10ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ.
- 11ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ.
- 12ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
Cross references
- Deuteronomy 32:43 ಧರ್ಮೋಪದೇಶಕಾಂಡ 32:43ಓ ಎಲ್ಲಾ ಜನಾಂಗಗಳೇ, ಆತನ ಜನರ ಸಂಗಡ ಹರ್ಷಿಸಿರಿ; ಆತನು ತನ್ನ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುತ್ತಾನೆ; ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ತನ್ನ ದೇಶಕ್ಕೋಸ್ಕರವೂ ತನ್ನ ಜನರಿಗೋಸ್ಕರವೂ ಕರುಣೆಯುಳ್ಳವನಾಗಿರುವನು ಎಂಬದೇ.
- Psalm 26:8 ಕೀರ್ತನೆಗಳು 26:8ಕರ್ತನೇ, ನಿನ್ನ ವಾಸಸ್ಥಾನವನ್ನೂ ಗೌರವದ ನಿವಾಸವನ್ನೂ ನಾನು ಪ್ರೀತಿಸಿದ್ದೇನೆ.
- Psalm 137:6 ಕೀರ್ತನೆಗಳು 137:6ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದೆ ಯೆರೂಸ ಲೇಮನ್ನು ನನ್ನ ಮುಖ್ಯ ಸಂತೋಷಕ್ಕಿಂತ ಅದನ್ನು ಹೆಚ್ಚಿಸದಿದ್ದರೆ ನನ್ನ ನಾಲಿಗೆಯು ನನ್ನ ಅಂಗಳಕ್ಕೆ ಹತ್ತಲಿ.
- Ezekiel 9:4 ಯೆಹೆಜ್ಕೇಲನು 9:4ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು.
- Isaiah 65:18 ಯೆಶಾಯ 65:18ಆದರೆ ನಾನು ಸೃಷ್ಟಿಸಿದವುಗಳಲ್ಲಿ ನೀವು ಸಂತೋಷಿಸಿ ಎಂದೆಂದಿಗೂ ಉಲ್ಲಾಸಪಡಿರಿ; ಯಾಕಂ ದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸ ವನ್ನೂ ಅವಳ ಜನರಲ್ಲಿ ಸಂತೋಷವನ್ನೂ ಸೃಷ್ಟಿಸು ತ್ತೇನೆ.
- Isaiah 44:23 ಯೆಶಾಯ 44:23ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
- Psalm 122:6 ಕೀರ್ತನೆಗಳು 122:6ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.
- Psalm 84:1–4 ಕೀರ್ತನೆಗಳು 84:1–4ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ! ಕರ್ತನ ಅಂಗಳ ಗಳಿಗಾಗಿ ನನ್ನ ಪ್ರಾಣವು ಬಯಸಿ, ಹೌದು, ಅದು ಕುಂದುತ್ತದೆ; ನನ್ನ ಹೃದಯವೂ ಶರೀರವೂ ಜೀವ ವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ. ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ. ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ.
- Revelation 11:3–15 ಪ್ರಕಟನೆ 11:3–15ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು. ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವ ನಾದರೂ ಕೇಡನ್ನು ಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ನುಂಗಿ ಬಿಡುವದು; ಇವರಿಗೆ ಯಾವನಾದರೂ ಕೇಡನ್ನು ಉಂಟು ಮಾಡಬೇಕೆಂದಿದ್ದರೆ ಅವನು ಈ ರೀತಿಯಾಗಿ ಕೊಲೆಯಾಗಬೇಕು. ಅವರ ಪ್ರವಾದನೆಯ ದಿನ ಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು. ಇದಲ್ಲದೆ ಇವರಿಗೆ ಇಷ್ಟ ಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹೊಡೆಯುವದಕ್ಕೂ ಅಧಿಕಾರ ಉಂಟು. ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದ ನಂತರ ತಳವಿಲ್ಲದ ತಗ್ಗಿನಿಂದ ಏರಿ ಬರುವ ಮೃಗವು ಇವರಿಗೆ ವಿರೋಧವಾಗಿ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು. ಇವರ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಆತ್ಮಿಕವಾಗಿ ಸೊದೋಮ್ ಎಂತಲೂ ಐಗುಪ್ತ ಎಂತಲೂ ಕರೆಯುವರು; ನಮ್ಮ ಕರ್ತನು ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟನು. ಆಗ ಪ್ರಜೆ ಕುಲ ಭಾಷೆ ಜನಾಂಗಗಳವರು ಸತ್ತುಹೋದ ಅವರ ಶವಗಳನ್ನು ಮೂರುವರೆ ದಿನಗಳು ನೋಡುವರು, ಸತ್ತುಹೋದ ಅವರ ಶವಗಳನ್ನು ಸಮಾಧಿಯಲ್ಲಿ ಇಡ ಗೊಡಿಸುವದಿಲ್ಲ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಾತ್ಮ ಬಂದು ಆ ಶವಗಳಲ್ಲಿ ಸೇರಲು ಅವು ಕಾಲೂರಿ ನಿಂತವು. ಅವರನ್ನು ನೋಡಿದವರಿಗೆ ಮಹಾ ಭಯವು ಹಿಡಿಯಿತು. ಆಮೇಲೆ ಅವರಿಗೆ--ಇಲ್ಲಿ ಮೇಲಕ್ಕೆ ಬನ್ನಿರಿ ಎಂದು ಹೇಳುವ ಪರಲೋಕದ ಮಹಾಶಬ್ದವನ್ನು ಅವರು ಕೇಳಿದರು. ಆಗ ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು; ಅವರ ಶತ್ರುಗಳು ಅವರನ್ನು ನೋಡಿದರು. ಅದೇ ತಾಸಿನಲ್ಲಿ ಮಹಾಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದ ಂಶವು ಬಿದ್ದು ಹೋಯಿತು; ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಹತರಾದರು ಉಳಿದವರು ಭಯ ಗ್ರಸ್ಥರಾಗಿ ಪರಲೋಕದ ದೇವರನ್ನು ಮಹಿಮೆ ಪಡಿಸಿದರು. ಎರಡನೆಯ ಆಪತ್ತು ಕಳೆದುಹೋಯಿತು; ಇಗೋ, ಮೂರನೆಯ ಆಪತ್ತು ಬೇಗನೆ ಬರುತ್ತದೆ. ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
- Isaiah 61:2–3 ಯೆಶಾಯ 61:2–3ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- John 16:20–22 ಯೋಹಾನನು 16:20–22ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು. ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ. ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
- Romans 15:9–12 ರೋಮಾಪುರದವರಿಗೆ 15:9–12ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು. ಆತನು ತಿರಿಗಿ--ಅನ್ಯಜನರೇ, ಆತನ ಜನರೊಂದಿಗೆ ಸಂತೋಷಿಸಿರಿ ಎಂದು ಹೇಳುತ್ತಾನೆ. ತಿರಿಗಿ--ಎಲ್ಲಾ ಅನ್ಯಜನರೇ, ಕರ್ತನನ್ನು ಸ್ತುತಿಸಿರಿ; ಎಲ್ಲಾ ಜನರೇ, ಆತನನ್ನು ಕೊಂಡಾಡಿರಿ ಅನ್ನುತ್ತಾನೆ. ತಿರಿಗಿ ಯೆಶಾಯನು--ಇಷಯನ ಅಂಕುರದವನು ಎದ್ದು ಅನ್ಯ ಜನಾಂಗಗಳ ಮೇಲೆ ಆಡಳಿತ ಮಾಡುವನು; ಅನ್ಯ ಜನರು ಆತನಲ್ಲಿ ನಂಬಿಕೆಯಿಡುವರು ಅಂದನು.