Isaiah · chapter 42 · verse 13
Isaiah 42:13 in Kannada
ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
Kartanu paraakrama shaaliyaagi munde hoguvanu; yuddha veerana haage tanna raudravannu ebbisu vanu; tanna shatrugalige virodhavaagi jaya shaaliyaaguvanu.
Isaiah 42:13 in English
- King James Version (KJV)
- The LORD shall go forth as a mighty man, he shall stir up jealousy like a man of war: he shall cry, yea, roar; he shall prevail against his enemies.
- World English Bible (WEB)
- The LORD will go out like a mighty man. He will stir up zeal like a man of war. He will raise a war cry. Yes, he will shout aloud. He will triumph over his enemies.
- American Standard Version (ASV)
- Jehovah will go forth as a mighty man; he will stir up [his] zeal like a man of war: he will cry, yea, he will shout aloud; he will do mightily against his enemies.
- Bible in Basic English (BBE)
- The Lord will go out as a man of war, he will be moved to wrath like a fighting-man: his voice will be strong, he will give a loud cry; he will go against his attackers like a man of war.
- Darby Translation (DBY)
- Jehovah will go forth as a mighty man, he will stir up jealousy like a man of war: he will cry, yea, he will shout; he will shew himself mighty against his enemies.
- Webster's Bible (WBS)
- The LORD will go forth as a mighty man, he will stir up jealousy like a man of war: he will cry, yes, roar; he will prevail against his enemies.
- Young's Literal Translation (YLT)
- Jehovah as a mighty one goeth forth. As a man of war He stirreth up zeal, He crieth, yea, He shrieketh, Against His enemies He showeth Himself mighty.
Read in context
- 11ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ,
- 12ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
- 13ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
- 14ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನುಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು ನಾನು ನಾಶಮಾಡಿ ಒಂದೇ ಸಾರಿ ನುಂಗಿಬಿಡುವೆನು.
- 15ನಾನು ಬೆಟ್ಟ ಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ, ನದಿ ಗಳನ್ನು ದ್ವೀಪಗಳನ್ನಾಗಿಯೂ ಕೆರೆಗಳನ್ನು ಬತ್ತಿ ಹೋಗುವಂತೆಯೂ ಮಾಡುವೆನು.
Cross references
- Exodus 15:1–3 ವಿಮೋಚನಕಾಂಡ 15:1–3ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ. ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು. ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು.
- Isaiah 59:16–19 ಯೆಶಾಯ 59:16–19ಯಾವ ಮನುಷ್ಯನೂ ಇಲ್ಲದೆ ಇರುವದನ್ನು ಆತನು ನೋಡಿ, ಮಧ್ಯಸ್ಥಗಾರನು ಇಲ್ಲವೆಂದು ಆಶ್ಚರ್ಯಪಟ್ಟನು; ಆಗ ಆತನ ಬಾಹು ತನಗೋಸ್ಕರ ರಕ್ಷಣೆಯನ್ನೂ ನೀತಿಯನ್ನೂ ತಂದಿತು. ಅದೇ ಆತನನ್ನು ಉದ್ಧಾರಮಾಡಿತು. ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು. ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು; ತನ್ನ ವೈರಿ ಗಳಿಗೆ ಕ್ರೋಧವನ್ನೂ ತನ್ನ ಶತ್ರುಗಳಿಗೂ ದ್ವೀಪಗ ಳಿಗೂ ಪ್ರತಿಫಲವನ್ನು ಸಲ್ಲಿಸುವನು. ಆಗ ಪಶ್ಚಿ ಮದ ಕಡೆಯವರು ಕರ್ತನ ಹೆಸರಿಗೂ ಸೂರ್ಯೋ ದಯದ ಕಡೆಯವರು ಆತನ ಘನಕ್ಕೂ ಭಯಪಡು ವರು. ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು.
- Psalm 78:65 ಕೀರ್ತನೆಗಳು 78:65ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,
- Psalm 110:5–6 ಕೀರ್ತನೆಗಳು 110:5–6ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು. ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- Zephaniah 3:8 ಚೆಫನ್ಯ 3:8ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು.
- Amos 1:2 ಆಮೋಸ 1:2ಅವನು ಹೇಳಿದ್ದೇನಂದರೆ--ಕರ್ತನು ಚೀಯೋನಿ ನಿಂದ ಘರ್ಜಿಸಿ ಯೆರೂಸಲೇಮಿನಿಂದ ತನ್ನ ಧ್ವನಿಗೈಯು ವನು; ಕುರುಬರ ವಾಸದ ಸ್ಥಳಗಳು ಗೋಳಾಡುತ್ತವೆ ಮತ್ತು ಕರ್ಮೆಲಿನ ತುದಿಯು ಒಣಗಿ ಹೋಗುತ್ತದೆ ಎಂದು ಹೇಳುತ್ತಾನೆ.
- Zephaniah 1:18 ಚೆಫನ್ಯ 1:18ಕರ್ತನ ರೌದ್ರದ ದಿನದಲ್ಲಿ ಅವರ ಬೆಳ್ಳಿಯಾದರೂ ಅವರ ಬಂಗಾರ ವಾದರೂ ಅವರನ್ನು ತಪ್ಪಿಸಲಾರವು; ಆತನ ಕೋಪದ ಬೆಂಕಿಯು ದೇಶವನ್ನೆಲ್ಲಾ ನುಂಗುವದು.
- Isaiah 26:11 ಯೆಶಾಯ 26:11ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.
- Isaiah 63:1–4 ಯೆಶಾಯ 63:1–4ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.
- Hosea 11:10 ಹೋಶೇಯ 11:10ಅವರು ಕರ್ತನ ಹಿಂದೆ ಹೋಗುವರು; ಆತನು ಸಿಂಹದ ಹಾಗೆ ಗರ್ಜಿಸುವನು; ಆತನು ಗರ್ಜಿಸುವಾಗ ಮಕ್ಕಳು ಪಶ್ಚಿಮದಿಂದ ನಡುಗಿಬರುವರು;
- Nahum 1:2 ನಹೂಮ 1:2ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
- Isaiah 31:4 ಯೆಶಾಯ 31:4ಕರ್ತನು ನನಗೆ ಹೀಗೆ ಹೇಳಿದ್ದಾನೆ -- ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರು ಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವದೋ ಹಾಗೆಯೇ ಸೈನ್ಯಗಳ ಕರ್ತನು ಚೀಯೋನ್ ಪರ್ವತ ಕ್ಕೋಸ್ಕರವೂ ಅದರ ಗುಡ್ಡಕ್ಕೋಸ್ಕರವೂ ಯುದ್ಧ ಮಾಡಲು ಇಳಿದು ಬರುವನು.