Isaiah · chapter 47 · verse 7
Isaiah 47:7 in Kannada
ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ.
Naanu shaashvatavaagi raaniyendu neenu andukondiddarinda ee sangatigalannu ninna hrudaya dallittukollalilla; illave avara antyavannu nenasa lilla.
Isaiah 47:7 in English
- King James Version (KJV)
- And thou saidst, I shall be a lady for ever: [so] that thou didst not lay these [things] to thy heart, neither didst remember the latter end of it.
- World English Bible (WEB)
- You said, ‘I will be a princess forever,’ so that you didn’t lay these things to your heart, nor did you remember the results.
- American Standard Version (ASV)
- And thou saidst, I shall be mistress for ever; so that thou didst not lay these things to thy heart, neither didst remember the latter end thereof.
- Bible in Basic English (BBE)
- And you said, I will be a queen for ever: you did not give attention to these things, and did not keep in mind what would come after.
- Darby Translation (DBY)
- and thou saidst, I shall be a mistress for ever; so that thou didst not take these things to heart, thou didst not remember the end thereof.
- Webster's Bible (WBS)
- And thou saidst, I shall be a lady for ever: [so] that thou didst not lay these [things] to thy heart, neither didst remember the latter end of it.
- Young's Literal Translation (YLT)
- And thou sayest, 'To the age I am mistress,' While thou hast not laid these things to thy heart, Thou hast not remembered the latter end of it.
Read in context
- 5ಓ ಕಸ್ದೀಯರ ಕುಮಾರಿಯೇ, ಮೌನ ವಾಗಿ ಕುಳಿತುಕೋ, ಕತ್ತಲೊಳಗೆ ಹೋಗು; ಯಾಕಂ ದರೆ ಇನ್ನು ಮೇಲೆ ನೀನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವದಿಲ್ಲ.
- 6ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ.
- 7ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ.
- 8ನಾನೇ ಇರುವವಳು ನನ್ನ ಹೊರತು ಇನ್ನು ಯಾರೂ ಇಲ್ಲ. ನಾನು ವಿಧವೆಯಾಗಿ ಕೂತುಕೊಳ್ಳು ವದಿಲ್ಲ; ಪುತ್ರಶೋಕವನ್ನು ಅನುಭವಿಸುವದಿಲ್ಲ ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿ ಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.
- 9ಒಂದೇ ದಿನದೊಳಗೆ ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವಾ ಸ್ಥಿತಿಯು ಇವೆರಡೂ ನಿನಗೆ ಬರುವವು; ನಿನ್ನ ಮಂತ್ರಗಳು ಬಹಳವಾಗಿರುವದ ರಿಂದಲೂ ನಿನ್ನ ಮಾಟಗಳು ಹೆಚ್ಚಾಗಿರುವದರಿಂದಲೂ ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವವು.
Cross references
- Deuteronomy 32:29 ಧರ್ಮೋಪದೇಶಕಾಂಡ 32:29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
- Isaiah 47:5 ಯೆಶಾಯ 47:5ಓ ಕಸ್ದೀಯರ ಕುಮಾರಿಯೇ, ಮೌನ ವಾಗಿ ಕುಳಿತುಕೋ, ಕತ್ತಲೊಳಗೆ ಹೋಗು; ಯಾಕಂ ದರೆ ಇನ್ನು ಮೇಲೆ ನೀನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವದಿಲ್ಲ.
- Jeremiah 5:31 ಯೆರೆಮೀಯ 5:31ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ?
- Ezekiel 29:3 ಯೆಹೆಜ್ಕೇಲನು 29:3ನೀನು ಮಾತನಾಡಿ ಹೇಳಬೇಕಾದ ದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಐಗುಪ್ತದ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು--ಈ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿ ಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟ ಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.
- Daniel 4:29 ದಾನಿಯೇಲನು 4:29ಹನ್ನೆರಡು ತಿಂಗಳಾದ ಮೇಲೆ ಅವನು ಬಾಬೆಲಿನ ರಾಜ್ಯದ ಅರಮನೆಯಲ್ಲಿ ತಿರುಗಾಡಿದನು.
- Ezekiel 7:3–9 ಯೆಹೆಜ್ಕೇಲನು 7:3–9ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು. ನನ್ನ ಕಣ್ಣುಗಳು ನಿನ್ನನ್ನು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸು ವದೂ ಇಲ್ಲ, ಆದರೆ ನಿನ್ನ ಮಾರ್ಗಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ, ನಿನ್ನ ಅಸಹ್ಯಗಳು ನಿನ್ನ ಮಧ್ಯೆ ಇರುವವು, ನಾನೇ ಕರ್ತನೆಂದು ನಿನಗೆ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು. ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು. ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ. ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು. ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.
- Isaiah 46:8–9 ಯೆಶಾಯ 46:8–9ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು, ನಿಮ್ಮನ್ನು ಮನುಷ್ಯರೆಂದು ತೋರಿಸಿರಿ, ಅದನ್ನು ತಿರುಗಿ ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ; ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಮತ್ತೊಬ್ಬನಿಲ್ಲ; ನಾನೇ ದೇವರು, ನನಗೆ ಸರಿಸಮಾ ನನು ಇಲ್ಲ.
- Ezekiel 28:2 ಯೆಹೆಜ್ಕೇಲನು 28:2ಮನುಷ್ಯಪುತ್ರನೇ, ತೂರಿನ ಪ್ರಭುವಿಗೆ ಹೇಳಬೇಕಾದದ್ದೇನಂದರೆ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಹೃದಯವು ಹೆಚ್ಚಿಸಲ್ಪಟ್ಟಿದ್ದರಿಂದ--ನಾನೇ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿ ರುವೆನೆಂದು ಹೇಳಿದ್ದರಿಂದ ನೀನು ದೇವರಲ್ಲ, ಮನು ಷ್ಯನೇ; ಆದರೂ ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡಿರುವೆ.
- Ezekiel 28:12–14 ಯೆಹೆಜ್ಕೇಲನು 28:12–14ಮನುಷ್ಯಪುತ್ರನೇ, ತೂರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು--ದೇವರಾದ ಕರ್ತನು ಹೀಗೆ ಹೇಳು ತ್ತಾನೆ, ಸಂಪೂರ್ಣ ಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ. ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು. ನೀನೇ ಮುಚ್ಚು ವಂತ ಅಭಿಷೇಕಿಸಲ್ಪಟ್ಟ ಕೆರೂಬಿಯು ದೇವರ ಪರಿಶುದ್ಧ ಪರ್ವತದಲ್ಲಿ ನಿನ್ನನ್ನು ಇಟ್ಟೆನು; ಅಲ್ಲೇ ನೀನಿದ್ದಿ, ಬೆಂಕಿಯ ಕಲ್ಲುಗಳ, ಮಧ್ಯದಲ್ಲಿ ನೀನು ಕೆಳಗೂ ಮೇಲಕ್ಕೂ ತಿರುಗಾಡಿದಿ.
- Daniel 5:18–23 ದಾನಿಯೇಲನು 5:18–23ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು. ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು. ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು; ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು. ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- Isaiah 42:25 ಯೆಶಾಯ 42:25ಆದದರಿಂದ ಆತನು ತನ್ನ ಯುದ್ದದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ ಅವನಿಗೆ ತಿಳಿಯಲಿಲ್ಲ; ಅದು ಅವನನ್ನು ಸುಟ್ಟರೂ ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.