Deuteronomy · chapter 32 · verse 29
Deuteronomy 32:29 in Kannada
ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
Avaru jnyaanavantaraagi idara vishaya buddhi tandukondu tamma kadekaalakkaagi grahikeyulla varaadare eshto olledu!
Deuteronomy 32:29 in English
- King James Version (KJV)
- O that they were wise, [that] they understood this, [that] they would consider their latter end!
- World English Bible (WEB)
- Oh that they were wise, that they understood this, that they would consider their latter end!
- American Standard Version (ASV)
- Oh that they were wise, that they understood this, That they would consider their latter end!
- Bible in Basic English (BBE)
- If only they were wise, if only this was clear to them, and they would give thought to their future!
- Darby Translation (DBY)
- Oh that they had been wise! they would have understood this, They would have considered their latter end!
- Webster's Bible (WBS)
- O that they were wise, [that] they understood this, [that] they would consider their latter end!
- Young's Literal Translation (YLT)
- If they were wise — They deal wisely [with] this; They attend to their latter end:
Read in context
- 27ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
- 28ಅವರು ಆಲೋಚನೆಯಿಲ್ಲದ ಜನಾಂಗವೇ; ಅವರಲ್ಲಿ ಗ್ರಹಿಕೆ ಇಲ್ಲ.
- 29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
- 30ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
- 31ನಮ್ಮ ಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
Cross references
- Psalm 81:13 ಕೀರ್ತನೆಗಳು 81:13ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
- Deuteronomy 5:29 ಧರ್ಮೋಪದೇಶಕಾಂಡ 5:29ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.
- Hosea 14:9 ಹೋಶೇಯ 14:9ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
- Luke 19:41–42 ಲೂಕನು 19:41–42ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು-- ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.
- Luke 12:20 ಲೂಕನು 12:20ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Psalm 107:43 ಕೀರ್ತನೆಗಳು 107:43ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
- Luke 16:19–25 ಲೂಕನು 16:19–25ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು. ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು. ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು. ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು. ಅವನು--ತಂದೆಯಾದ ಅಬ್ರಹಾ ಮನೇ, ನನ್ನ ಮೇಲೆ ಕರುಣೆ ಇಟ್ಟು ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡುವಂತೆ ಅವನನ್ನು ಕಳುಹಿಸು; ಯಾಕಂದರೆ ನಾನು ಈ ಉರಿಯಲ್ಲಿ ಯಾತನೆಪಡುತ್ತಾ ಇದ್ದೇನೆ ಎಂದು ಕೂಗಿ ಹೇಳಿದನು. ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.
- Isaiah 10:3 ಯೆಶಾಯ 10:3ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ?
- Isaiah 47:7 ಯೆಶಾಯ 47:7ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ.
- Isaiah 48:18–19 ಯೆಶಾಯ 48:18–19ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು; ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
- Lamentations 1:9 ಪ್ರಲಾಪಗಳು 1:9ಅವಳ ನೆರಿಗೆಯು ಅಶುದ್ಧವಾಗಿದೆ; ಅವಳು ತನ್ನ ಅಂತ್ಯವನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ; ಆದುದರಿಂದ ಅವಳು ಆಶ್ಚರ್ಯ ಕರವಾಗಿ ಇಳಿದು ಬಂದಳು; ಅವಳನ್ನು ಆದರಿಸುವವರು ಯಾರೂ ಇಲ್ಲ. ಓ ಕರ್ತನೇ, ನನ್ನ ಸಂಕಟವನ್ನು ನೋಡು, ಶತ್ರುವು ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
- Jeremiah 17:11 ಯೆರೆಮೀಯ 17:11ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿ ಕೊಳ್ಳುವ ಹಾಗೆ ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಇದ್ದಾನೆ; ಅವನು ತನ್ನ ಮದ್ಯ ಪ್ರಾಯದಲ್ಲಿ ಅದನ್ನು ಬಿಡುವನು; ತನ್ನ ಅಂತ್ಯದಲ್ಲಿ ಅವನು ಮೂರ್ಖನಾಗಿರುವನು.