Isaiah · chapter 49 · verse 18
Isaiah 49:18 in Kannada
ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ.
Ninna kannugalannu etti suttaloo nodu. Igo, ivarellaroo koodi kondu ninna balige baruttiddaare. Kartanu heluvadenandare--nanna jeevadaane, nishchayavaagi neenu avarannellaa aabharanagalante dharisikolluvi mattu neenu avarannu madalagittiyante katti kolluvi.
Isaiah 49:18 in English
- King James Version (KJV)
- Lift up thine eyes round about, and behold: all these gather themselves together, [and] come to thee. [As] I live, saith the LORD, thou shalt surely clothe thee with them all, as with an ornament, and bind them [on thee], as a bride [doeth].
- World English Bible (WEB)
- Lift up your eyes all around, and see: all these gather themselves together, and come to you. As I live,” says the LORD, “you shall surely clothe yourself with them all as with an ornament, and dress yourself with them, like a bride.
- American Standard Version (ASV)
- Lift up thine eyes round about, and behold: all these gather themselves together, and come to thee. As I live, saith Jehovah, thou shalt surely clothe thee with them all as with an ornament, and gird thyself with them, like a bride.
- Bible in Basic English (BBE)
- Let your eyes be lifted up round about, and see: they are all coming together to you. By my life, says the Lord, truly you will put them all on you as an ornament, and be clothed with them like a bride.
- Darby Translation (DBY)
- Lift up thine eyes round about and behold: they all gather themselves together, they come to thee. As I live, saith Jehovah, thou shalt indeed clothe thee with them all as with an ornament, and bind them on as a bride doth.
- Webster's Bible (WBS)
- Lift up thy eyes around, and behold: all these assemble themselves, [and] come to thee. [As] I live, saith the LORD, thou shalt surely clothe thee with them all, as with an ornament, and bind them [on thee] , as a bride [doeth] .
- Young's Literal Translation (YLT)
- Lift up round about thine eyes and see, All of them have been gathered, They have come to thee. I live, an affirmation of Jehovah! Surely all of them as an ornament thou puttest on, And thou bindest them on like a bride.
Read in context
- 16ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಕೆತ್ತಿಕೊಂಡಿದ್ದೇನೆ; ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
- 17ನಿನ್ನ ಮಕ್ಕಳು ತ್ವರೆಪಡುವರು; ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟುಹೋಗುವರು.
- 18ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ.
- 19ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು.
- 20ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು.
Cross references
- Isaiah 54:1–3 ಯೆಶಾಯ 54:1–3ಓ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವನ್ನೆತ್ತಿ ಗಟ್ಟಿಯಾಗಿ ಕೂಗು! ಮದುವೆ ಯಾದವಳಿಗಿಂತ ಆಗದವಳಿಗೆ ಮಕ್ಕಳು ಹೆಚ್ಚು ಎಂದು ಕರ್ತನು ಹೇಳುತ್ತಾನೆ. ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ನಿನ್ನ ನಿವಾಸದ ಪರದೆಗಳು ಹರಡಲಿ; ಹಿಂತೆ ಗೆಯಬೇಡ; ನಿನ್ನ ಹಗ್ಗಗಳನ್ನು ಉದ್ದ ಮಾಡಿ ಗೂಟ ಗಳನ್ನು ಬಲಪಡಿಸು. ನೀನು ಬಲಗಡೆಗೂ ಎಡ ಗಡೆಗೂ ಹಬ್ಬಿಕೊಳ್ಳುವಿ; ನಿನ್ನ ಸಂತಾನವು ಅನ್ಯ ಜನಾಂಗಗಳನ್ನು ವಶಪಡಿಸಿಕೊಂಡು ಹಾಳಾದ ಪಟ್ಟಣ ಗಳನ್ನು ನಿವಾಸವಾಗಮಾಡುವದು.
- Isaiah 66:12–13 ಯೆಶಾಯ 66:12–13ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ, ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ.
- Isaiah 61:10 ಯೆಶಾಯ 61:10ನಾನು ಕರ್ತನಲ್ಲಿ ಬಹಳವಾಗಿ ಸಂತೋಷಿ ಸುವೆನು; ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸ ಪಡುವದು; ಯಾಕಂದರೆ ಮದಲಿಂಗನು ಸೌಂದರ್ಯ ವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ ಮದಲ ಗಿತ್ತಿಯು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ ಆತನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ, ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವದೋ ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳಿಸುವದೋ ಹಾಗೆಯೇ ದೇವರಾದ ಕರ್ತನ ನೀತಿಯನ್ನೂ ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವನು.
- Isaiah 54:9 ಯೆಶಾಯ 54:9ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ.
- Isaiah 49:12 ಯೆಶಾಯ 49:12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
- Jeremiah 2:32 ಯೆರೆಮೀಯ 2:32ಯುವತಿಯು ತನ್ನ ಆಭರಣಗಳನ್ನೂ ಮದಲಗಿತ್ತಿಯು ತನ್ನ ಒಡ್ಯಾಣವನ್ನೂ ಮರೆತುಬಿಡುವಳೋ? ಆದಾಗ್ಯೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
- Isaiah 66:20 ಯೆಶಾಯ 66:20ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Isaiah 54:7 ಯೆಶಾಯ 54:7ಕ್ಷಣ ಮಾತ್ರಕ್ಕೆ ನಿನ್ನನ್ನು ನಾನು ಬಿಟ್ಟಿದ್ದೇನೆ; ಆದರೆ ಮಹಾ ಕೃಪೆಗಳೊಂದಿಗೆ ನಿನ್ನನ್ನು ನಾನು ಕೂಡಿಸುವೆನು.
- Isaiah 43:5–6 ಯೆಶಾಯ 43:5–6ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು. ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
- Jeremiah 31:8 ಯೆರೆಮೀಯ 31:8ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು.
- Galatians 3:28–29 ಗಲಾತ್ಯದವರಿಗೆ 3:28–29ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ. ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Isaiah 49:22 ಯೆಶಾಯ 49:22ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು.