Isaiah · chapter 5 · verse 23
Isaiah 5:23 in Kannada
ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ ಮತ್ತು ನೀತಿಯನ್ನು ನೀತಿವಂತನಿಂದ ತೆಗೆದುಹಾಕುವವರಿಗೂ ಅಯ್ಯೋ!
Lanchakkoskara dushtanannu neetivantanendu nirnayisi mattu neetiyannu neetivantaninda tegeduhaakuvavarigoo ayyo!
Isaiah 5:23 in English
- King James Version (KJV)
- Which justify the wicked for reward, and take away the righteousness of the righteous from him!
- World English Bible (WEB)
- who acquit the guilty for a bribe, but deny justice for the innocent!
- American Standard Version (ASV)
- that justify the wicked for a bribe, and take away the righteousness of the righteous from him!
- Bible in Basic English (BBE)
- Who for a reward give support to the cause of the sinner, and who take away the righteousness of the upright from him.
- Darby Translation (DBY)
- who justify the wicked for a bribe, and turn away the righteousness of the righteous from them!
- Webster's Bible (WBS)
- Who justify the wicked for reward, and take away the righteousness of the righteous from him!
- Young's Literal Translation (YLT)
- Declaring righteous the wicked for a bribe, And the righteousness of the righteous They turn aside from him.
Read in context
- 21ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳೂ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೂ ಆಗಿರುವವರಿಗೆ ಅಯ್ಯೋ!
- 22ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ
- 23ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ ಮತ್ತು ನೀತಿಯನ್ನು ನೀತಿವಂತನಿಂದ ತೆಗೆದುಹಾಕುವವರಿಗೂ ಅಯ್ಯೋ!
- 24ಅವರು ಸೈನ್ಯಗಳ ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದ್ದರಿಂದಲೂ ಇಸ್ರಾಯೇ ಲಿನ ಪರಿಶುದ್ಧನ ವಾಕ್ಯವನ್ನು ಅಸಡ್ಡೆಮಾಡಿದ್ದ ರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿಬಿಡುವ ಹಾಗೂ ಜ್ವಾಲೆಯು ಹೊಟ್ಟನ್ನು ಸುಟ್ಟುಬಿಡುವಂತೆಯೂ ಅದರ ಬೇರು ಕೊಳೆಯುವಂತೆಯೂ ಚಿಗುರು ಅವರ ಧೂಳಿನಂತೆಯೂ ತೂರಿಹೋಗುವವು.
- 25ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.
Cross references
- Isaiah 10:2 ಯೆಶಾಯ 10:2ಇವರು ವಿಧವೆಯರನ್ನು ಸೂರೆಮಾಡಿ ದಿಕ್ಕಿಲ್ಲದವರಿಂದ ಸುಲುಕೊಂಡು ದೀನರಿಗೆ ನ್ಯಾಯ ವನ್ನು ತಪ್ಪಿಸಿ ನನ್ನ ಬಡ ಜನರ ನ್ಯಾಯವನ್ನು ತೆಗೆಯ ಬೇಕೆಂದಿದ್ದಾರೆ.
- James 5:6 ಯಾಕೋಬನು 5:6ನೀತಿವಂತನಿಗೆ ದಂಡನೆಯನ್ನು ವಿಧಿಸಿ ಕೊಂದು ಹಾಕಿ ದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ.
- Psalm 94:21 ಕೀರ್ತನೆಗಳು 94:21ನೀತಿವಂತನ ಪ್ರಾಣಕ್ಕೆ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ನಿರಪರಾಧಿಯ ರಕ್ತವನ್ನು ಖಂಡಿಸುತ್ತಾರೆ.
- Proverbs 17:15 ಜ್ಞಾನೋಕ್ತಿಗಳು 17:15ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
- Proverbs 31:4–5 ಜ್ಞಾನೋಕ್ತಿಗಳು 31:4–5ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ; ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ.
- Isaiah 1:23 ಯೆಶಾಯ 1:23ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ.
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Micah 7:3 ಮೀಕ 7:3ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವ ಹಾಗೆ ಪ್ರಧಾನನೂ ನ್ಯಾಯಾಧಿಪತಿಯೂ ಬಹುಮಾನವನ್ನು ಕೇಳುತ್ತಾರೆ; ದೊಡ್ಡ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರು ಒಂದೇ ಕಟ್ಟಾಗಿದ್ದಾರೆ.
- Matthew 27:24–25 ಮತ್ತಾಯನು 27:24–25ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು. ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.
- Proverbs 24:24 ಜ್ಞಾನೋಕ್ತಿಗಳು 24:24ದುಷ್ಟನಿಗೆ--ನೀನು ನೀತಿವಂತನು ಎಂದು ಹೇಳುವವನನ್ನು ಜನರು ಶಪಿಸು ವರು, ಜನಾಂಗಗಳು ಅವನನ್ನು ಹೇಸಿಕೊಳ್ಳುವರು.
- Deuteronomy 16:19 ಧರ್ಮೋಪದೇಶಕಾಂಡ 16:19ನೀನು ನ್ಯಾಯವನ್ನು ಓರೆಮಾಡಬಾರದು,ನೀನು ಮುಖದಾಕ್ಷಿಣ್ಯ ಮಾಡಬಾರದು; ಇಲ್ಲವೆ ಲಂಚ ತೆಗೆದುಕೊಳ್ಳಬಾರದು; ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ ನೀತಿವಂತರ ಮಾತು ಗಳನ್ನು ಡೊಂಕುಮಾಡುತ್ತದೆ.
- Proverbs 17:23 ಜ್ಞಾನೋಕ್ತಿಗಳು 17:23ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.