Proverbs · chapter 31 · verse 4
Proverbs 31:4 in Kannada
ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
Draakshaarasavannu kudi yuvadu raajarige yogyavalla; o lemoo velane, adu arasarige beda; illave prabhuga lige kudiyuvadu hitavalla;
Proverbs 31:4 in English
- King James Version (KJV)
- [It is] not for kings, O Lemuel, [it is] not for kings to drink wine; nor for princes strong drink:
- World English Bible (WEB)
- It is not for kings, Lemuel, it is not for kings to drink wine, nor for princes to say, ‘Where is strong drink?’
- American Standard Version (ASV)
- It is not for kings, O Lemuel, it is not for kings to drink wine; Nor for princes [to say], Where is strong drink?
- Bible in Basic English (BBE)
- It is not for kings, O Lemuel, it is not for kings to take wine, or for rulers to say, Where is strong drink?
- Darby Translation (DBY)
- It is not for kings, Lemuel, it is not for kings to drink wine, nor for rulers [to say], Where is the strong drink?
- Webster's Bible (WBS)
- [It is] not for kings, O Lemuel, [it is] not for kings to drink wine; nor for princes strong drink:
- Young's Literal Translation (YLT)
- Not for kings, O Lemuel, Not for kings, to drink wine, And for princes a desire of strong drink.
Read in context
- 2ನನ್ನ ಮಗನೇ ಏನು? ನನ್ನ ಗರ್ಭಪುತ್ರನೇ ಏನು? ನನ್ನ ಪ್ರತಿಜ್ಞೆಯ ಮಗನೇ ಏನು?
- 3ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು, ಇಲ್ಲವೆ ಅರಸರನ್ನು ನಾಶಪಡಿಸುವ ದಾರಿಗಳಿಗೆ ತಿರುಗಬೇಡ.
- 4ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
- 5ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ.
- 6ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು.
Cross references
- Proverbs 20:1 ಜ್ಞಾನೋಕ್ತಿಗಳು 20:1ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.
- Isaiah 5:22 ಯೆಶಾಯ 5:22ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ
- Ecclesiastes 10:17 ಪ್ರಸಂಗಿ 10:17ಓ ದೇಶವೇ, ಶ್ರೇಷ್ಠರ ಮಗನು ನಿನ್ನ ಅರಸನಾದರೆ ಮತ್ತು ನಿನ್ನ ಪ್ರಭುಗಳು ತಕ್ಕಕಾಲಕ್ಕೆ ಸರಿಯಾಗಿ ಅಮಲಿಗಾಗಿ ಅಲ್ಲದೆ ಶಕ್ತಿಗಾಗಿ ಊಟ ಮಾಡಿದರೆ ನಿನಗೆ ಆಶೀರ್ವಾದವಾಗಲಿ.
- Hosea 4:11–12 ಹೋಶೇಯ 4:11–12ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ. ನನ್ನ ಜನರು ಮರದ ತುಂಡುಗಳಿಗೆ ಆಲೋಚನೆ ಕೇಳುತ್ತಾರೆ; ಅವರ ಕೋಲು ಅವರಿಗೆ ತಿಳಿಸುತ್ತದೆ. ವ್ಯಭಿಚಾರದ ಆತ್ಮಗಳು ಅವರನ್ನು ತಪ್ಪಿಸಿಬಿಟ್ಟಿದೆ; ಅವರು ತಮ್ಮ ದೇವರ ಕೈಕೆಳಗಿರದೆ ವ್ಯಭಿಚಾರ ಮಾಡಿದ್ದಾರೆ.
- Habakkuk 2:5 ಹಬಕ್ಕೂಕ 2:5ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
- 1 Kings 20:16–20 1 ಅರಸುಗಳು 20:16–20ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು. ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು. ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು. ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು.
- Mark 6:21–28 ಮಾರ್ಕನು 6:21–28ಹೀಗಿರಲಾಗಿ ಅನುಕೂಲವಾದ ಒಂದು ದಿನವು ಅಂದರೆ ಹೆರೋದನ ಹುಟ್ಟಿದ ದಿನದಲ್ಲಿ ಅವನು ತನ್ನ ಪ್ರಭುಗಳಿಗೂ ಸೈನ್ಯಾಧಿಪತಿಗಳಿಗೂ ಗಲಿಲಾಯದ ಪ್ರಮುಖರಿಗೂ ಔತಣವನ್ನು ಮಾಡಿಸಿದನು; ಆಗ ಆ ಹೆರೋದ್ಯಳ ಮಗಳು ಒಳಗೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಕೂತಿದ್ದವರನ್ನೂ ಮೆಚ್ಚಿಸಿದ್ದರಿಂದ ಅರಸನು ಆ ಹುಡುಗಿಗೆ--ನಿನಗೆ ಬೇಕಾದದ್ದನ್ನು ನನ್ನಿಂದ ಕೇಳಿಕೋ; ನಾನು ಅದನ್ನು ನಿನಗೆ ಕೊಡುತ್ತೇನೆ ಎಂದು ಹೇಳಿದನು. ಅವನು--ನೀನು ನನ್ನಿಂದ ಯಾವದನ್ನು ಕೇಳಿಕೊಂಡರೂ ಅಂದರೆ ಅದು ನನ್ನ ರಾಜ್ಯದಲ್ಲಿ ಅರ್ಧವಾಗಿದ್ದರೂ ನಾನು ನಿನಗೆ ಕೊಡುತ್ತೇನೆ ಎಂದು ಅವಳಿಗೆ ಆಣೆಯಿಟ್ಟು ಹೇಳಿದನು. ಆಗ ಅವಳು ಹೊರಟುಹೋಗಿ ತನ್ನ ತಾಯಿಗೆ--ನಾನು ಏನು ಕೇಳಿಕೊಳ್ಳಲಿ ಎಂದು ಕೇಳಲು ಅವಳು --ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಕೇಳಿಕೋ ಅಂದಳು. ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು-- ಬಾಪ್ತಿಸ್ಮಮಾಡಿಸುವ ಯೊಹಾನನ ತಲೆಯನ್ನು ನೀನು ಕೂಡಲೆ ಪರಾತಿನಲ್ಲಿ ನನಗೆ ಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಅಂದಳು. ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು. ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
- Hosea 7:3–5 ಹೋಶೇಯ 7:3–5ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ ಸುಳ್ಳುಗ ಳಿಂದ ಪ್ರಧಾನರನ್ನೂ ಸಂತೋಷಪಡಿಸುತ್ತಾರೆ. ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ. ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
- Isaiah 28:7–8 ಯೆಶಾಯ 28:7–8ಆದರೆ ಇವರು ಸಹ ದ್ರಾಕ್ಷಾರಸದಿಂದ ತಪ್ಪಿ ಮಧ್ಯದಿಂದ ಮೋಸಹೋಗಿದ್ದಾರೆ; ಯಾಜಕನೂ ಪ್ರವಾದಿಯೂ ಮದ್ಯದಿಂದ ತಪ್ಪಿ ದ್ರಾಕ್ಷಾರಸದ ವಶ ವಾಗಿದ್ದು ಮದ್ಯದಿಂದ ಮೋಸಹೋಗಿದ್ದಾರೆ; ದರ್ಶನ ದಲ್ಲಿ ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ. ಮೇಜುಗಳೆಲ್ಲಾ ಸ್ಥಳ ಉಳಿಯದ ಹಾಗೆ ಅಸಹ್ಯವಾದ ಕಕ್ಕುವಿಕೆಯಿಂದ ತುಂಬಿವೆ.
- Esther 3:15 ಎಸ್ತೇರಳು 3:15ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Leviticus 10:9–10 ಯಾಜಕಕಾಂಡ 10:9–10ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾ ಗಲಿ ಮದ್ಯಪಾನವನ್ನಾಗಲಿ ಕುಡಿದು ಸಭೆಯ ಗುಡಾರ ದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ನಿಮ್ಮ ವಂಶಾವಳಿಯು ಇರುವ ವರೆಗೂ ಇದು ಶಾಶ್ವತವಾಗಿ ರುವ ಕಟ್ಟಳೆಯಾಗಿದೆ. ನೀವು ಶುದ್ಧವಾದದ್ದಕ್ಕೂ ಅಶುದ್ಧವಾದದ್ದಕ್ಕೂ ಪವಿತ್ರವಾದದ್ದಕ್ಕೂ ಅಪವಿತ್ರ ವಾದದ್ದಕ್ಕೂ ವ್ಯತ್ಯಾಸವನ್ನು ತೋರಿಸುವದಕ್ಕಾಗಿಯೂ
- Daniel 5:2–4 ದಾನಿಯೇಲನು 5:2–4ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು. ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು. ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.