Isaiah · chapter 5 · verse 4
Isaiah 5:4 in Kannada
ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
Nanna draakshe totadalli naanu maadiddakkinta innoo hechchaagi adakke enu maadabekaagittu? Heegiralu adu olle draakshe phalavannu phalisuvadendu naanu nireekshisuttiralu adu kaaduhannannu kottiddu yaake?
Isaiah 5:4 in English
- King James Version (KJV)
- What could have been done more to my vineyard, that I have not done in it? wherefore, when I looked that it should bring forth grapes, brought it forth wild grapes?
- World English Bible (WEB)
- What could have been done more to my vineyard, that I have not done in it? Why, when I looked for it to yield grapes, did it yield wild grapes?
- American Standard Version (ASV)
- What could have been done more to my vineyard, that I have not done in it? wherefore, when I looked that it should bring forth grapes, brought it forth wild grapes?
- Bible in Basic English (BBE)
- Is there anything which might have been done for my vine-garden which I have not done? why then, when I was hoping for the best grapes did it give me common grapes?
- Darby Translation (DBY)
- What was there yet to do to my vineyard that I have not done in it? Wherefore, when I looked that it should bring forth grapes, brought it forth wild grapes? —
- Webster's Bible (WBS)
- What more could have been done to my vineyard, that I have not done in it? Why, when I expected that it would bring forth grapes, brought it forth wild grapes?
- Young's Literal Translation (YLT)
- What — to do still to my vineyard, That I have not done in it! Wherefore, I waited to the yielding of grapes, And it yieldeth bad ones!
Read in context
- 2ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು.
- 3ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.
- 4ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
- 5ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು.
- 6ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
Cross references
- Matthew 23:37 ಮತ್ತಾಯನು 23:37ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ
- Micah 6:3–4 ಮೀಕ 6:3–4ನನ್ನ ಜನರೇ, ನಾನು ನಿನಗೆ ಏನು ಮಾಡಿದ್ದೇನೆ? ಯಾವದರಿಂದ ನಿನಗೆ ಬೇಸರ ಮಾಡಿದ್ದೇನೆ? ನನಗೆ ವಿರೋಧವಾಗಿ ಸಾಕ್ಷಿಕೊಡು. ನಾನು ಐಗುಪ್ತದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸರ ಮನೆಯೊಳಗಿಂದ ನಿನ್ನನ್ನು ವಿಮೋ ಚಿಸಿ, ಮೋಶೆಯನ್ನೂ ಆರೋನನನ್ನೂ ಮಿರಿಯಾಮ ಳನ್ನೂ ನಿನ್ನ ಮುಂದೆ ಕಳುಹಿಸಿದೆನು.
- Acts 7:51–60 ಅಪೊಸ್ತಲರ ಕೃತ್ಯಗಳು 7:51–60ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ. ದೇವದೂತರ ಮೂಲಕ ನೇಮಕವಾದ ನ್ಯಾಯ ಪ್ರಮಾಣವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸಲಿಲ್ಲ ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಅವರು ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಅವನ ಮೇಲೆ ಹಲ್ಲುಕಡಿದರು. ಆದರೆ ಅವನು ಪವಿತ್ರಾತ್ಮಭರಿತನಾಗಿ ಪರಲೋಕ ದೊಳಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು-- ಆಗೋ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರು ವದನ್ನೂ ನಾನು ನೋಡುತ್ತೇನೆ ಎಂದು ಹೇಳಿದನು. ಆದರೆ ಅವರು ಮಹಾಶಬ್ದದಿಂದ ಕೂಗಿ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಒಮ್ಮನಸ್ಸಿನಿಂದ ಅವನ ಮೇಲೆ ಬಿದ್ದು ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು. ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು--ಕರ್ತನಾದ ಯೇಸುವೇ, ನನ್ನಾತ್ಮವನ್ನು ಸೇರಿ ಸಿಕೋ ಎಂದು ದೇವರನ್ನು ಪ್ರಾರ್ಥಿಸಿ,ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು. ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.
- Jeremiah 2:5 ಯೆರೆಮೀಯ 2:5ಕರ್ತನು ಹೀಗೆ ಹೇಳುತ್ತಾನೆ, ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ ವ್ಯರ್ಥವಾಗುವ ಹಾಗೆ ನನ್ನಲ್ಲಿ ಯಾವ ಅಕ್ರಮವನ್ನು ಕಂಡಿದ್ದಾರೆ?
- Ezekiel 24:13 ಯೆಹೆಜ್ಕೇಲನು 24:13ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ.
- Jeremiah 6:29–30 ಯೆರೆಮೀಯ 6:29–30ತಿದಿಯು ಸುಡುತ್ತದೆ, ಬೆಂಕಿಯೊಳಗಿಂದ ಸೀಸವು ಕರಗುತ್ತದೆ; ಪುಟಕ್ಕೆ ಹಾಕುವವನು ವ್ಯರ್ಥವಾಗಿ ಹಾಕುತ್ತಾನೆ; ಕೆಟ್ಟವರು ಕಿತ್ತು ತೆಗೆಯಲ್ಪಡಲಿಲ್ಲ;ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ. ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ.
- Jeremiah 2:30–31 ಯೆರೆಮೀಯ 2:30–31ನಾನು ನಿಮ್ಮ ಮಕ್ಕಳನ್ನು ಹೊಡೆದದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತಕ್ಕೊಳ್ಳಲಿಲ್ಲ. ನಿಮ್ಮ ಸ್ವಂತ ಕತ್ತಿಯು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ. ಓ ಸಂತತಿಯೇ, ನೀವು ಕರ್ತನ ವಾಕ್ಯವನ್ನು ನೋಡಿರಿ; ನಾನು ಇಸ್ರಾಯೇಲಿನ ಅರಣ್ಯವಾ ದೆನೋ? ಕತ್ತಲೆಯ ದೇಶವಾದೆನೋ? ಯಾತಕ್ಕೆ ನನ್ನ ಜನರು--ನಾವು ಪ್ರಭುಗಳು, ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವದಿಲ್ಲ ಎಂದು ಹೇಳುತ್ತಾರೆ.
- Isaiah 1:5 ಯೆಶಾಯ 1:5ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
- 2 Chronicles 36:14–16 2 ಪೂರ್ವಕಾಲವೃತ್ತಾಂತ 36:14–16ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.