Isaiah · chapter 5 · verse 6
Isaiah 5:6 in Kannada
ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
Adannu naanu haalaagalu biduvenu: adannu yaaroo kudi kattarisuvadilla; ageyuvadoo illa. Aadare alli mullupodegalu beleyuvavu; allade adara mele male surisabaaradendu modagalige aajnyaa pisuvenu.
Isaiah 5:6 in English
- King James Version (KJV)
- And I will lay it waste: it shall not be pruned, nor digged; but there shall come up briers and thorns: I will also command the clouds that they rain no rain upon it.
- World English Bible (WEB)
- I will lay it a wasteland. It won’t be pruned or hoed, but it will grow briers and thorns. I will also command the clouds that they rain no rain on it.”
- American Standard Version (ASV)
- and I will lay it waste; it shall not be pruned nor hoed; but there shall come up briers and thorns: I will also command the clouds that they rain no rain upon it.
- Bible in Basic English (BBE)
- And I will make it waste; its branches will not be touched with the knife, or the earth worked with the spade; but blackberries and thorns will come up in it: and I will give orders to the clouds not to send rain on it.
- Darby Translation (DBY)
- and I will make it a waste — it shall not be pruned nor cultivated, but there shall come up briars and thorns; and I will command the clouds that they rain no rain upon it.
- Webster's Bible (WBS)
- And I will lay it waste: it shall not be pruned, nor digged; but there shall come up briers and thorns: I will also command the clouds that they rain no rain upon it.
- Young's Literal Translation (YLT)
- And I make it a waste, It is not pruned, nor arranged, And gone up have brier and thorn, And on the thick clouds I lay a charge, From raining upon it rain.
Read in context
- 4ನನ್ನ ದ್ರಾಕ್ಷೇ ತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಹೀಗಿರಲು ಅದು ಒಳ್ಳೇ ದ್ರಾಕ್ಷೇ ಫಲವನ್ನು ಫಲಿಸುವದೆಂದು ನಾನು ನಿರೀಕ್ಷಿಸುತ್ತಿರಲು ಅದು ಕಾಡುಹಣ್ಣನ್ನು ಕೊಟ್ಟಿದ್ದು ಯಾಕೆ?
- 5ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು.
- 6ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
- 7ಸೈನ್ಯಗಳ ಕರ್ತನ ದ್ರಾಕ್ಷೇ ತೋಟವು ಇಸ್ರಾಯೇಲಿನ ಮನೆಯೇ, ಯೆಹೂದದ ಜನವೋ, ಆತನ ಇಷ್ಟದ ಗಿಡವೇ. ಆತನು ನ್ಯಾಯವನ್ನು ನಿರೀ ಕ್ಷಿಸಲು, ಇಗೋ, ಹಿಂಸೆಯೇ; ನೀತಿಯನ್ನು ನಿರೀಕ್ಷಿಸಲು ಗೋಳಾಟವೇ ಸಿಕ್ಕೀತು.
- 8ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!
Cross references
- Isaiah 7:23–25 ಯೆಶಾಯ 7:23–25ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು. ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ; ಆದರೆ ಅದು ಎತ್ತುಗಳನ್ನು ಬಿಡುವದಕ್ಕೂ ಚಿಕ್ಕ ಕರುಗಳು ತುಳಿದಾಡುವದಕ್ಕೂ ಎಡೆಯಾಗುವದು. ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ; ಆದರೆ ಅದು ಎತ್ತುಗಳನ್ನು ಬಿಡುವದಕ್ಕೂ ಚಿಕ್ಕ ಕರುಗಳು ತುಳಿದಾಡುವದಕ್ಕೂ ಎಡೆಯಾಗುವದು.
- Jeremiah 25:11 ಯೆರೆಮೀಯ 25:11ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು.
- Isaiah 24:1–3 ಯೆಶಾಯ 24:1–3ಇಗೋ, ಕರ್ತನು ಭೂಮಿಯನ್ನು (ಲೋಕವನ್ನು) ಬರಿದುಮಾಡಿ ನಿರ್ಜನ ಪ್ರದೇಶ ವನ್ನಾಗಿ ಮಾಡಿ ತಲೆಕೆಳಕಾಗಿ ತಿರುಗಿಸಿ ಅದರ ನಿವಾಸಿ ಗಳನ್ನು ಚದರಿಸಿಬಿಡುವವನಾಗಿದ್ದಾನೆ. ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು. ಭೂಮಿಯು ಬರಿದೇ ಬರಿದಾಗುವದು ಮತ್ತು ಸಂಪೂರ್ಣ ಸುಲಿಗೆಯಾಗು ವದು. ಕರ್ತನು ತಾನೇ ಈ ಮಾತನ್ನು ಹೇಳಿದ್ದಾನೆ.
- Isaiah 24:12 ಯೆಶಾಯ 24:12ಪಟ್ಟಣ ದಲ್ಲಿ ಹಾಳೇ ಉಳಿದಿವೆ; ನಾಶನವು ಹೆಬ್ಬಾಗಿಲಿಗೆ ತಟ್ಟಿದೆ.
- Deuteronomy 28:23–24 ಧರ್ಮೋಪದೇಶಕಾಂಡ 28:23–24ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು. ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು.
- Hebrews 6:6–8 ಇಬ್ರಿಯರಿಗೆ 6:6–8ಅವರಲ್ಲಿ ತಿರಿಗಿ ಮಾನಸಾಂತರವನ್ನು ಹುಟ್ಟಿಸುವದು ಅಸಾಧ್ಯ; ಯಾಕಂದರೆ ಅವರು ತಮ್ಮ ಪಾಲಿಗೆ ದೇವರ ಮಗನನ್ನು ಪುನಃ ಶಿಲುಬೆಗೆ ಹಾಕುವವರೂ ಆತನನ್ನು ಬಹಿರಂಗ ವಾಗಿ ಅವಮಾನಪಡಿಸುವವರೂ ಆಗಿದ್ದಾರೆ. ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ ಅವರಿಗೆ ಅನುಕೂಲ ವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಹೊಂದುತ್ತದೆ; ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.
- Deuteronomy 29:23 ಧರ್ಮೋಪದೇಶಕಾಂಡ 29:23ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
- Isaiah 6:11–12 ಯೆಶಾಯ 6:11–12ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ ಕರ್ತನು ಮನುಷ್ಯರನ್ನು ದೂರಮಾಡುವ ವರೆಗೂ ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವ ವರೆಗೂ ಅದು ಇರುವುದು;ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- Isaiah 32:13–14 ಯೆಶಾಯ 32:13–14ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು. ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
- Jeremiah 14:22 ಯೆರೆಮೀಯ 14:22ಅನ್ಯರ ವ್ಯರ್ಥ ವಿಗ್ರಹಗಳಲ್ಲಿ ಮಳೆ ಕೊಡಬಲ್ಲವು ಗಳು ಉಂಟೋ? ಅಥವಾ ಆಕಾಶವು ಜಡಿ ಮಳೆ ಯನ್ನು ಕೊಡುವದಕ್ಕಾಗುವದೋ? ನಮ್ಮ ದೇವ ರಾಗಿರುವ ಕರ್ತನು ನೀನೇ ಅಲ್ಲವೋ? ಆದದರಿಂದ ನಿನ್ನನ್ನು ನಿರೀಕ್ಷಿಸುವೆವು; ನೀನೇ ಇವುಗಳನ್ನೆಲ್ಲಾ ಮಾಡುತ್ತೀ.
- Leviticus 26:33–35 ಯಾಜಕಕಾಂಡ 26:33–35ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು. ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು. ನೀವು ಅದರಲ್ಲಿ ವಾಸವಾಗಿದ್ದಾಗ ನಿಮ್ಮ ಸಬ್ಬತ್ತುಗಳಲ್ಲಿ ಅದಕ್ಕೆ ವಿಶ್ರಾಂತಿ ದೊರೆಯದ ಕಾರಣ ಅದು ಹಾಳುಬಿದ್ದಿರುವ ಕಾಲವೆಲ್ಲಾ ಅನುಭವಿಸುವದು.
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.