Isaiah · chapter 64 · verse 2
Isaiah 64:2 in Kannada
ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!
Benki kattigeyannu hottisuvanteyoo benki neerannu ukkisuvanteyoo ninna hesaru ninna vairigalige tiliyuvanteyoo maadu!
Isaiah 64:2 in English
- King James Version (KJV)
- As [when] the melting fire burneth, the fire causeth the waters to boil, to make thy name known to thine adversaries, [that] the nations may tremble at thy presence!
- World English Bible (WEB)
- as when fire kindles the brushwood, and the fire causes the water to boil. Make your name known to your adversaries, that the nations may tremble at your presence!
- American Standard Version (ASV)
- as when fire kindleth the brushwood, [and] the fire causeth the waters to boil; to make thy name known to thine adversaries, that the nations may tremble at thy presence!
- Bible in Basic English (BBE)
- As when fire puts the brushwood in flames, or as when water is boiling from the heat of the fire: to make your name feared by your haters, so that the nations may be shaking before you;
- Darby Translation (DBY)
- — as fire kindleth brushwood, as the fire causeth water to boil, to make thy name known to thine adversaries, that the nations might tremble at thy presence!
- Webster's Bible (WBS)
- [As when] the melting fire burneth, the fire causeth the waters to boil, to make thy name known to thy adversaries, [that] the nations may tremble at thy presence!
- Young's Literal Translation (YLT)
- (As fire kindleth stubble — Fire causeth water to boil,) To make known Thy name to Thine adversaries, From Thy presence do nations tremble.
Read in context
- 1ಆಹಾ, ನೀನು ಆಕಾಶಗಳನ್ನು ಹರಿದು ಬಿಟ್ಟು, ಇಳಿದು ಬಂದಿದ್ದರೆ ಎಷ್ಟೋ ಚೆನ್ನಾ ಗಿತ್ತು! ಬಾ! ಬೆಟ್ಟಗಳು ನಿನ್ನ ಸಮ್ಮುಖದಲ್ಲಿ ಕರಗಲಿ! ಜನಾಂಗಗಳು ನಿನ್ನ ಸಮ್ಮುಖದಲ್ಲಿ ನಡುಗುವ ಹಾಗೆ,
- 2ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!
- 3ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
- 4ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
Cross references
- Psalm 99:1 ಕೀರ್ತನೆಗಳು 99:1ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
- Jeremiah 33:9 ಯೆರೆಮೀಯ 33:9ಅದು ನನಗೆ ಆನಂದದ ಹೆಸರೂ ನಾನು ಅವರಿಗೆ ಒಳ್ಳೇದನ್ನೆಲ್ಲಾ ಮಾಡುವದನ್ನು ಕೇಳುವ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳ ಮುಂದೆ ಸ್ತೋತ್ರವೂ ಮಹಿಮೆಯೂ ಆಗುವದು; ನಾನು ಅದಕ್ಕೆ ಉಂಟು ಮಾಡುವ ಮೇಲಿಗಾಗಿಯೂ ಎಲ್ಲಾ ಅಭಿವೃದ್ಧಿಗಾಗಿಯೂ ಅವರು ಹೆದರಿ ನಡುಗುವರು.
- Daniel 4:32–37 ದಾನಿಯೇಲನು 4:32–37ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು. ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು. ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು. ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು. ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು. ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Daniel 6:25–27 ದಾನಿಯೇಲನು 6:25–27ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ. ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು. ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
- Exodus 14:4 ವಿಮೋಚನಕಾಂಡ 14:4ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು.
- Psalm 102:15–16 ಕೀರ್ತನೆಗಳು 102:15–16ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು. ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು.
- Ezekiel 38:22–23 ಯೆಹೆಜ್ಕೇಲನು 38:22–23ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು. ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.
- Jeremiah 5:22 ಯೆರೆಮೀಯ 5:22ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು.
- Isaiah 37:20 ಯೆಶಾಯ 37:20ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು.
- Psalm 46:10 ಕೀರ್ತನೆಗಳು 46:10ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Psalm 67:1–2 ಕೀರ್ತನೆಗಳು 67:1–2ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ. ಆಗ ನಿನ್ನ ಮಾರ್ಗವೂ ನಿನ್ನ ರಕ್ಷಣೆಯ ಸ್ವಸ್ಥತೆಯೂ, ಭೂಮಿಯಲ್ಲಿ, ಎಲ್ಲಾ ಜನಾಂಗಗಳಿಗೆ ತಿಳಿಯಲ್ಪಡು ವದು.
- Psalm 98:1–2 ಕೀರ್ತನೆಗಳು 98:1–2ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಆತನು ಅದ್ಭುತಗಳನ್ನು ಮಾಡಿದ್ದಾನೆ; ಆತನ ಬಲಗೈಯೂ ಪರಿಶುದ್ಧತೋಳೂ ಆತನಿಗೆ ಜಯ ವನ್ನು ತಂದಿವೆ. ರ್ತನು ತನ್ನ ರಕ್ಷಣೆಯನ್ನು ತಿಳಿಯ ಮಾಡಿದ್ದಾನೆ; ತನ್ನ ನೀತಿಯನ್ನು ಜನಾಂಗಗಳ ದೃಷ್ಟಿಗೆ ಬಹಿರಂಗವಾಗಿ ಪ್ರಕಟಮಾಡಿದ್ದಾನೆ.