Isaiah · chapter 64 · verse 4
Isaiah 64:4 in Kannada
ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
Devare, ninagoskara kaadukolluvavanige neenu maadu vadannu, lokada utpattige munche ninna hora taagi yaaroo kelalilla illave yaara kivi yalliyoo beelalilla, yaara kannu nodalilla.
Isaiah 64:4 in English
- King James Version (KJV)
- For since the beginning of the world [men] have not heard, nor perceived by the ear, neither hath the eye seen, O God, beside thee, [what] he hath prepared for him that waiteth for him.
- World English Bible (WEB)
- For from of old men have not heard, nor perceived by the ear, nor has the eye seen a God besides you, who works for him who waits for him.
- American Standard Version (ASV)
- For from of old men have not heard, nor perceived by the ear, neither hath the eye seen a God besides thee, who worketh for him that waiteth for him.
- Bible in Basic English (BBE)
- The ear has not had news of, or the eye seen, ... any God but you, working for the man who is waiting for him.
- Darby Translation (DBY)
- Never have [men] heard, nor perceived by the ear, nor hath eye seen a God beside thee, who acteth for him that waiteth for him.
- Webster's Bible (WBS)
- For since the beginning of the world [men] have not heard, nor perceived by the ear, neither hath the eye seen, O God, besides thee, [what] he hath prepared for him that waiteth for him.
- Young's Literal Translation (YLT)
- Even from antiquity [men] have not heard, They have not given ear, Eye hath not seen a God save Thee, He doth work for those waiting for Him.
Read in context
- 2ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ ಬೆಂಕಿ ನೀರನ್ನು ಉಕ್ಕಿಸುವಂತೆಯೂ ನಿನ್ನ ಹೆಸರು ನಿನ್ನ ವೈರಿಗಳಿಗೆ ತಿಳಿಯುವಂತೆಯೂ ಮಾಡು!
- 3ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
- 4ದೇವರೇ, ನಿನಗೋಸ್ಕರ ಕಾದುಕೊಳ್ಳುವವನಿಗೆ ನೀನು ಮಾಡು ವದನ್ನು, ಲೋಕದ ಉತ್ಪತ್ತಿಗೆ ಮುಂಚೆ ನಿನ್ನ ಹೊರ ತಾಗಿ ಯಾರೂ ಕೇಳಲಿಲ್ಲ ಇಲ್ಲವೆ ಯಾರ ಕಿವಿ ಯಲ್ಲಿಯೂ ಬೀಳಲಿಲ್ಲ, ಯಾರ ಕಣ್ಣು ನೋಡಲಿಲ್ಲ.
- 5ಸಂತೋಷಪಟ್ಟು ನೀತಿಯನ್ನು ಕೈಕೊಳ್ಳುವವನನ್ನೂ ನಿನ್ನ ಮಾರ್ಗಗಳಲ್ಲಿ ನಿನ್ನನ್ನು ಜ್ಞಾಪಕಮಾಡುವವ ನನ್ನೂ ನೀನು ಎದುರುಗೊಳ್ಳುತ್ತೀ; ಇಗೋ, ನೀನು ರೌದ್ರನಾಗಿರುವಿ, ಯಾಕಂದರೆ ನಾವು ರಕ್ಷಿಸಲ್ಪಡದ ಹಾಗೆ ಪಾಪದಲ್ಲಿ ಮುಂದುವರಿದೆವು.
- 6ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
Cross references
- 1 Corinthians 2:9–10 1 ಕೊರಿಂಥದವರಿಗೆ 2:9–10ಆದರೆ ಬರೆದಿರುವ ಪ್ರಕಾರ--ದೇವರು ತನ್ನನ್ನು ಪ್ರೀತಿಸು ವವರಿಗಾಗಿ ಸಿದ್ಧಮಾಡಿರುವಂಥವುಗಳನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಇಲ್ಲವೆ ಅವು ಮನುಷ್ಯನ ಹೃದಯದಲ್ಲಿ ಸೇರಲಿಲ್ಲ. ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅವುಗಳನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ಹೌದು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸು ವವನಾಗಿದ್ದಾನೆ.
- Psalm 31:19 ಕೀರ್ತನೆಗಳು 31:19ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
- James 5:7 ಯಾಕೋಬನು 5:7ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.
- Isaiah 25:9 ಯೆಶಾಯ 25:9ಆ ದಿನದಲ್ಲಿ (ಜನರು) ಹೇಳುವದೇನಂದರೆ--ಇಗೋ, ಈತನೇ ನಮ್ಮ ದೇವರು, ನಾವು ಈತನಿ ಗೋಸ್ಕರ ಕಾದಿದ್ದೇವೆ; ಈತನು ನಮ್ಮನ್ನು ರಕ್ಷಿಸುವನು. ಈತನೇ ಕರ್ತನು, ನಾವು ಈತನಿಗೋಸ್ಕರ ಕಾದಿ ದ್ದೇವೆ; ನಾವು ಈತನ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷ ಪಡುವೆವು.
- Colossians 1:26–27 ಕೊಲೊಸ್ಸೆಯವರಿಗೆ 1:26–27ಆ ವಾಕ್ಯವು ಹಿಂದಿನ ಯುಗಗಳಿಂದಲೂ ತಲಾತಲಾಂತರಗಳಿಂದಲೂ ಮರೆ ಯಾಗಿತ್ತು; ಅದು ಈಗಿನ ಕಾಲದಲ್ಲಿ ಆತನ ಪರಿಶುದ್ಧರಿಗೆ ತಿಳಿಸಲ್ಪಟ್ಟಿದೆ; ಅನ್ಯಜನಗಳಲ್ಲಿ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬದನ್ನು ದೇವರು ತನ್ನ ಜನರಿಗೆ (ಪರಿಶುದ್ಧರಿಗೆ) ತಿಳಿಸುವದಕ್ಕೆ ಮನಸ್ಸು ಮಾಡಿ ಕೊಂಡನು. ಈ ಮರ್ಮವು ಏನೆಂದರೆ ನಿಮ್ಮಲ್ಲಿರುವ ಕ್ರಿಸ್ತನು ಮಹಿಮೆಯ ನಿರೀಕ್ಷೆಯಾಗಿದ್ದಾನೆ ಎಂಬದೇ.
- Psalm 130:5 ಕೀರ್ತನೆಗಳು 130:5ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.
- Genesis 49:18 ಆದಿಕಾಂಡ 49:18ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ.
- Ephesians 3:17–21 ಎಫೆಸದವರಿಗೆ 3:17–21ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು ಪರಿಶುದ್ಧರೆಲ್ಲ ರೊಂದಿಗೆ ಅದರ ಅಗಲ ಉದ್ದ ಆಳ ಮತ್ತು ಎತ್ತರವನ್ನು ಗ್ರಹಿಸುವಂತೆಯೂ ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ. ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್. ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.
- Lamentations 3:25–26 ಪ್ರಲಾಪಗಳು 3:25–26ಕರ್ತನು ತನಗಾಗಿ ಕಾಯುವವನಿಗೂ ಹುಡುಕುವ ಪ್ರಾಣಕ್ಕೂ ಒಳ್ಳೆಯವನಾಗಿದ್ದಾನೆ. ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು.
- Isaiah 30:18 ಯೆಶಾಯ 30:18ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸ ಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
- 1 John 3:1–2 1 ಯೋಹಾನನು 3:1–2ಇಗೋ, ನಾವು ದೇವರ ಪುತ್ರರೆಂದು ಕರೆಯಲ್ಪಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ; ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳು ವದಿಲ್ಲ; ಯಾಕಂದರೆ ಅದು ಆತನನ್ನು ತಿಳಿದು ಕೊಳ್ಳಲಿಲ್ಲ. ಪ್ರಿಯರೇ, ನಾವು ಈಗ ದೇವರ ಪುತ್ರರಾಗಿದ್ದೇವೆ, ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಆತನು ಪ್ರತ್ಯಕ್ಷ ನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು.
- John 14:3 ಯೋಹಾನನು 14:3ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.