Isaiah · chapter 9 · verse 16
Isaiah 9:16 in Kannada
ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.
Ee janarannu nadisu vavaru daaritappisuvavaraagiddaare; avarinda nadi salpattavaru naashavaagiddaare.
Isaiah 9:16 in English
- King James Version (KJV)
- For the leaders of this people cause [them] to err; and [they that are] led of them [are] destroyed.
- World English Bible (WEB)
- For those who lead this people lead them astray; and those who are led by them are destroyed.
- American Standard Version (ASV)
- For they that lead this people cause them to err; and they that are led of them are destroyed.
- Bible in Basic English (BBE)
- For the guides of this people are the cause of their wandering from the right way, and those who are guided by them come to destruction.
- Darby Translation (DBY)
- For the guides of this people mislead [them]; and they that are guided by them are swallowed up.
- Webster's Bible (WBS)
- For the leaders of this people cause [them] to err; and [they that are] led by them [are] destroyed.
- Young's Literal Translation (YLT)
- And the eulogists of this people are causing to err, And its eulogised ones are consumed.
Read in context
- 14ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
- 15ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು.
- 16ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.
- 17ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
- 18ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.
Cross references
- Isaiah 3:12 ಯೆಶಾಯ 3:12ನನ್ನ ಪ್ರಜೆಗಳನ್ನೋ ಹುಡುಗರು ಅವರನ್ನು ಭಾಧಿಸುವರು, ಅವರನ್ನು ಆಳುವವರು ಹೆಂಗಸರು. ಓ ನನ್ನ ಪ್ರಜೆಗಳೇ, ನಿಮ್ಮನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆ ಯುವ ದಾರಿಯನ್ನು ಹಾಳುಮಾಡಿದ್ದಾರೆ.
- Matthew 15:14 ಮತ್ತಾಯನು 15:14ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
- Matthew 23:16–36 ಮತ್ತಾಯನು 23:16–36ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ. ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ. ಆದರೂ--ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತದಲ್ಲಿ ಅವರೊಂದಿಗೆ ಪಾಲುಗಾರರಾಗುತ್ತಿರಲಿಲ್ಲ ಎಂದು ಹೇಳುತ್ತೀರಿ. ಆದದರಿಂದ ನೀವು ಆ ಪ್ರವಾದಿ ಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. ಹಾಗಾದರೆ ನಿಮ ಪಿತೃಗಳ ಅಳತೆಯನ್ನು ನೀವೇ ತುಂಬಿಸಿರಿ. ಹಾವು ಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆ ಯಿಂದ ಹೇಗೆ ತಪ್ಪಿಸಿಕೊಂಡೀರಿ? ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು. ನಿಮಗೆ ನಿಜವಾಗಿ ಹೇಳು ತ್ತೇನೆ--ಇವೆಲ್ಲವುಗಳು ಈ ಸಂತತಿಯವರ ಮೇಲೆ ಬರುವವು.
- Numbers 6:23–26 ಅರಣ್ಯಕಾಂಡ 6:23–26ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು. ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
- 1 Kings 8:55–56 1 ಅರಸುಗಳು 8:55–56ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರ ಹೇಳಿದ ಎಲ್ಲಾ ಉತ್ತಮವಾದ ಮಾತು ಗಳಲ್ಲಿ ಒಂದು ಮಾತಾದರೂ ಬಿದ್ದು ಹೋದದ್ದಿಲ್ಲ.
- Hebrews 7:7 ಇಬ್ರಿಯರಿಗೆ 7:7ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
- 2 Chronicles 30:27 2 ಪೂರ್ವಕಾಲವೃತ್ತಾಂತ 30:27ಆಗ ಲೇವಿಯರಾದ ಯಾಜಕರೂ ಎದ್ದು ಜನರನ್ನು ಆಶೀರ್ವದಿಸಿದರು. ಅವರ ಶಬ್ದವು ಕೇಳಲ್ಪಟ್ಟಿತು. ಅವರ ಪ್ರಾರ್ಥನೆಯು ಆತನ ಪರಿಶುದ್ಧವಾದ ನಿವಾಸಸ್ಥಾನಕ್ಕೆ ಅಂದರೆ ಪರಲೋಕಕ್ಕೆ ಮುಟ್ಟಿತು.