James · chapter 1 · verse 2
James 1:2 in Kannada
ನನ್ನ ಸಹೋದರರೇ, ನೀವು ನಾನಾವಿಧವಾದ ಸಂಕಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದ ಕರವಾದದ್ದೆಂದು ಎಣಿಸಿರಿ.
Nanna sahodarare, neevu naanaavidhavaada sankatagalalli biddiruvaaga adannu kevala aananda karavaadaddendu enisiri.
James 1:2 in English
- King James Version (KJV)
- My brethren, count it all joy when ye fall into divers temptations;
- World English Bible (WEB)
- Count it all joy, my brothers, when you fall into various temptations,
- American Standard Version (ASV)
- Count it all joy, my brethren, when ye fall into manifold temptations;
- Bible in Basic English (BBE)
- Let it be all joy to you, my brothers, when you undergo tests of every sort;
- Darby Translation (DBY)
- Count it all joy, my brethren, when ye fall into various temptations,
- Webster's Bible (WBS)
- My brethren, count it all joy when ye fall into divers temptations.
- Young's Literal Translation (YLT)
- All joy count [it], my brethren, when ye may fall into temptations manifold;
Read in context
- 1ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬ ನು ಅನ್ಯದೇಶಗಳಲ್ಲಿ ಚದರಿರುವ (ಇಸ್ರಾಯೇಲ್) ಹನ್ನೆರಡು ಗೋತ್ರದವರಿಗೆ ವಂದನೆ.
- 2ನನ್ನ ಸಹೋದರರೇ, ನೀವು ನಾನಾವಿಧವಾದ ಸಂಕಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದ ಕರವಾದದ್ದೆಂದು ಎಣಿಸಿರಿ.
- 3ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ.
- 4ಆ ತಾಳ್ಮೆಯು ಸಿದ್ದಿಗೆ ಬಂದಾಗ ನೀವು ಸಂಪೂರ್ಣರೂ ಸಿದ್ಧವಾದವರೂ ಯಾವದರ ಲ್ಲಿಯೂ ಕಡಿಮೆಯಿಲ್ಲದವರೂ ಆಗಿರುವಿರಿ.
Cross references
- 1 Peter 1:6–8 1 ಪೇತ್ರನು 1:6–8ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವ ರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು. ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
- James 1:12 ಯಾಕೋಬನು 1:12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು;
- 2 Corinthians 12:9–10 2 ಕೊರಿಂಥದವರಿಗೆ 12:9–10ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
- Matthew 5:10–12 ಮತ್ತಾಯನು 5:10–12ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- Luke 6:22–23 ಲೂಕನು 6:22–23ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು. ಆ ದಿನದಲ್ಲಿ ನೀವು ಸಂತೋಷ ಪಡಿರಿ. ಉಲ್ಲಾಸದಿಂದ ಕುಣಿದಾಡಿರಿ; ಯಾಕಂದರೆ ಇಗೋ, ಪರಲೋಕದಲ್ಲಿ ನಿಮ್ಮ ಬಹುಮಾನವು ದೊಡ್ಡದು; ಅವರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.
- Philippians 1:29 ಫಿಲಿಪ್ಪಿಯವರಿಗೆ 1:29ಹೇಗೆಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ಆತನ ಪರವಾಗಿ ನಿಮಗೆ ಅನುಗ್ರಹವಾಗಿ ದೊರೆಯಿತು.ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನಲ್ಲಿರುವದೆಂದು ನೀವು ಕೇಳುವಂಥ ಹೋರಾಟವೇ ನಿಮಗುಂಟು.
- 2 Peter 2:9 2 ಪೇತ್ರನು 2:9ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Romans 8:17–18 ರೋಮಾಪುರದವರಿಗೆ 8:17–18ಮಕ್ಕಳಾ ಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತ ನೊಂದಿಗೆ ಸಹ ಬಾಧ್ಯರು; ಆತನೊಂದಿಗೆ ಶ್ರಮೆ ಯನ್ನನುಭವಿಸುವದಾದರೆ ಒಟ್ಟಾಗಿ ನಾವು ಸಹ ಮಹಿಮೆಯನ್ನು ಹೊಂದುವೆವು. ನಮ್ಮಲ್ಲಿ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಈಗಿನ ಕಾಲದ ಶ್ರಮೆಗಳನ್ನು ಹೋಲಿಸುವದು ಯೋಗ್ಯ ವಲ್ಲವೆಂದು ನಾನು ಎಣಿಸುತ್ತೇನೆ.
- Revelation 2:10 ಪ್ರಕಟನೆ 2:10ನಿನ್ನನ್ನು ಸಂಕಟಪಡಿಸುವವುಗಳಲ್ಲಿ ಯಾವ ದಕ್ಕೂ ಹೆದರಬೇಡ. ಇಗೋ, ನೀವು ಶೋಧಿಸಲ್ಪಡು ವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವನು; ಹತ್ತು ದಿವಸಗಳ ತನಕ ನಿಮಗೆ ಸಂಕಟವಿ ರುವದು. ನೀನು ಸಾಯಬೇಕಾದರೂ ನಂಬಿಗಸ್ತ ನಾಗಿರು; ನಾನು ನಿನಗೆ
- Colossians 1:24 ಕೊಲೊಸ್ಸೆಯವರಿಗೆ 1:24ನಾನು ಈಗ ನಿಮಗೋಸ್ಕರ ಅನುಭವಿ ಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟ ಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸು ತ್ತೇನೆ.
- Romans 8:35–37 ರೋಮಾಪುರದವರಿಗೆ 8:35–37ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- 1 Peter 4:13–16 1 ಪೇತ್ರನು 4:13–16ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ. ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ. ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನನುಭವಿಸ ಬಾರದು. ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.