Jeremiah · chapter 14 · verse 13
Jeremiah 14:13 in Kannada
ಆಗ ನಾನು--ಹಾ, ದೇವರಾದ ಕರ್ತನೇ, ಇಗೋ, ಪ್ರವಾದಿಗಳು ಅವರಿಗೆ--ನೀವು ಕತ್ತಿಯನ್ನು ನೋಡುವದಿಲ್ಲ, ನಿಮಗೆ ಕ್ಷಾಮವು ಬಾರದು, ಆದರೆ ಕರ್ತನು ನಿಮಗೆ ಈ ಸ್ಥಳದಲ್ಲಿ ಸ್ಥಿರ ಸಮಾಧಾನ ಕೊಡುತ್ತಾನೆಂದು ಹೇಳುತ್ತಾರೆ ಅಂದೆನು.
Aaga naanu--haa, devaraada kartane, igo, pravaadigalu avarige--neevu kattiyannu noduvadilla, nimage kshaamavu baaradu, aadare kartanu nimage ee sthaladalli sthira samaadhaana koduttaanendu heluttaare andenu.
Jeremiah 14:13 in English
- King James Version (KJV)
- Then said I, Ah, Lord GOD! behold, the prophets say unto them, Ye shall not see the sword, neither shall ye have famine; but I will give you assured peace in this place.
- World English Bible (WEB)
- Then I said, “Ah, Lord GOD! Behold, the prophets tell them, ‘You will not see the sword, neither will you have famine; but I will give you assured peace in this place.’”
- American Standard Version (ASV)
- Then said I, Ah, Lord Jehovah! behold, the prophets say unto them, Ye shall not see the sword, neither shall ye have famine; but I will give you assured peace in this place.
- Bible in Basic English (BBE)
- Then I said, Ah, Lord God! see, the prophets say to them, You will not see the sword or be short of food; but I will give you certain peace in this place.
- Darby Translation (DBY)
- And I said, Alas, Lord Jehovah! Behold, the prophets say unto them, Ye shall not see the sword, neither shall ye have famine; for I will give you assured peace in this place.
- Webster's Bible (WBS)
- Then said I, Ah Lord GOD! behold, the prophets say to them, Ye shall not see the sword, neither shall ye have famine; but I will give you assured peace in this place.
- Young's Literal Translation (YLT)
- And I say, 'Ah, Lord Jehovah, Lo, the prophets are saying to them: Ye do not see a sword, yea, famine is not to you, For true peace I give to you in this place.'
Read in context
- 11ಆಗ ಕರ್ತನು ನನಗೆ ಈ ಜನರಿಗೋಸ್ಕರ ಒಳ್ಳೇದಕ್ಕಾಗಿ ಪ್ರಾರ್ಥನೆ ಮಾಡಬೇಡ;
- 12ಅವರು ಉಪವಾಸ ಮಾಡಿದಾಗ್ಯೂ ನಾನು ಅವರ ಮೊರೆಯನ್ನು ಕೇಳುವದಿಲ್ಲ; ಅವರು ದಹನಬಲಿಗಳನ್ನೂ ಕಾಣಿಕೆಗಳನ್ನೂ ಅರ್ಪಿಸಿದಾಗ್ಯೂ ನಾನು ಅವರನ್ನು ಅಂಗೀಕರಿಸುವದಿಲ್ಲ; ಆದರೆ ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಅವರನ್ನು ನಿರ್ಮೂಲ ಮಾಡಿಬಿಡುತ್ತೇನೆ ಎಂದು ಹೇಳಿದನು.
- 13ಆಗ ನಾನು--ಹಾ, ದೇವರಾದ ಕರ್ತನೇ, ಇಗೋ, ಪ್ರವಾದಿಗಳು ಅವರಿಗೆ--ನೀವು ಕತ್ತಿಯನ್ನು ನೋಡುವದಿಲ್ಲ, ನಿಮಗೆ ಕ್ಷಾಮವು ಬಾರದು, ಆದರೆ ಕರ್ತನು ನಿಮಗೆ ಈ ಸ್ಥಳದಲ್ಲಿ ಸ್ಥಿರ ಸಮಾಧಾನ ಕೊಡುತ್ತಾನೆಂದು ಹೇಳುತ್ತಾರೆ ಅಂದೆನು.
- 14ಆಗ ಕರ್ತನು ನನಗೆ ಹೇಳಿದ್ದೇನಂದರೆ --ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿ ಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ; ಅವ ರಿಗೆ ಆಜ್ಞೆ ಕೊಡಲಿಲ್ಲ; ಅವರ ಸಂಗಡ ಮಾತಾಡ ಲಿಲ್ಲ; ಸುಳ್ಳಿನ ದರ್ಶನವನ್ನೂ ಶಕುನವನ್ನೂ ಶೂನ್ಯ ವನ್ನೂ ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.
- 15ಆದದರಿಂದ ಕರ್ತನು ತಾನು ಕಳುಹಿಸದೆ ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು ಈ ದೇಶದಲ್ಲಿ ಕತ್ತಿಯೂ ಬರವೂ ಇರುವದಿಲ್ಲವೆಂದು ಹೇಳುವಂಥ ಪ್ರವಾದಿಗಳನ್ನು ಕುರಿತು ಹೇಳುವದೇನಂದರೆ--ಕತ್ತಿ ಯಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ.
Cross references
- Jeremiah 6:14 ಯೆರೆಮೀಯ 6:14ಸಮಾಧಾನ ವಿಲ್ಲದಿರುವಾಗ--ಸಮಾಧಾನ ಎಂದು ಹೇಳಿ ನನ್ನ ಜನರ ಕುಮಾರ್ತೆಯ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ.
- 2 Peter 2:1 2 ಪೇತ್ರನು 2:1ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು. ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂ ತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ
- Jeremiah 23:17 ಯೆರೆಮೀಯ 23:17ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ.
- Jeremiah 4:10 ಯೆರೆಮೀಯ 4:10ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Jeremiah 8:11 ಯೆರೆಮೀಯ 8:11ಅವರು ನನ್ನ ಜನರ ಮಗಳ ಗಾಯವನ್ನು ಸ್ವಲ್ಪವಾಗಿ ಸ್ವಸ್ಥಮಾಡಿ ಸಮಾಧಾನವಿಲ್ಲದಿರುವಾಗ--ಸಮಾಧಾನ, ಸಮಾ ಧಾನ ಎಂದನ್ನುತ್ತಾರೆ. ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?
- Jeremiah 5:12 ಯೆರೆಮೀಯ 5:12ಕರ್ತನನ್ನು ಸುಳ್ಳುಗಾರ ನನ್ನಾಗಿ ಮಾಡಿ ಅವರು--ಆತನು ಅಂಥವನಲ್ಲ; ನಮ್ಮ ಮೇಲೆ ಕೇಡುಬಾರದು; ಇಲ್ಲವೆ ಕತ್ತಿಯನ್ನಾದರೂ ಬರವನ್ನಾದರೂ ನಾವು ನೋಡುವದಿಲ್ಲ.
- Jeremiah 28:2–5 ಯೆರೆಮೀಯ 28:2–5ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ. ಎರಡು ವರುಷದೊಳ ಗಾಗಿ ನಾನು ಬಾಬೆಲಿನ ಅರಸನಾದ ನೆಬೂಕ ದ್ನೆಚ್ಚರನು ಈ ಸ್ಥಳದಿಂದ ತಕ್ಕೊಂಡು ಬಾಬೆಲಿಗೆ ಒಯ್ದ ಕರ್ತನ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು. ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು. ಆಗ ಪ್ರವಾದಿಯಾದ ಯೆರೆವಿಾಯನು ಯಾಜಕರ ಮುಂದೆಯೂ ಕರ್ತನ ಆಲಯದಲ್ಲಿ ನಿಂತಿರುವ ಜನರೆಲ್ಲರ ಮುಂದೆಯೂ ಪ್ರವಾದಿಯಾದ ಹನನ್ಯ ನಿಗೆ ಹೇಳಿದ್ದೇನಂದರೆ--
- Ezekiel 13:22 ಯೆಹೆಜ್ಕೇಲನು 13:22ನಾನು ಯಾವನನ್ನು ದುಃಖಪಡಿಸಲಿಲ್ಲವೋ ಆ ನೀತಿವಂತನ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿ ದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
- Ezekiel 13:10–16 ಯೆಹೆಜ್ಕೇಲನು 13:10–16ಸಮಾಧಾನ ವಿಲ್ಲದಿರುವಾಗ ಅವರು ಸಮಾಧಾನವೆಂದು ಹೇಳಿದ್ದರಿಂ ದಲೂ ಮತ್ತು ಇಗೋ, ಒಬ್ಬನು ಗೋಡೆಯನ್ನು ಕಟ್ಟಿದರೆ ಮತ್ತೊಬ್ಬನು ಅದಕ್ಕೆ ಸುಣ್ಣ ಹಚ್ಚಿದ್ದರಿಂದಲೂ ಸುಣ್ಣ ಹಚ್ಚುತ್ತಿರುವವನಿಗೆ--ಅದು ಬೀಳುವದೆಂದು ಹೇಳು; ಅಲ್ಲಿ ವಿಪರೀತ ಮಳೆ ಬರುವದು ಮತ್ತು ದೊಡ್ಡ ಕಲ್ಮಳೆಯು ಬೀಳುವದು; ಬಿರುಗಾಳಿಯು ಅದನ್ನು ಸೀಳಿಬಿಡುವದು. ಇಗೋ, ಗೋಡೆ ಬಿದ್ದು ಹೋದಮೇಲೆ--ನೀವು ಹಚ್ಚಿದ ಸುಣ್ಣ ಎಲ್ಲಿ ಎಂದು ನಿಮಗೆ ಹೇಳುವರಲ್ಲಾ? ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅದನ್ನು ನನ್ನ ಉರಿಯಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶ ಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳೂ ಸುರಿಯುವವು; ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ ನೆಲಸಮ ಮಾಡಿ ಅದರ ಅಸ್ತಿವಾರ ವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವದು, ನೀವು ಅದರಲ್ಲಿ ನಾಶ ಮಾಡಲ್ಪಡು ವಿರಿ. ಆಗ ನಾನೇ ಕರ್ತನೆಂದು ನಿಮಗೆ ತಿಳಿದು ಬರುವದು. ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿ ಕೊಂಡು ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇಲ್ಲವೆಂದು ಯೆರೂಸಲೇಮಿನ ವಿಷಯ ಪ್ರವಾದಿಸಿ ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ನಿಮಗೆ ಇಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 5:31 ಯೆರೆಮೀಯ 5:31ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ?
- Jeremiah 1:6 ಯೆರೆಮೀಯ 1:6ಆಗ ನಾನು--ಹಾ! ಕರ್ತನಾದ ದೇವರೇ ಇಗೋ, ನಾನು ಮಾತನಾಡಲಾರೆನು, ನಾನು ಚಿಕ್ಕವನು ಅಂದೆನು.