Jeremiah · chapter 12 · verse 3
Jeremiah 12:3 in Kannada
ಓ ಕರ್ತನೇ, ನೀನು ನನ್ನನ್ನು ತಿಳಿದಿದ್ದೀ; ನನ್ನನ್ನು ನೋಡಿ ನನ್ನ ಹೃದಯವು ನಿನ್ನ ಕಡೆಗೆ ಶೋಧಿಸಿದ್ದೀ; ಕೊಲೆಗೆ ಕುರಿಗಳಂತೆ ಅವ ರನ್ನು ಎಳೆದುಬಿಡು, ಸಂಹಾರದ ದಿನಕ್ಕೆ ಅವರನ್ನು ಸಿದ್ಧಮಾಡು.
O kartane, neenu nannannu tilididdee; nannannu nodi nanna hrudayavu ninna kadege shodhisiddee; kolege kurigalante ava rannu eledubidu, sanhaarada dinakke avarannu siddhamaadu.
Jeremiah 12:3 in English
- King James Version (KJV)
- But thou, O LORD, knowest me: thou hast seen me, and tried mine heart toward thee: pull them out like sheep for the slaughter, and prepare them for the day of slaughter.
- World English Bible (WEB)
- But you, LORD, know me. You see me, and test my heart toward you. Pull them out like sheep for the slaughter, and prepare them for the day of slaughter.
- American Standard Version (ASV)
- But thou, O Jehovah, knowest me; thou seest me, and triest my heart toward thee: pull them out like sheep for the slaughter, and prepare them for the day of slaughter.
- Bible in Basic English (BBE)
- But you, O Lord, have knowledge of me; you see me, searching and testing how my heart is with you: let them be pulled out like sheep to be put to death, make them ready for the day of death.
- Darby Translation (DBY)
- But thou, Jehovah, knowest me; thou hast seen me, and proved my heart toward thee. Drag them out like sheep for the slaughter, and set them apart for the day of slaughter.
- Webster's Bible (WBS)
- But thou, O LORD, knowest me: thou hast seen me, and tried my heart towards thee: pull them out like sheep for the slaughter, and prepare them for the day of slaughter.
- Young's Literal Translation (YLT)
- And Thou, O Jehovah, Thou hast known me, Thou seest me, and hast tried my heart with Thee, Draw them away as sheep to slaughter, And separate them for a day of slaughter.
Read in context
- 1ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.
- 2ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.
- 3ಓ ಕರ್ತನೇ, ನೀನು ನನ್ನನ್ನು ತಿಳಿದಿದ್ದೀ; ನನ್ನನ್ನು ನೋಡಿ ನನ್ನ ಹೃದಯವು ನಿನ್ನ ಕಡೆಗೆ ಶೋಧಿಸಿದ್ದೀ; ಕೊಲೆಗೆ ಕುರಿಗಳಂತೆ ಅವ ರನ್ನು ಎಳೆದುಬಿಡು, ಸಂಹಾರದ ದಿನಕ್ಕೆ ಅವರನ್ನು ಸಿದ್ಧಮಾಡು.
- 4ದೇಶವು ಅದರ ನಿವಾಸಿಗಳ ಕೆಟ್ಟತನ ಕ್ಕಾಗಿ ದುಃಖಿಸುವದೂ ಎಲ್ಲಾ ಹೊಲಗಳ ಹುಲ್ಲು ಒಣಗುವದೂ ಎಷ್ಟರ ಮಟ್ಟಿಗೆ? ಮೃಗಗಳೂ ಪಕ್ಷಿಗಳೂ ನಾಶವಾಗುತ್ತವೆ; ಅವರು--ಒಬ್ಬರೂ ನಮ್ಮ ಅಂತ್ಯವನ್ನು ನೋಡುವದಿಲ್ಲ ಎಂದು ಅಂದುಕೊಂಡಿದ್ದಾರೆ.
- 5ಕಾಲಾ ಳುಗಳ ಸಂಗಡ ಓಡುವಾಗ ನಿನಗೆ ಆಯಾಸವಾದರೆ ಕುದುರೆಗಳ ಸಂಗಡ ಹೇಗೆ ಹೋರಾಡುವಿ? ನೀನು ಭರವಸವಿಟ್ಟಿರುವ ಸಮಾಧಾನದ ದೇಶದಲ್ಲಿ ಅವರು ನಿನ್ನನ್ನು ಆಯಾಸಪಡಿಸಿದರೆ ಯೊರ್ದನ್ ದಡವಿಾರು ವಾಗ ಏನು ಮಾಡುವಿ?
Cross references
- 2 Kings 20:3 2 ಅರಸುಗಳು 20:3ಓ ಕರ್ತನೇ, ನಾನು ಸತ್ಯದಿಂದಲೂ ಪೂರ್ಣಹೃದಯದಿಂದಲೂ ನಿನ್ನ ಮುಂದೆ ನಡೆದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂದು ನೆನಸು ಅಂದನು. ಹಿಜ್ಕೀಯನು ಬಹಳವಾಗಿ ಅತ್ತನು.
- Jeremiah 17:18 ಯೆರೆಮೀಯ 17:18ನನ್ನನ್ನು ಹಿಂಸಿಸುವವರು ನಾಚಿಕೆ ಪಡಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲುಪಡಲಿ; ಆದರೆ ನಾನು ದಿಗಿಲುಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡು, ಎರಡರಷ್ಟು ಅವರನ್ನು ನಾಶಪಡಿಸು.
- Psalm 139:1–4 ಕೀರ್ತನೆಗಳು 139:1–4ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ; ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ; ನಾನು ನಡೆಯುವದನ್ನೂ ಮಲಗುವದನ್ನೂ ನೀನು ಶೋಧಿಸಿದ್ದೀ; ನನ್ನ ಮಾರ್ಗಗಳೆಲ್ಲಾ ನಿನಗೆ ಗೊತ್ತಾಗಿವೆ. ಇಗೋ, ಓ ಕರ್ತನೇ, ನನ್ನ ನಾಲಿಗೆಯಲ್ಲಿ ನಿನಗೆ ತಿಳಿಯದ ಮಾತು ಒಂದಾದರೂ ಇಲ್ಲ.
- James 5:5 ಯಾಕೋಬನು 5:5ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.
- Psalm 17:3 ಕೀರ್ತನೆಗಳು 17:3ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.
- Psalm 139:23 ಕೀರ್ತನೆಗಳು 139:23ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು.
- Psalm 26:1 ಕೀರ್ತನೆಗಳು 26:1ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
- Jeremiah 50:27 ಯೆರೆಮೀಯ 50:27ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು.
- Psalm 44:21–22 ಕೀರ್ತನೆಗಳು 44:21–22ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ. ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ.
- Jeremiah 11:19–20 ಯೆರೆಮೀಯ 11:19–20ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ. ಆದರೆ ನೀತಿಯಿಂದ ನ್ಯಾಯತೀರಿಸು ವಂಥ ಅಂತರಿಂದ್ರಿಯಗಳನ್ನೂ ಹೃದಯವನ್ನೂ ಶೋಧಿಸುವಂಥ ಸೈನ್ಯಗಳ ಕರ್ತನೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ನಿನಗೆ ನನ್ನ ವ್ಯಾಜ್ಯವನ್ನು ಪ್ರಕಟಮಾಡಿದ್ದೇನೆ.
- 1 John 3:20–21 1 ಯೋಹಾನನು 3:20–21ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವ ನಾಗಿದ್ದಾನೆ. ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಖಂಡಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಭರವಸ ವುಂಟು.
- 1 Chronicles 29:17 1 ಪೂರ್ವಕಾಲವೃತ್ತಾಂತ 29:17ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು.