Jeremiah · chapter 12 · verse 7
Jeremiah 12:7 in Kannada
ನನ್ನ ಮನೆಯನ್ನು ಬಿಟ್ಟಿದ್ದೇನೆ, ಸ್ವಾಸ್ತ್ಯವನ್ನು ತ್ಯಜಿಸಿದ್ದೇನೆ; ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.
Nanna maneyannu bittiddene, svaastyavannu tyajisiddene; nanna praanakke ati priyavaadavalannu avala shatrugala kaiyalli oppisiddene.
Jeremiah 12:7 in English
- King James Version (KJV)
- I have forsaken mine house, I have left mine heritage; I have given the dearly beloved of my soul into the hand of her enemies.
- World English Bible (WEB)
- “I have forsaken my house. I have cast off my heritage. I have given the dearly beloved of my soul into the hand of her enemies.
- American Standard Version (ASV)
- I have forsaken my house, I have cast off my heritage; I have given the dearly beloved of my soul into the hand of her enemies.
- Bible in Basic English (BBE)
- I have given up my house, I have let my heritage go; I have given the loved one of my soul into the hands of her haters.
- Darby Translation (DBY)
- I have forsaken my house, I have cast off my heritage, I have given the beloved of my soul into the hand of her enemies.
- Webster's Bible (WBS)
- I have forsaken my house, I have left my heritage; I have given the dearly beloved of my soul into the hand of her enemies.
- Young's Literal Translation (YLT)
- I have forsaken My house, I have left Mine inheritance, I have given the beloved of My soul Into the hand of her enemies.
Read in context
- 5ಕಾಲಾ ಳುಗಳ ಸಂಗಡ ಓಡುವಾಗ ನಿನಗೆ ಆಯಾಸವಾದರೆ ಕುದುರೆಗಳ ಸಂಗಡ ಹೇಗೆ ಹೋರಾಡುವಿ? ನೀನು ಭರವಸವಿಟ್ಟಿರುವ ಸಮಾಧಾನದ ದೇಶದಲ್ಲಿ ಅವರು ನಿನ್ನನ್ನು ಆಯಾಸಪಡಿಸಿದರೆ ಯೊರ್ದನ್ ದಡವಿಾರು ವಾಗ ಏನು ಮಾಡುವಿ?
- 6ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.
- 7ನನ್ನ ಮನೆಯನ್ನು ಬಿಟ್ಟಿದ್ದೇನೆ, ಸ್ವಾಸ್ತ್ಯವನ್ನು ತ್ಯಜಿಸಿದ್ದೇನೆ; ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.
- 8ನನ್ನ ಸ್ವಾಸ್ತ್ಯವು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು, ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದದರಿಂದ ಅದನ್ನು ಹಗೆಮಾಡಿದ್ದೇನೆ.
- 9ನನ್ನ ಸ್ವಾಸ್ತ್ಯವು ನನಗೆ ಚಿತ್ರ ವರ್ಣದ ಪಕ್ಷಿಯಾಯಿತು. ಸುತ್ತಲಾಗಿ ಪಕ್ಷಿಗಳು ಅದಕ್ಕೆ ವಿರೋಧವಾಗಿವೆ; ಬನ್ನಿ, ಹೊಲದ ಮೃಗಗಳ ನ್ನೆಲ್ಲಾ ಕೂಡಿಸಿರಿ, ತಿನ್ನುವದಕ್ಕೆ ಅವುಗಳನ್ನು ತನ್ನಿರಿ;
Cross references
- Psalm 78:59–60 ಕೀರ್ತನೆಗಳು 78:59–60ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು, ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
- Isaiah 2:6 ಯೆಶಾಯ 2:6ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ.
- Jeremiah 11:15 ಯೆರೆಮೀಯ 11:15ನನ್ನ ಪ್ರಿಯಳಿಗೆ ನನ್ನ ಮನೆಯಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡಿಸಿದ್ದಾಳೆ; ಪರಿಶುದ್ಧ ಮಾಂಸವು ನಿನ್ನನ್ನು ಬಿಟ್ಟು ಹೋಯಿತು; ನೀನು ಕೆಟ್ಟತನ ಮಾಡುವಾಗ ಉಲ್ಲಾಸ ಪಡುತ್ತೀ.
- Lamentations 2:1–22 ಪ್ರಲಾಪಗಳು 2:1–22ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ! ಕರ್ತನು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾನೆ; ಯೆಹೂದದ ಮಗಳ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿಹಾಕಿ ದ್ದಾನೆ; ಆತನು ಅವುಗಳನ್ನು ನೆಲ ಸಮ ಮಾಡಿದ್ದಾನೆ; ಆತನು ರಾಜ್ಯವನ್ನೂ ಪ್ರಭುಗಳನ್ನೂ ಅಪವಿತ್ರ ಮಾಡಿದ್ದಾನೆ. ಆತನು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಕಡಿದು ಹಾಕಿದ್ದಾನೆ. ಆತನು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾನೆ. ಆತನು ಸುತ್ತಲೂ ಪ್ರಜ್ವಲಿಸಿ ದಹಿಸುವ ಬೆಂಕಿಯ ಹಾಗೆ ಯಾಕೋಬನಿಗೆ ವಿರುದ್ಧ ವಾಗಿ ದಹಿಸಿಬಿಟ್ಟಿದ್ದಾನೆ. ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ. ಕರ್ತನು ಶತ್ರುವಿನಂತೆ ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾನೆ; ಆತನು ಅವನ ಅರಮನೆಗಳನ್ನೆಲ್ಲಾ ನುಂಗಿಬಿಟ್ಟಿದ್ದಾನೆ, ಆತನು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾನೆ; ಯೆಹೂದದ ಮಗಳ ದುಃಖವನ್ನೂ ಪ್ರಲಾಪವನ್ನೂ ಹೆಚ್ಚಿಸಿದ್ದಾನೆ. ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ. ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ. ಕರ್ತನು ಚೀಯೋನಿನ ಮಗಳ ಗೋಡೆಯನ್ನು ನಾಶ ಮಾಡಬೇಕೆಂದು ಉದ್ದೇಶಿಸಿದ್ದಾನೆ; ಗೆರೆಯನ್ನು ಎಳೆದಿದ್ದಾನೆ. ತನ್ನ ಕೈಯನ್ನು ಕೆಡಿಸುವದರಿಂದ ಹಿಂತೆಗೆಯಲಿಲ್ಲ; ಕಲ್ಲಿನ ಪ್ರಾಕಾರವನ್ನೂ ಮತ್ತು ಗೋಡೆ ಯನ್ನೂ ಗೋಳಾಡುವಂತೆ ಆತನು ಮಾಡಿದ್ದಾನೆ, ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ. ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ; ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಪ್ರಭುಗಳು ಅನ್ಯಜನಾಂಗಗಳ ಮಧ್ಯೆ ಇರುವರು; ಇನ್ನು ನ್ಯಾಯ ಪ್ರಮಾಣವು ಇರುವದೇ ಇಲ್ಲ; ಆಕೆಯ ಪ್ರವಾದಿಗಳು ಸಹ ಕರ್ತನಿಂದ ದರ್ಶನವನ್ನು ಕಂಡು ಕೊಳ್ಳುವದಿಲ್ಲ. ಚೀಯೋನ್ ಮಗಳ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಯಬ್ಧವಾಗಿದ್ದಾರೆ; ತಮ್ಮ ತಲೆಗಳ ಮೇಲೆ ದೂಳು ಹಾಕಿಕೊಂಡಿದ್ದಾರೆ; ಅವರು ಗೊಣೀತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇ ಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿದ್ದಾರೆ. ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ. ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ. ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು? ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮೂರ್ಖತನದ ವಿಷಯಗಳನ್ನು ನೋಡಿದ್ದಾರೆ. ಅವರು ನಿನ್ನ ದುರವಸ್ಥೆಯನ್ನು ನೀಗಿಸುವದಕ್ಕಾಗಿ ನಿನ್ನ ದುಷ್ಟತನ ವನ್ನು ಬಯಲಿಗೆ ತರಲಿಲ್ಲ; ಆದರೆ ನಿನಗಾಗಿ ಸುಳ್ಳಿನ ಭಾರಗಳನ್ನು ಮತ್ತು ಗಡೀಪಾರು ಮಾಡುವ ಕಾರಣ ಗಳನ್ನು ನೋಡಿದ್ದಾರೆ. ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ? ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ. ಕರ್ತನು ತಾನು ಸಂಕಲ್ಪಿಸಿದ್ದನ್ನು ಮಾಡಿದ್ದಾನೆ; ಆತನು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತನ್ನ ವಾಕ್ಯವನ್ನು ಪೂರೈಸಿದ್ದಾನೆ. ಆತನು ಕೆಡವಿ ಕನಿಕರಿಸಲಿಲ್ಲ; ಆತನು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿ ಅವನ ಕೊಂಬನ್ನು ಎತ್ತಿದ್ದಾನೆ. ಅವರ ಹೃದಯವು ಕರ್ತನ ಕಡೆಗೆ ಕೂಗಿ--ಓ ಚೀಯೋನಿನ ಮಗಳ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನೀನು ವಿಶ್ರಾಂತಿ ತಕ್ಕೊಳ್ಳಬೇಡ; ನಿನ್ನ ಕಣ್ಣು ರೆಪ್ಪೆಯನ್ನು ಮುಚ್ಚಬೇಡ. ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ. ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ? ಎಳೇ ಪ್ರಾಯದವರೂ ಮುದುಕರೂ ಬೀದಿಗಳಲ್ಲಿ ಬಿದ್ದಿದ್ದಾರೆ; ನನ್ನ ಕನ್ಯೆಯರೂ ಯೌವನಸ್ಥರೂ ಕತ್ತಿಯಿಂದ ಹತರಾಗಿದ್ದಾರೆ; ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿ; ಕನಿಕರಿಸದೆ ಕೊಂದುಹಾಕಿ ಬಿಟ್ಟಿದ್ದೀ.ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ. ಪರಿಶುದ್ಧ ದಿನದಲ್ಲಿ ಆದ ಹಾಗೆ ಸುತ್ತಲೂ ನನ್ನ ಭಯಾನಕಗಳನ್ನು ನೀನು ಕರೆದಿರುವಿ, ಆದರೆ ಕರ್ತನ ಕೋಪದ ದಿನದಲ್ಲಿ ತಪ್ಪಿಸಿಕೊಂಡು ಉಳಿದವನು ಒಬ್ಬನೂ ಇಲ್ಲ; ನಾನು ಸಾಕಿ ಬೆಳೆಸಿದವರನ್ನು ನನ್ನ ಶತ್ರುವು ನಿರ್ಮೂಲ ಮಾಡಿದ್ದಾನೆ.
- Hosea 9:15 ಹೋಶೇಯ 9:15ಅವರ ಕೆಟ್ಟತನ ವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ನಾನು ಅವರನ್ನು ಹಗೆ ಮಾಡಿದ್ದೇನೆ. ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ ಅವ ರನ್ನು ಇನ್ನು ಪ್ರೀತಿಮಾಡುವದೇ ಇಲ್ಲ; ಅವರ ಪ್ರಭು ಗಳೆಲ್ಲಾ ತಿರುಗಿ ಬೀಳುವವರೇ.
- Joel 2:15 ಯೋವೇಲ 2:15ಚೀಯೋನಿನಲ್ಲಿ ಕೊಂಬು ಊದಿರಿ; ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ.
- Jeremiah 51:5 ಯೆರೆಮೀಯ 51:5ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಇಸ್ರಾಯೇಲಾದರೂ ಯೆಹೂದವಾದರೂ ತನ್ನ ದೇವರಾದ ಸೈನ್ಯಗಳ ಕರ್ತನಿಂದ ಬಿಡಲ್ಪಟ್ಟದ್ದಲ್ಲ.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Jeremiah 7:29 ಯೆರೆಮೀಯ 7:29ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು; ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು; ಕರ್ತನು ತನ್ನ ಉಗ್ರದ ಸಂತತಿಯನ್ನು ನಿರಾಕರಿಸಿ ತಳ್ಳಿ ಬಿಟ್ಟಿದ್ದಾನೆ;
- Jeremiah 7:14 ಯೆರೆಮೀಯ 7:14ಆದಕಾರಣ ನನ್ನ ಹೆಸರಿನಿಂದ ಕರೆ ಯಲ್ಪಟ್ಟಂಥ ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ ನಿಮ್ಮ ಪಿತೃಗಳಿಗೂ ಕೊಟ್ಟ ಸ್ಥಳಕ್ಕೂ ಶಿಲೋವಿಗೆ ಮಾಡಿದ ಹಾಗೆ ಮಾಡುವೆನು.
- Ezekiel 7:20–21 ಯೆಹೆಜ್ಕೇಲನು 7:20–21ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ. ನಾನು ಅದನ್ನು ಅಪರಿಚಿತರ ಕೈಗೆ ಕೊಳ್ಳೆಯಾಗಿಯೂ ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು ಮತ್ತು ಅವರು ಅದನ್ನು ಅಪವಿತ್ರಪಡಿಸುವರು.
- Ezekiel 24:21 ಯೆಹೆಜ್ಕೇಲನು 24:21ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.