Jeremiah · chapter 12 · verse 6
Jeremiah 12:6 in Kannada
ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.
Ninna sahodararoo ninna tandeya manetanadavaroo ivare ninage vanchane maadiddaare; haudu, ivare ninna hinde samoohavannu karediddaare, avaru ninage olle maatugalannu helidaroo avarannu nambabeda.
Jeremiah 12:6 in English
- King James Version (KJV)
- For even thy brethren, and the house of thy father, even they have dealt treacherously with thee; yea, they have called a multitude after thee: believe them not, though they speak fair words unto thee.
- World English Bible (WEB)
- For even your brothers, and the house of your father, even they have dealt treacherously with you! Even they have cried aloud after you! Don’t believe them, though they speak beautiful words to you.
- American Standard Version (ASV)
- For even thy brethren, and the house of thy father, even they have dealt treacherously with thee; even they have cried aloud after thee: believe them not, though they speak fair words unto thee.
- Bible in Basic English (BBE)
- For even your brothers, your father's family, even they have been untrue to you, crying loudly after you: have no faith in them, though they say fair words to you.
- Darby Translation (DBY)
- For even thy brethren, and the house of thy father, even they have dealt treacherously with thee, even they have cried aloud after thee. Believe them not, though they speak good [words] unto thee.
- Webster's Bible (WBS)
- For even thy brethren, and the house of thy father, even they have dealt treacherously with thee; yes, they have called a multitude after thee: believe them not, though they speak fair words to thee.
- Young's Literal Translation (YLT)
- For even thy brethren and the house of thy father, Even they dealt treacherously against thee, Even they — they called after thee fully, Trust not in them, when they speak to thee good things.
Read in context
- 4ದೇಶವು ಅದರ ನಿವಾಸಿಗಳ ಕೆಟ್ಟತನ ಕ್ಕಾಗಿ ದುಃಖಿಸುವದೂ ಎಲ್ಲಾ ಹೊಲಗಳ ಹುಲ್ಲು ಒಣಗುವದೂ ಎಷ್ಟರ ಮಟ್ಟಿಗೆ? ಮೃಗಗಳೂ ಪಕ್ಷಿಗಳೂ ನಾಶವಾಗುತ್ತವೆ; ಅವರು--ಒಬ್ಬರೂ ನಮ್ಮ ಅಂತ್ಯವನ್ನು ನೋಡುವದಿಲ್ಲ ಎಂದು ಅಂದುಕೊಂಡಿದ್ದಾರೆ.
- 5ಕಾಲಾ ಳುಗಳ ಸಂಗಡ ಓಡುವಾಗ ನಿನಗೆ ಆಯಾಸವಾದರೆ ಕುದುರೆಗಳ ಸಂಗಡ ಹೇಗೆ ಹೋರಾಡುವಿ? ನೀನು ಭರವಸವಿಟ್ಟಿರುವ ಸಮಾಧಾನದ ದೇಶದಲ್ಲಿ ಅವರು ನಿನ್ನನ್ನು ಆಯಾಸಪಡಿಸಿದರೆ ಯೊರ್ದನ್ ದಡವಿಾರು ವಾಗ ಏನು ಮಾಡುವಿ?
- 6ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.
- 7ನನ್ನ ಮನೆಯನ್ನು ಬಿಟ್ಟಿದ್ದೇನೆ, ಸ್ವಾಸ್ತ್ಯವನ್ನು ತ್ಯಜಿಸಿದ್ದೇನೆ; ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.
- 8ನನ್ನ ಸ್ವಾಸ್ತ್ಯವು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು, ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದದರಿಂದ ಅದನ್ನು ಹಗೆಮಾಡಿದ್ದೇನೆ.
Cross references
- Proverbs 26:25 ಜ್ಞಾನೋಕ್ತಿಗಳು 26:25ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
- Psalm 12:2 ಕೀರ್ತನೆಗಳು 12:2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- Jeremiah 9:4 ಯೆರೆಮೀಯ 9:4ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು.
- Micah 7:5–6 ಮೀಕ 7:5–6ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ. ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು.
- Genesis 37:4–11 ಆದಿಕಾಂಡ 37:4–11ತಮ್ಮ ತಂದೆಯು ಅವನನ್ನು ಅವನ ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿ ಮಾಡುತ್ತಾನೆಂದು ಅವನ ಸಹೋದರರು ನೋಡಿ ಅವನನ್ನು ದ್ವೇಷಿಸಿ ಅವನ ಸಂಗಡ ಸಮಾಧಾನವಾಗಿ ಮಾತಾಡಲಾರದೆ ಇದ್ದರು. ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. ಅವನು ಅವರಿಗೆ ನಾನು ಕಂಡ ಈ ಕನಸನ್ನು ಹೇಳುತ್ತೇನೆ, ಕೇಳಿರಿ. ಇಗೋ, ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು; ಆಗ ಇಗೋ, ನನ್ನ ಸಿವುಡು ಎದ್ದು ನಿಂತಿತು; ಆಗ ಇಗೋ, ನಿಮ್ಮ ಸಿವುಡುಗಳು ತಿರುಗಿ ಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು ಅಂದನು. ಆಗ ಅವನ ಸಹೋದರರು ಅವನಿಗೆ--ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವಿಯೋ ಇಲ್ಲವೆ ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ ಎಂದು ಹೇಳಿ ಅವನ ಕನಸುಗಳಿಗಾಗಿಯೂ ಅವನ ಮಾತುಗಳಿಗಾಗಿಯೂ ಅವನನ್ನು ಮತ್ತಷ್ಟು ಹಗೆ ಮಾಡಿದರು. ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ--ಇಗೋ, ಇನ್ನೊಂದು ಕನಸನ್ನು ಕಂಡಿದ್ದೇನೆ; ಇಗೋ, ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು ಅಂದನು. ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ಅದನ್ನು ತಿಳಿಸಿದಾಗ ಅವನ ತಂದೆಯು ಅವನನ್ನು ಗದರಿಸಿ ಅವನಿಗೆ--ನೀನು ಕಂಡ ಈ ಕನಸು ಏನು? ನಾನೂ ನಿನ್ನ ತಾಯಿಯೂ ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡಬೀಳುವದಕ್ಕೆ ಬರಬೇಕೋ ಅಂದನು. ಆಗ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚು ಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
- Matthew 10:21 ಮತ್ತಾಯನು 10:21ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
- Jeremiah 11:19 ಯೆರೆಮೀಯ 11:19ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.
- Jeremiah 11:21 ಯೆರೆಮೀಯ 11:21ಆದ ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ--ನೀನು ನಮ್ಮ ಕೈಯಿಂದ ಸಾಯದ ಹಾಗೆ ಕರ್ತನ ಹೆಸರಿನಲ್ಲಿ ಪ್ರವಾದನೆ ಹೇಳಬೇಡ ಎಂದು ಅನ್ನುವವರಿಗೆ ಕರ್ತನು ಹೇಳುವದೇನಂದರೆ--
- Psalm 69:8 ಕೀರ್ತನೆಗಳು 69:8ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ; ನನ್ನ ಒಡಹುಟ್ಟಿದವರಿಗೆ ಪರಕೀಯನಾಗಿದ್ದೇನೆ.
- Ezekiel 33:30–31 ಯೆಹೆಜ್ಕೇಲನು 33:30–31ಇದಲ್ಲದೆ ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳು ಇನ್ನು ಮನೆಗಳ ಬಾಗಲುಗಳಿಗೂ ಗೋಡೆಗಳಿಗೂ ವಿರುದ್ಧವಾಗಿ ಮಾತನಾಡುತ್ತಾರೆ, ನಿನ್ನ ವಿಷಯವಾಗಿ ಮಾತನಾಡಿಕೊಂಡು ಒಬ್ಬರಿಗೊಬ್ಬರು ತಮ್ಮ ತಮ್ಮ ಸಹೋದರರೆಲ್ಲರೂ--ಕರ್ತನಿಂದ ಹೊರಡುವ ಮಾತು ಏನೆಂದು ಕೇಳಿ ಪ್ರಾರ್ಥಿಸೋಣ ಬನ್ನಿ ಎಂದು ಹೇಳಿಕೊಳ್ಳುತ್ತಾರೆ. ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
- Job 6:15 ಯೋಬನು 6:15ನನ್ನ ಸಹೋದರರು ಹಳ್ಳದ ಹಾಗೆ ಮೋಸ ಮಾಡಿದ್ದಾರೆ; ಹಳ್ಳಗಳ ಪ್ರವಾಹದಂತೆ ಹಾದು ಹೋಗುತ್ತಾರೆ.
- Acts 18:12 ಅಪೊಸ್ತಲರ ಕೃತ್ಯಗಳು 18:12ಗಲ್ಲಿಯೋನನು ಅಖಾಯದ ಪ್ರತಿನಿಧಿ ಯಾಗಿದ್ದಾಗ ಯೆಹೂದ್ಯರು ಒಮ್ಮನಸ್ಸಿನಿಂದ ಪೌಲನಿಗೆ ವಿರೋಧವಾಗಿ ಧಂಗೆ ಎಬ್ಬಿಸಿ ನ್ಯಾಯಸ್ಥಾನದ ಮುಂದೆ ಹಿಡುಕೊಂಡು ಬಂದು--