Jeremiah · chapter 19 · verse 1
Jeremiah 19:1 in Kannada
ಕರ್ತನು ಹೀಗೆ ಹೇಳುತ್ತಾನೆ--ಹೋಗಿ, ಕುಂಬಾರನ ಮಣ್ಣಿನ ಕೂಜೆಯನ್ನು ತಕ್ಕೊಂಡು, ಜನರ ಹಿರಿಯರಿಂದಲೂ ಯಾಜಕರ ಹಿರಿಯರಿಂದಲೂ ಕೆಲವರನ್ನು ಕರಕೊಂಡು
Kartanu heege heluttaane--hogi, kumbaarana mannina koojeyannu takkondu, janara hiriyarindaloo yaajakara hiriyarindaloo kelavarannu karakondu
Jeremiah 19:1 in English
- King James Version (KJV)
- Thus saith the LORD, Go and get a potter’s earthen bottle, and [take] of the ancients of the people, and of the ancients of the priests;
- World English Bible (WEB)
- Thus said the LORD, “Go, and buy a potter’s earthen container, and take some of the elders of the people and of the elders of the priests;
- American Standard Version (ASV)
- Thus said Jehovah, Go, and buy a potter’s earthen bottle, and [take] of the elders of the people, and of the elders of the priests;
- Bible in Basic English (BBE)
- This is what the Lord has said: Go and get for money a potter's bottle made of earth, and take with you some of the responsible men of the people and of the priests;
- Darby Translation (DBY)
- Thus saith Jehovah: Go and buy a potter's earthen flagon, and [take] of the elders of the people, and of the elders of the priests;
- Webster's Bible (WBS)
- Thus saith the LORD, Go and get a potter's earthen bottle, and [take] of the ancients of the people, and of the ancients of the priests;
- Young's Literal Translation (YLT)
- Thus said Jehovah, 'Go, and thou hast got a potter's earthen vessel, and of the elders of the people, and of the elders of the priests,
Read in context
- 1ಕರ್ತನು ಹೀಗೆ ಹೇಳುತ್ತಾನೆ--ಹೋಗಿ, ಕುಂಬಾರನ ಮಣ್ಣಿನ ಕೂಜೆಯನ್ನು ತಕ್ಕೊಂಡು, ಜನರ ಹಿರಿಯರಿಂದಲೂ ಯಾಜಕರ ಹಿರಿಯರಿಂದಲೂ ಕೆಲವರನ್ನು ಕರಕೊಂಡು
- 2ಮೂಡಣ ಬಾಗಿಲಿನ ಪ್ರವೇಶದ ಬಳಿಯಲ್ಲಿ ಹಿನ್ನೋಮನ ಮಗನ ತಗ್ಗಿಗೆ ಹೋಗಿ, ನಾನು ನಿನಗೆ ಹೇಳುವ ಮಾತುಗಳನ್ನು ಅಲ್ಲಿ ಸಾರಿ ಹೇಳು.
- 3ಓ ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಕರ್ತನ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗನ್ನುತ್ತಾನೆ--ಇಗೋ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುತ್ತೇನೆ; ಅದನ್ನು ಕೇಳುವವ ರೆಲ್ಲರ ಕಿವಿಗಳು ಗುಂಯ್ಗುಟ್ಟುವವು.
Cross references
- Ezekiel 8:11–12 ಯೆಹೆಜ್ಕೇಲನು 8:11–12ಇದಲ್ಲದೆ ಇಸ್ರಾಯೇಲಿನ ಮನೆತನ ದವರಲ್ಲಿ ಎಪ್ಪತ್ತು ಮಂದಿಯೂ ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿ ದ್ದರು; ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾ ರತಿ ಇತ್ತು; ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು. ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು.
- Jeremiah 18:2–4 ಯೆರೆಮೀಯ 18:2–4ಎದ್ದು ಕುಂಬಾರನ ಮನೆಗೆ ಇಳಿದು ಹೋಗು; ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೇಳಮಾಡುವೆನು ಎಂಬದೇ. ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ಕೆಲಸಮಾಡುತ್ತಿದ್ದನು. ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟುಹೋಯಿತು; ಆಗ ಕುಂಬಾರನಿಗೆ ಒಳ್ಳೇದೆಂದು ತೋರುವ ಪ್ರಕಾರ ಅದನ್ನು ಮತ್ತೊಂದು ಪಾತ್ರೆ ಯನ್ನಾಗಿ ಮಾಡಿದನು.
- Isaiah 30:14 ಯೆಶಾಯ 30:14ಉರಿಯಿಂದ ಕೆಂಡವನ್ನು ತೆಗೆಯುವದಕ್ಕಾಗಲಿ ಬಾವಿಯಿಂದ ನೀರನ್ನು ತೆಗೆಯುವದಕ್ಕಾಗಲಿ ಬೋಕಿ ಯ ತುಂಡುಗಳಲ್ಲಿ ಒಂದೂ ಉಳಿಯದಂತೆ ಒಬ್ಬನು ಕುಂಬಾರನ ಗಡಿಗೆಯನ್ನು ಚೂರುಚೂರಾಗಿ ಒಡೆದು ಬಿಡುವ ರೀತಿಯಲ್ಲಿ ಆತನು ಆ ಗೋಡೆಯನ್ನು ಒಡೆದುಬಿಡುವನು.
- Lamentations 4:2 ಪ್ರಲಾಪಗಳು 4:2ಅಪರಂಜಿಗೆ ಸಮಾನರಾದ ಚೀಯೋನಿನ ಅಮೂಲ್ಯ ಕುಮಾರರು ಹೇಗೆ ಮಣ್ಣಿನ ಪಾತ್ರೆಗಳಂತೆಯೂ ಕುಂಬಾರನ ಕೈಕೆಲಸದ ಹಾಗೆಯೂ ಎಣಿಸಲ್ಪಟ್ಟಿ ದ್ದಾರಲ್ಲಾ!
- Numbers 11:16 ಅರಣ್ಯಕಾಂಡ 11:16ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
- 1 Chronicles 24:4–6 1 ಪೂರ್ವಕಾಲವೃತ್ತಾಂತ 24:4–6ಈತಾಮಾರನ ಕುಮಾರರಿಗಿಂತ ಎಲ್ಲಾಜಾರನ ಕುಮಾ ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದದರಿಂದ ಅವರು ಹೀಗೆಯೇ ವಿಭಾಗಿಸಲ್ಪಟ್ಟಿದ್ದರು. ಎಲ್ಲಾಜಾರನ ಕುಮಾರ ರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಕುಮಾರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟುಮಂದಿ ಮುಖ್ಯ ಸ್ಥರು. ಇವರು ಅವರ ಸಂಗಡ ಬೆರೆತಿದ್ದು ಚೀಟು ಗಳಿಂದ ವಿಭಾಗಿಸಲ್ಪಟ್ಟಿದ್ದರು; ಪರಿಶುದ್ಧ ಸ್ಥಾನದ ಪ್ರಧಾನರೂ ದೈವೀಕ ಕಾರ್ಯಗಳಲ್ಲಿ ಪ್ರಧಾನರೂ ಎಲ್ಲಾಜಾರನ ಕುಮಾರರಿಂದಲೂ ಈತಾಮಾರನ ಕುಮಾರರಿಂದಲೂ ಇದ್ದರು. ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೇಲನ ಮಗನಾದ ಲೇಖಕನಾ ದಂಥ ಶೆಮಾಯನು ಅರಸನ ಮುಂದೆಯೂ ಪ್ರಧಾನ ಯಾಜಕನಾದ ಚಾದೋಕನು, ಎಬ್ಯಾತಾರನ ಮಗ ನಾದ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಆ ವರ್ಗಗಳ ಪಟ್ಟಿಯನ್ನು ಬರೆದನು. ಎಲ್ಲಾಜಾರ್ಯರ ಒಂದು ವರ್ಗದವರಾದ ನಂತರ ಈತಾಮಾರ್ಯರ ಒಂದು ವರ್ಗದವರು ಸೇವಿಸ ಬೇಕೆಂದು ನೇಮಿಸಿದರು. ಎಲ್ಲಾ ವರ್ಗಗಳ ಸರತಿ ಯನ್ನು ಚೀಟಿನಿಂದಲೇ ಗೊತ್ತುಮಾಡಿದರು.
- Jeremiah 19:10–11 ಯೆರೆಮೀಯ 19:10–11ಆಗ ನೀನು ನಿನ್ನ ಸಂಗಡ ಬಂದ ಮನುಷ್ಯರ ಮುಂದೆ ಆ ಕೂಜೆಯನ್ನು ಒಡೆದು, ಅವರಿಗೆ ಹೇಳಬೇಕಾದದ್ದೇ ನಂದರೆ, ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಯಾವ ಪ್ರಕಾರ ಒಬ್ಬನು ಕುಂಬಾರನ ಪಾತ್ರೆಯನ್ನು ಅದು ತಿರಿಗಿ ಒಂದುಗೂಡದ ಹಾಗೆ ಒಡೆಯುತ್ತಾನೋ ಅದೇ ಪ್ರಕಾರ ನಾನು ಈ ಜನವನ್ನೂ ಈ ಪಟ್ಟಣ ವನ್ನೂ ಒಡೆದು ಬಿಡುವೆನು; ಆಗ ಹೂಣಿಡುವದಕ್ಕೆ ಸ್ಥಳವಿಲ್ಲದೆ ತೋಫೆತಿನಲ್ಲಿ ಅವರು ಹೂಣಿಡುವರು.
- 2 Corinthians 4:7 2 ಕೊರಿಂಥದವರಿಗೆ 4:7ಬಲಾಧಿಕ್ಯವು ನಮ್ಮದಲ್ಲ, ಅದು ದೇವರದಾಗಿ ರುವ ಹಾಗೆ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.
- 2 Kings 19:2 2 ಅರಸುಗಳು 19:2ಇದಲ್ಲದೆ ಅವನು ಗೋಣೀತಟ್ಟನ್ನು ಮುಚ್ಚಿಕೊಂಡ ಮನೆವಾರ್ತೆಯವ ನಾದ ಎಲ್ಯಾಕೀಮನನ್ನೂ ಲೇಖಕನಾದ ಶೆಬ್ನನನ್ನೂ ಯಾಜಕರ ಹಿರಿಯರನ್ನೂ ಆಮೋಚನ ಮಗನಾದ ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು.
- Acts 4:5–6 ಅಪೊಸ್ತಲರ ಕೃತ್ಯಗಳು 4:5–6ಮರುದಿನ ಅವರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.
- Matthew 26:3 ಮತ್ತಾಯನು 26:3ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
- Jeremiah 26:17 ಯೆರೆಮೀಯ 26:17ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟ ಕ್ಕೆಲ್ಲಾ ಹೇಳಿದ್ದೇನಂದರೆ--