Jeremiah · chapter 22 · verse 21
Jeremiah 22:21 in Kannada
ನಿನ್ನ ಏಳಿಗೆಯಲ್ಲಿ ನಿನ್ನ ಸಂಗಡ ಮಾತನಾಡಿದೆನು; ಆದರೆ--ನಾನು ಕೇಳುವದಿಲ್ಲ ಎಂದು ನೀನು ಹೇಳಿದಿ; ನನ್ನ ಸ್ವರಕ್ಕೆ ಕಿವಿಗೊಡದಿರು ವದೇ ನಿನ್ನ ಯೌವನದ ರೀತಿಯಾಗಿದೆ.
Ninna eligeyalli ninna sangada maatanaadidenu; aadare--naanu keluvadilla endu neenu helidi; nanna svarakke kivigodadiru vade ninna yauvanada reetiyaagide.
Jeremiah 22:21 in English
- King James Version (KJV)
- I spake unto thee in thy prosperity; [but] thou saidst, I will not hear. This [hath been] thy manner from thy youth, that thou obeyedst not my voice.
- World English Bible (WEB)
- I spoke to you in your prosperity, but you said, ‘I will not listen.’ This has been your way from your youth, that you didn’t obey my voice.
- American Standard Version (ASV)
- I spake unto thee in thy prosperity; but thou saidst, I will not hear. This hath been thy manner from thy youth, that thou obeyedst not my voice.
- Bible in Basic English (BBE)
- My word came to you in the time of your well-being; but you said, I will not give ear. This has been your way from your earliest years, you did not give attention to my voice.
- Darby Translation (DBY)
- I spoke unto thee in thy prosperity; [but] thou saidst, I will not hear. This hath been thy way from thy youth, that thou hearkenedst not unto my voice.
- Webster's Bible (WBS)
- I spoke to thee in thy prosperity; [but] thou saidest, I will not hear. This [hath been] thy manner from thy youth, that thou hast not obeyed my voice.
- Young's Literal Translation (YLT)
- I have spoken unto thee in thine ease, Thou hast said, 'I do not hearken,' This [is] thy way from thy youth, For thou hast not hearkened to My voice.
Read in context
- 19ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
- 20ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ.
- 21ನಿನ್ನ ಏಳಿಗೆಯಲ್ಲಿ ನಿನ್ನ ಸಂಗಡ ಮಾತನಾಡಿದೆನು; ಆದರೆ--ನಾನು ಕೇಳುವದಿಲ್ಲ ಎಂದು ನೀನು ಹೇಳಿದಿ; ನನ್ನ ಸ್ವರಕ್ಕೆ ಕಿವಿಗೊಡದಿರು ವದೇ ನಿನ್ನ ಯೌವನದ ರೀತಿಯಾಗಿದೆ.
- 22ನಿನ್ನ ಕುರುಬರನ್ನೆಲ್ಲಾ ಗಾಳಿ ತಿಂದುಬಿಡುವದು; ನಿನ್ನ ಪ್ರಿಯರು ಸೆರೆಗೆ ಹೋಗುವರು; ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ ಅವಮಾನವೂ ಆಗುವದು.
- 23ಓ ಲೆಬನೋನಿನಲ್ಲಿ ವಾಸಮಾಡು ವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡ ವಳೇ, ನಿನ್ನ ಮೇಲೆ ಬೇನೆಗಳೂ ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ಸುಖಕರವಾಗಿರುವಿ.
Cross references
- Jeremiah 32:30 ಯೆರೆಮೀಯ 32:30ಇಸ್ರಾ ಯೇಲಿನ ಮಕ್ಕಳೂ ಯೆಹೂದದ ಮಕ್ಕಳೂ ತಮ್ಮ ಯೌವನದಾರಭ್ಯ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ್ದಾರೆ; ಇಸ್ರಾಯೇಲಿನ ಮಕ್ಕಳು ತಮ್ಮ ಕೈ ಕೆಲಸಗಳಿಂದ ನನಗೆ ಕೋಪೋದ್ರೇಕವನ್ನೇ ಎಬ್ಬಿಸಿದ್ದಾರೆ ಎಂದು ಕರ್ತನು ಅನ್ನುತ್ತಾನೆ.
- Jeremiah 7:22–28 ಯೆರೆಮೀಯ 7:22–28ನಾನು ನಿಮ್ಮ ಪಿತೃಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ ದಿನದಲ್ಲಿ ದಹನ ಬಲಿಗಳ ಮತ್ತು ಬಲಿಗಳ ಕುರಿತು ಅವರ ಸಂಗಡ ಮಾತಾಡಲಿಲ್ಲ, ಇಲ್ಲವೆ ಅವರಿಗೆ ಆಜ್ಞಾಪಿಸಲಿಲ್ಲ. ಆದರೆ ನಾನು ಅವರಿಗೆ--ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೇದಾಗುವ ಹಾಗೆ ನಾನು ನಿಮಗೆ ಆಜ್ಞಾ ಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ ಎಂದು ಆಜ್ಞಾ ಪಿಸಿ ಹೇಳಿದೆನು. ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು. ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು. ಆದಾಗ್ಯೂ ಅವರು ನನ್ನ ಮಾತನ್ನು ಕೇಳದೆ ಕಿವಿಗೊಡದೆ ತಮ ಕುತ್ತಿಗೆಯನ್ನು ಕಠಿಣಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು. ಆದದರಿಂದ ನೀನು ಈ ಮಾತುಗಳನ್ನೆಲ್ಲಾ ಅವ ರಿಗೆ ಹೇಳಬೇಕು, ಆದರೆ ಅವರು ನಿನ್ನ ಮಾತನ್ನು ಕೇಳುವದಿಲ್ಲ; ಅವರನ್ನು ನೀನು ಕರೆಯುವಿ, ಆದರೆ ಅವರು ನಿನಗೆ ಉತ್ತರ ಕೊಡುವದಿಲ್ಲ. ಹಾಗಾದರೆ ನೀನು ಅವರಿಗೆ--ತನ್ನ ದೇವರಾದ ಕರ್ತನ ಸ್ವರಕ್ಕೆ ವಿಧೇಯವಾಗದಂಥ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸ ದಂಥ ಜನಾಂಗವಾಗಿದೆ; ಸತ್ಯವು ನಾಶವಾಯಿತು, ಅದು ಅವರ ಬಾಯಿಯೊಳಗಿಂದ ಕಡಿದುಹಾಕಲ್ಪಟ್ಟಿದೆ.
- Jeremiah 3:25 ಯೆರೆಮೀಯ 3:25ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ; ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ; ನಾವೂ ನಮ್ಮ ತಂದೆಗಳೂ ನಮ್ಮ ಯೌವನದಾರಭ್ಯ ಇಂದಿನವರೆಗೂ ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ನಮ್ಮ ದೇವ ರಾದ ಕರ್ತನ ಸ್ವರಕ್ಕೆ ಕಿವಿಗೊಡಲಿಲ್ಲ.
- Proverbs 30:9 ಜ್ಞಾನೋಕ್ತಿಗಳು 30:9ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
- Ezekiel 23:3–39 ಯೆಹೆಜ್ಕೇಲನು 23:3–39ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದ ರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲ್ಪಟ್ಟವು; ಅವುಗಳ ತೊಟ್ಟುಗಳು ನಸುಕಲ್ಪಟ್ಟವು. ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು. ಒಹೊಲಳು ನನ್ನ ವಶವಾಗಿರುವಾಗ ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯ ದವರನ್ನು, ಅವರೆಲ್ಲರೂ ನೀಲಿಯಿಂದ ಹೊದಿಸಲ್ಪಟ್ಟ (ಧರಿಸಲ್ಪಟ್ಟ) ಯೋಧರು (ಮುಖಂಡರೂ) ಅಧಿಕಾರ ಸ್ಥರೂ ಅಪೇಕ್ಷಿಸತಕ್ಕ ಯೌವನಸ್ಥರೂ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರೂ ಆಗಿರುವ ಅಂಥವರನ್ನು, ಮೋಹಿಸಿದಳು. ಅವರಿಗೆ ಅವಳು ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು, ಅವರೆಲ್ಲರೂ ಅಶ್ಶೂರದಲ್ಲಿ ಆರಿಸಲ್ಪಟ್ಟವರಾಗಿದ್ದರು. (ನೇಮಿಸ ಲ್ಪಟ್ಟವರು) ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು. ಇಲ್ಲವೆ ಅವಳು ಐಗುಪ್ತದಲ್ಲಿದ್ದಂದಿನಿಂದಲೂ ವ್ಯಭಿ ಚಾರವನ್ನು ಸಹ ಬಿಡಲಿಲ್ಲ. ಅವಳ ಯೌವನದಲ್ಲಿ ಅವರು ಅವಳ ಸಂಗಡ ಇದ್ದರು; ಅವರೆಲ್ಲರೂ ಅವಳ ಕನ್ಯತ್ವದ ಸ್ತನಗಳನ್ನು ಒತ್ತಿ, ತಮ್ಮ ವ್ಯಭಿಚಾರಗಳನ್ನು ಅವಳ ಮೇಲೆ ನಡೆಸಿದರು. ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು; ಅವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಅವಳ ಪುತ್ರರನ್ನೂ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು; ಸ್ತ್ರೀಯರಲ್ಲಿ (ಕೆಟ್ಟತನಕ್ಕೆ) ಹೆಸರುಗೊಂಡಳು; ಅವಳಲ್ಲಿ ನ್ಯಾಯ ತೀರ್ಪುಮಾಡಿದರು. ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು. ಅವಳು ತನ್ನ ನೆರೆಯವರಾದ ಅಶ್ಶೂರ್ಯ ರನ್ನೂ ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಧರಿಸಲ್ಪಟ್ಟು ಕುದುರೆಗಳ ಮೇಲೆ ಸವಾರಿಮಾಡುವ ರಾಹುತರಾಗಿಯೂ ಅಪೇಕ್ಷಿಸತಕ್ಕ ಯೌವನಸ್ಥರಾ ಗಿಯೂ ಇರುವಂಥ ಅವರನ್ನು ಮೋಹಿಸಿದಳು. ಆಗ ನಾನು ಅವಳು ಅಪವಿತ್ರವಾದಳೆಂದು ನೋಡಿದೆನು; ಅವರಿಬ್ಬರೂ ಒಂದೇ ಮಾರ್ಗವನ್ನು ಹಿಡಿದರು. ಅವಳು ತನ್ನ ವ್ಯಭಿಚಾರವನ್ನು ಇನ್ನು ಹೆಚ್ಚಿಸಿದಳು; ಗೋಡೆಯ ಮೇಲೆ ಬರೆಯಲ್ಪಟ್ಟ ಮನುಷ್ಯರನ್ನೂ ಕುಂಕುಮ ಇಟ್ಟುಕೊಂಡ ಕಸ್ದೀಯರ ಹಾಗೆ ಕಂಡು ಬರುವ ಪ್ರತಿಮೆಗಳನ್ನೂ (ಮನುಷ್ಯ ಆಕಾರಗಳನ್ನೂ) ನೋಡಿದಾಗ, ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ ಕೊಂಡಂಥ ತನ್ನ ತಲೆಗಳಲ್ಲಿ ಅಲಂಕಾರವಾದ ರುಮಾ ಲನ್ನು ಧರಿಸಿದಂಥ ಎಲ್ಲರೂ ನೋಟದಲ್ಲಿ ಅವರ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಕುಮಾರರ ಹಾಗಿರುವದನ್ನು; ಅವಳು ಅವಳ ಕಣ್ಣುಗಳಿಂದ ತಕ್ಷಣವೇ ಅವರನ್ನು ನೋಡಿದಾಗ ಅವರನ್ನು ಮೋಹಿಸಿ ದಳು; ಅವರ ಬಳಿಗೆ ಕಸ್ದೀಯಕ್ಕೆ ದೂತರನ್ನು ಕಳುಹಿಸಿ ದಳು. ಬಾಬೆಲಿನವರು ಅವಳ, ಪ್ರೀತಿಯ ಹಾಸಿ ಗೆಯ ಮೇಲೆ ಬಂದು ಅವಳನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು; ಅವಳು ಅವರಿಂದ ಹಾಳಾದ ಮೇಲೆ ತನ್ನ ಮನಸ್ಸನ್ನು ಅವರ ಕಡೆಯಿಂದ ಅಗಲಿಸಿ ಕೊಂಡಳು. ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನು ಬಯಲುಪಡಿಸಿ ಕೊಂಡಾಗ, ತನ್ನ ಅನುರಾಗವು ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು. ಆದರೂ ಅವಳು ಐಗುಪ್ತದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿ ದಳು. ಹೇಗಂದರೆ, ಕತ್ತೆಗಳ ಮಾಂಸದಂತೆ ಮಾಂಸ ವುಳ್ಳವರಾಗಿಯೂ ಕುದುರೆಗಳ ವೀರ್ಯದಂತೆ ವೀರ್ಯ ವುಳ್ಳವರಾಗಿಯೂ ಇರುವ ತನ್ನ ಉಪಪತಿಗಳನ್ನು ಮೋಹಿಸಿದರು. ಹೀಗೆ ಐಗುಪ್ತರಿಂದ ನಿನ್ನ ಯೌವ ನದ ಸ್ತನಗಳ ತೊಟ್ಟುಗಳನ್ನು ಒತ್ತಿಸಿಕೊಂಡು ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ. ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ. ಬಾಬೆಲಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು ಕೋಯದವರು, ಮತ್ತು ಎಲ್ಲಾ ಅಶ್ಶೂರ್ಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿಹೊಂದಿ ದವರೂ ಎಲ್ಲರೂ ಕುದುರೆಗಳ ಮೇಲೆ ಸವಾರಿಮಾಡಿ ದವರೇ. ಅವರೆಲ್ಲರೂ ರಥಗಳ ಸಂಗಡಲೂ ಬಂಡಿ ಗಳ ಸಂಗಡಲೂ ಜನಗಳ ಸಮೂಹದ ಸಂಗಡಲೂ ಬಲವುಳ್ಳವರಾಗಿ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣ ವನ್ನೂ ನಿನಗೆ ವಿರುದ್ಧವಾಗಿರಿಸುವೆನು. ಇದಲ್ಲದೆ ನಾನು ಅವರ ಮುಂದೆ ನ್ಯಾಯವನ್ನು ಇಡುವೆನು; ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು. ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು. ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು; ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ. ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಅಗಲಿ ಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ. ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು. ನೀನು ಅನ್ಯಜನಾಂಗಗಳ ಹಿಂದೆ ಹೋಗಿ ವ್ಯಭಿಚರಿಸಿದ್ದರಿಂದಲೂ ಅವರ ವಿಗ್ರಹ ಗಳಿಂದ ನಿನ್ನನ್ನು ಅಪವಿತ್ರಪಡಿಸಿಕೊಂಡಿದ್ದರಿಂದಲೂ ಇವುಗಳನ್ನು ನಾನು ನಿನಗೆ ಮಾಡುತ್ತೇನೆ. ನೀನು ನಿನ್ನ ಸಹೋದರಿಯ ಮಾರ್ಗದಲ್ಲಿಯೇ ನಡೆದದ್ದರಿಂದ ಅವಳ ಪಾತ್ರೆಯನ್ನು ನಿನ್ನ ಕೈಗೆ ಕೊಡುತ್ತೇನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವಿ. ನೀನು ಹಾಸ್ಯಕ್ಕೂ ನಿಂದೆಗೂ ಗುರಿ ಯಾಗುವಿ. ಅದೇ ನಿನಗೆ ಹೆಚ್ಚಾಗುವದು. ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶನವೂ ಆಗುವದು; ನೀನು ಅಮಲೇರಿ ದುಃಖದಿಂದಲೂ ತುಂಬಿರುವಿ. ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವಿ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನ ಹಿಂದಕ್ಕೆ ಎಸೆದು ಮರೆತದ್ದರಿಂದ ನಿನ್ನ ದುಷ್ಕರ್ಮವನ್ನೂ ವ್ಯಭಿಚಾರವನ್ನೂ ಅನುಭವಿಸಲೇಬೇಕು. ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಒಹೊಲಳಿಗೂ ಒಹೊಲೀ ಬಳಿಗೂ ನ್ಯಾಯತೀರಿಸುವಿಯೋ? ಹೌದು, ಅವರ ಅಸಹ್ಯಗಳನ್ನು ಅವರಿಗೆ ತಿಳಿಸು. ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ. ಇದಲ್ಲದೆ ಇದನ್ನು ಮಾಡಿದ ದಿನದಲ್ಲಿಯೇ ನನ್ನ ಪರಿಶುದ್ಧಸ್ಥಳವನ್ನು ಅಪವಿತ್ರಪಡಿಸಿ ನನ್ನ ಸಬ್ಬತ್ತುಗಳನ್ನು ಕೆಡಿಸಿದ್ದಾರೆ. ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದು ಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವದಕ್ಕೆ ಬಂದರು. ಇಗೋ, ಅವರು ನನ್ನ ಆಲಯದ ಮಧ್ಯದಲ್ಲಿಯೇ ಹೀಗೆ ಮಾಡಿದ್ದಾರೆ;
- Isaiah 48:8 ಯೆಶಾಯ 48:8ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.
- Ezekiel 20:8 ಯೆಹೆಜ್ಕೇಲನು 20:8ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
- Jeremiah 6:16 ಯೆರೆಮೀಯ 6:16ಕರ್ತನು ಹೀಗೆ ಹೇಳುತ್ತಾನೆ--ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ; ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ; ಒಳ್ಳೇ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ; ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕು ವದು ಅಂದನು. ಆದರೆ ಅವರು--ನಾವು ನಡೆ ಯುವದಿಲ್ಲ ಅಂದರು.
- Jeremiah 35:15 ಯೆರೆಮೀಯ 35:15ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ.
- 2 Chronicles 36:16–17 2 ಪೂರ್ವಕಾಲವೃತ್ತಾಂತ 36:16–17ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು. ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
- Psalm 106:6–48 ಕೀರ್ತನೆಗಳು 106:6–48ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ. ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು. ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು. ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು. ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು. ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ. ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು. ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು. ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು. ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು. ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು. ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು. ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು. ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು. ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು. ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು. ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು. ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು. ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು. ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು. ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು. ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು. ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು. ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು. ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು. ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು. ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು. ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು. ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು. ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು. ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು. ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು. ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ. ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
- Ezekiel 20:21 ಯೆಹೆಜ್ಕೇಲನು 20:21ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.