Jeremiah · chapter 22 · verse 20
Jeremiah 22:20 in Kannada
ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ.
Lebanonige hogi koogu, baashaaninalli ninna svaravannettu, daarigalalli koogu, ninna priyaru naashavaagiddaare.
Jeremiah 22:20 in English
- King James Version (KJV)
- Go up to Lebanon, and cry; and lift up thy voice in Bashan, and cry from the passages: for all thy lovers are destroyed.
- World English Bible (WEB)
- “Go up to Lebanon, and cry out. Lift up your voice in Bashan, and cry from Abarim; for all your lovers have been destroyed.
- American Standard Version (ASV)
- Go up to Lebanon, and cry; and lift up thy voice in Bashan, and cry from Abarim; for all thy lovers are destroyed.
- Bible in Basic English (BBE)
- Go up to Lebanon and give a cry; let your voice be loud in Bashan, crying out from Abarim; for all your lovers have come to destruction
- Darby Translation (DBY)
- Go up to Lebanon, and cry; and give forth thy voice in Bashan, and cry from [the heights of] Abarim: for all thy lovers are destroyed.
- Webster's Bible (WBS)
- Go up to Lebanon, and cry; and lift up thy voice in Bashan, and cry from the passages: for all thy lovers are destroyed.
- Young's Literal Translation (YLT)
- Go up to Lebanon, and cry, And in Bashan give forth thy voice, And cry from Abarim, For destroyed have been all loving thee.
Read in context
- 18ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.
- 19ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
- 20ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ.
- 21ನಿನ್ನ ಏಳಿಗೆಯಲ್ಲಿ ನಿನ್ನ ಸಂಗಡ ಮಾತನಾಡಿದೆನು; ಆದರೆ--ನಾನು ಕೇಳುವದಿಲ್ಲ ಎಂದು ನೀನು ಹೇಳಿದಿ; ನನ್ನ ಸ್ವರಕ್ಕೆ ಕಿವಿಗೊಡದಿರು ವದೇ ನಿನ್ನ ಯೌವನದ ರೀತಿಯಾಗಿದೆ.
- 22ನಿನ್ನ ಕುರುಬರನ್ನೆಲ್ಲಾ ಗಾಳಿ ತಿಂದುಬಿಡುವದು; ನಿನ್ನ ಪ್ರಿಯರು ಸೆರೆಗೆ ಹೋಗುವರು; ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ ಅವಮಾನವೂ ಆಗುವದು.
Cross references
- Numbers 27:12 ಅರಣ್ಯಕಾಂಡ 27:12ಆಗ ಕರ್ತನು ಮೋಶೆಗೆ--ನೀನು ಈ ಅಬಾ ರೀಮ್ ಪರ್ವತದ ಮೇಲೆ ಏರಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶವನ್ನು ನೋಡು.
- Ezekiel 23:22 ಯೆಹೆಜ್ಕೇಲನು 23:22ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ.
- Lamentations 1:2 ಪ್ರಲಾಪಗಳು 1:2ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.
- Deuteronomy 32:49 ಧರ್ಮೋಪದೇಶಕಾಂಡ 32:49ಈ ಅಬಾರೀಮ್ ಪರ್ವತದ ಮೇಲೆ ಮೋವಾಬ್ ದೇಶದ ಲ್ಲಿಯೂ ಯೆರಿಕೋವಿಗೆ ಎದುರಾಗಿಯೂ ಇರುವ ನೆಬೋ ಬೆಟ್ಟದ ಮೇಲೆ ಏರಿಹೋಗು; ನಾನು ಇಸ್ರಾ ಯೇಲ್ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವ ಕಾನಾನ್ ದೇಶವನ್ನು ನೋಡು,
- 2 Kings 24:7 2 ಅರಸುಗಳು 24:7ಆದರೆ ಐಗುಪ್ತದ ಅರಸನು ತನ್ನ ದೇಶದಿಂದ ತಿರಿಗಿ ಬರಲಿಲ್ಲ. ಯಾಕಂದರೆ ಐಗುಪ್ತದ ನದಿ ಮೊದಲು ಗೊಂಡು ಯೂಫ್ರೇಟೀಸ್ ನದಿಯ ವರೆಗೂ ಐಗು ಪ್ತದ ಅರಸನಿಗೆ ಇದ್ದದ್ದೆಲ್ಲಾ ಬಾಬೆಲಿನ ಅರಸನು ಹಿಡಿದಿದ್ದನು.
- Lamentations 1:19 ಪ್ರಲಾಪಗಳು 1:19ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.
- Ezekiel 23:9 ಯೆಹೆಜ್ಕೇಲನು 23:9ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು;
- Jeremiah 22:22 ಯೆರೆಮೀಯ 22:22ನಿನ್ನ ಕುರುಬರನ್ನೆಲ್ಲಾ ಗಾಳಿ ತಿಂದುಬಿಡುವದು; ನಿನ್ನ ಪ್ರಿಯರು ಸೆರೆಗೆ ಹೋಗುವರು; ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ ಅವಮಾನವೂ ಆಗುವದು.
- Jeremiah 25:17–27 ಯೆರೆಮೀಯ 25:17–27ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ.
- Jeremiah 30:13–15 ಯೆರೆಮೀಯ 30:13–15ಅದನ್ನು ನಿನಗೆ ಕಟ್ಟುವ ಹಾಗೆ ನಿನಗೋ ಸ್ಕರ ವಾದಿಸುವವರು ಯಾರೂ ಇರುವದಿಲ್ಲ. ವಾಸಿ ಮಾಡುವ ಔಷಧಗಳು ನಿನಗೆ ಇಲ್ಲ. ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ. ನಿನ್ನ ಗಾಯದ ನೋವಿನ ನಿಮಿತ್ತ ಯಾಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗ ದಂಥದ್ದೇ; ನಿನ್ನ ಅಕ್ರಮಗಳು ಬಹಳವಾಗಿರುವದ ರಿಂದಲೂ ನಿನ್ನ ಪಾಪಗಳು ಪ್ರಬಲವಾಗಿರುವದ ರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
- Jeremiah 25:9 ಯೆರೆಮೀಯ 25:9ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ.
- Jeremiah 4:30 ಯೆರೆಮೀಯ 4:30ನೀನು ಸೂರೆ ಯಾದಾಗ ಏನು ಮಾಡುವಿ? ನೀನು ಕಡು ಕೆಂಪುಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣ ಗಳಿಂದ ನಿನ್ನನ್ನು ಅಲಂಕರಿಸಿದರೇನು? ಮುಖಕ್ಕೆ ಬಣ್ಣ ಹಚ್ಚಿಕೊಂಡರೇನು? ವ್ಯರ್ಥವಾಗಿ ನೀನು ನಿನ್ನನ್ನು ಸೌಂದರ್ಯಳಾಗಿ ಮಾಡಿಕೊಳ್ಳುವಿ; ನಿನ್ನ ಪ್ರಿಯರು ನಿನ್ನನ್ನು ಅಸಹ್ಯಿಸುವರು; ನಿನ್ನ ಪ್ರಾಣವನ್ನು ಹುಡುಕುವರು.