Jeremiah · chapter 25 · verse 22
Jeremiah 25:22 in Kannada
ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ
Toorina arasare llarigoo cheedonina arasarellarigoo samudrada aacheyalliruva dveepada arasarigoo
Jeremiah 25:22 in English
- King James Version (KJV)
- And all the kings of Tyrus, and all the kings of Zidon, and the kings of the isles which [are] beyond the sea,
- World English Bible (WEB)
- and all the kings of Tyre, all the kings of Sidon, and the kings of the isle which is beyond the sea;
- American Standard Version (ASV)
- and all the kings of Tyre, and all the kings of Sidon, and the kings of the isle which is beyond the sea;
- Bible in Basic English (BBE)
- And all the kings of Tyre, and all the kings of Zidon, and the kings of the lands across the sea;
- Darby Translation (DBY)
- and all the kings of Tyre, and all the kings of Zidon, and the kings of the isles that are beyond the sea;
- Webster's Bible (WBS)
- And all the kings of Tyre, and all the kings of Zidon, and the kings of the isles which [are] beyond the sea,
- Young's Literal Translation (YLT)
- And all the kings of Tyre, And all the kings of Zidon, And the kings of the isle that [is] beyond the sea,
Read in context
- 20ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
- 21ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ
- 22ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ
- 23ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ
- 24ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ
Cross references
- Jeremiah 47:4 ಯೆರೆಮೀಯ 47:4ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವದಕ್ಕೂ ತೂರಿನಿಂದ ಚೀದೋನಿನಿಂದ ಉಳಿದ ಪ್ರತಿ ಸಹಾಯಕನನ್ನು ಕಡಿದು ಬಿಡುವದಕ್ಕೂ ಆ ದಿವಸ ಬಂತು. ಕರ್ತನು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆ ಮಾಡುವನು.
- Joel 3:4–8 ಯೋವೇಲ 3:4–8ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನೀವು ನನ್ನ ಬೆಳ್ಳಿಯನ್ನೂ ನನ್ನ ಬಂಗಾರವನ್ನೂ ತೆಗೆದುಕೊಂಡು ನನ್ನ ಒಳ್ಳೇ ರಮ್ಯವಾದವುಗಳನ್ನು ನಿಮ್ಮ ದೇವಸ್ಥಾನಗಳಿಗೆ ತಕ್ಕೊಂಡು ಹೋಗಿದ್ದೀರಿ. ಯೆಹೂದದ ಮಕ್ಕಳನ್ನೂ ಯೆರೂಸಲೇಮಿನ ಮಕ್ಕ ಳನ್ನೂ ತಮ್ಮ ಪ್ರಾಂತ್ಯಗಳಿಂದ ದೂರ ಮಾಡುವ ಹಾಗೆ ಗ್ರೀಕರಿಗೆ ಮಾರಿದ್ದೀರಿ. ಇಗೋ, ಎಲ್ಲಿ ಅವ ರನ್ನು ಮಾರಿದ್ದಿರೋ ಆ ಸ್ಥಳದಿಂದ ನಾನು ಅವರನ್ನು ಎಬ್ಬಿಸಿ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು. ನಿಮ್ಮ ಕುಮಾರರನ್ನೂ ನಿಮ್ಮ ಕುಮಾರ್ತೆ ಯರನ್ನೂ ಯೆಹೂದನ ಮಕ್ಕಳ ಕೈಯಲ್ಲಿ ಮಾರುವೆನು; ಇವರು ಅವರನ್ನು ದೂರ ಜನವಾದ ಶೆಬದನರಿಗೆ ಮಾರುವರು; ಕರ್ತನು ಅದನ್ನು ಹೇಳಿದ್ದಾನೆ.
- Ezekiel 29:18 ಯೆಹೆಜ್ಕೇಲನು 29:18ಮನುಷ್ಯ ಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮ ವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಪಟ್ಟ ಶ್ರಮಕ್ಕೆ ಅವನಿಗಾಗಲೀ ಅವನ ಸೈನಿಕರಿಗಾಗಲೀ ತೂರ್ನಿಂದ ಪ್ರತಿಫಲವೇನೂ ದೊರೆಯಲಿಲ್ಲ.
- Ezekiel 26:1–21 ಯೆಹೆಜ್ಕೇಲನು 26:1–21ಹನ್ನೊಂದನೇ ವರುಷದ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ತೂರ್, ಯೆರೂಸಲೇಮಿನ ವಿಷಯವಾಗಿ ಆಹಾ, ಜನರ ದ್ವಾರವಾಗಿದ್ದದ್ದು ಮುರಿದು ಹೋಯಿತು, ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು ಹೇಳಿದ್ದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು. ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು. ಅದು ಸಮು ದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿ ರುವದು; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ಅದು ಜನಾಂಗಗಳಿಗೆ ಕೊಳ್ಳೆ ಯಾಗಿರುವದು, ಇದಲ್ಲದೆ ಬಯಲು ಭೂಮಿಯಲ್ಲಿ ರುವ ಅದರ ಕುಮಾರ್ತೆಯರು ಖಡ್ಗದಿಂದ ಕೊಲ್ಲಲ್ಪಡು ವರು, ಆಗ ನಾನೇ ಕರ್ತನೆಂದು ಎಲ್ಲರಿಗೂ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಉತ್ತರದ ರಾಜಾಧಿರಾಜನೂ ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡಲೂ ಸವಾರರ ಸಂಗಡಲೂ ರಥಗಳ ಸಂಗಡಲೂ ಬಹು ಜನರ ಸಂಗಡಲೂ ತೂರಿನ ಮೇಲೆ ತರುತ್ತೇನೆ. ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು; ತನ್ನ ಯುದ್ಧಯಂತ್ರಗಳನ್ನು ನಿನ್ನ ಗೋಡೆಗಳಿಗೆ ವಿರೋಧ ವಾಗಿ ತಾಕಿಸುವೆನು ನಿನ್ನ ಗೋಪುರಗಳನ್ನು ತನ್ನ ಕೊಡಲಿಗಳಿಂದ ಒಡೆದು ಬಿಡುವನು. ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಚ್ಚುವದು; ಗೋಡೆಯಿಲ್ಲದ ಕೋಟೆಯೊಳಗೆ ಶತ್ರು ಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲು ಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವವು. ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು. ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು. ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ. ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ? ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು. ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವದೇನಂದರೆ, ಸಮು ದ್ರಗಳ ಬಳಿಯಲ್ಲಿ ವಾಸಿಸಿದವಳೇ, ಹೆಸರು ಗೊಂಡ ಪಟ್ಟಣವೇ, ನೀನೂ ತನ್ನ ನಿವಾಸಿಗಳೂ ಸಮುದ್ರದಲ್ಲಿ ಬಲವಾಗಿದ್ದವಳೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದಿ? ಈಗ ನೀನು ಬೀಳುವ ದಿವಸದಲ್ಲಿ ದ್ವೀಪಗಳು ನಡುಗುವವು ಹೌದು, ನೀನು ಹೋಗಿಬಿಡುವದರಿಂದ ಸಮುದ್ರದಲ್ಲಿರುವ ದ್ವೀಪಗಳು ಗಾಬರಿಯಾಗುವವು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು. ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ. ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Amos 1:3–5 ಆಮೋಸ 1:3–5ಕರ್ತನು ಹೀಗೆ ಹೇಳುತ್ತಾನೆ--ದಮಸ್ಕದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅವರನ್ನು ದಂಡಿಸದೆ ಹಿಂತಿರುಗುವದಿಲ್ಲ; ಅವರು ಕಬ್ಬಿಣದ ಆಯುಧಗಳಿಂದ ಗಿಲ್ಯಾದನ್ನು ಬಡಿದಿರುವರು. ಆದರೆ ನಾನು ಹಜಾಯೇಲನ ಮನೆಯೊಳಗೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು. ನಾನು ದಮಸ್ಕದ ಅಡ್ಡ ದಂಡೆ ಯನ್ನು ಸಹ ಮುರಿಯುವೆನು; ಆವೆನ್ ತಗ್ಗಿನಿಂದ ನಿವಾಸಿಯನ್ನೂ ಎದೆನಿನ ಮನೆಯಿಂದ ರಾಜದಂಡ ಹಿಡಿಯುವನನ್ನೂ ಕಡಿದುಬಿಡುವೆನು; ಸಿರಿಯಾದ ಜನರು ಸೆರೆಯಾಗಿ ಕೀರಿಗೆ ಹೋಗುವರೆಂದು ಕರ್ತನು ಹೇಳುತ್ತಾನೆ.
- Jeremiah 27:3 ಯೆರೆಮೀಯ 27:3ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು.
- Ezekiel 28:22–23 ಯೆಹೆಜ್ಕೇಲನು 28:22–23ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿದೋನೇ ನಾನು ನಿನಗೆ ವಿರೋಧವಾಗಿದ್ದೇನೆ; ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧನಾಗುವಾಗ ನಾನೇ ಕರ್ತನೆಂದು ತಿಳಿಯುವರು. ಅದರಲ್ಲಿ ವ್ಯಾಧಿಯನ್ನೂ ಬೀದಿಗಳಲ್ಲಿ ರಕ್ತವನ್ನು ಕಳುಹಿಸುವೆನು; ಸುತ್ತಲೂ ಅದಕ್ಕೆ ವಿರುದ್ಧವಾಗಿ ಕತ್ತಿಯಿಂದ ಹತವಾದವರು ಅದರಲ್ಲಿ ಬೀಳುವರು; ಆಗ ನಾನೇ ಕರ್ತನೆಂದು ತಿಳಿಯುವರು.
- Amos 1:9–10 ಆಮೋಸ 1:9–10ಕರ್ತನು ಹೀಗೆ ಹೇಳುತ್ತಾನೆ--ತೂರಿನ ಮೂರು ಮತ್ತು ನಾಲ್ಕರ ನಿಮಿತ್ತ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದಿಲ್ಲ; ಅವರು ಸಹೋದರರ ಒಡಂಬ ಡಿಕೆಯನ್ನು ಜ್ಞಾಪಕಮಾಡಲಿಲ್ಲ; ಪೂರ್ಣ ಸೆರೆಯನ್ನು ಎದೋಮಿಗೆ ಒಪ್ಪಿಸಿಬಿಟ್ಟರು. ಆದರೆ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.
- Jeremiah 49:23–27 ಯೆರೆಮೀಯ 49:23–27ದಮಸ್ಕದ ವಿಷಯವಾಗಿ ಹಮಾತೂ ಅರ್ಪಾದೂ ನಾಚಿಕೆಪಡುತ್ತವೆ; ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯ ಪಟ್ಟಿವೆ. ಸಮುದ್ರದಂತೆ ಕಳವಳಪಡುತ್ತದೆ, ಅದು ಸಮ್ಮನಿರಲಾರದು. ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ. ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲ್ಪಟ್ಟಿದೆಯಲ್ಲವೋ? ಆದದರಿಂದ ಅದರ ಯೌವನಸ್ಥರು ಚೌಕಗಳಲ್ಲಿ ಬೀಳುವರು; ಯುದ್ಧಸ್ಥರೆಲ್ಲರೂ ಆ ದಿನದಲ್ಲಿ ಕಡಿದುಹಾಕಲ್ಪಡುವರು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
- Jeremiah 31:10 ಯೆರೆಮೀಯ 31:10ಜನಾಂಗಗಳೇ, ಕರ್ತನ ವಾಕ್ಯವನ್ನು ಕೇಳಿರಿ; ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ತಿಳಿಸಿ ಹೀಗೆ ಹೇಳಿರಿ--ಇಸ್ರಾಯೇಲನನ್ನು ಚದರಿಸಿದಾತನು ಅವ ನನ್ನು ಕೂಡಿಸುವನು; ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವನನ್ನು ಕಾಯುವನು.
- Zechariah 9:1–4 ಜೆಕರ್ಯ 9:1–4ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು. ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ. ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು. ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು.
- Ezekiel 32:30 ಯೆಹೆಜ್ಕೇಲನು 32:30ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.