Jeremiah · chapter 26 · verse 16
Jeremiah 26:16 in Kannada
ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ--ಈ ಮನುಷ್ಯನು ಮರಣದ ನಿರ್ಣ ಯಕ್ಕೆ ತಕ್ಕವನಲ್ಲ; ನಮ್ಮ ದೇವರಾದ ಕರ್ತನ ಹೆಸರಿ ನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ ಅಂದರು.
Aaga pradhaanaroo janarellaroo yaajakarigoo pravaadigaligoo--ee manushyanu maranada nirna yakke takkavanalla; namma devaraada kartana hesari nalli namma sangada maatanaadiddaane andaru.
Jeremiah 26:16 in English
- King James Version (KJV)
- Then said the princes and all the people unto the priests and to the prophets; This man [is] not worthy to die: for he hath spoken to us in the name of the LORD our God.
- World English Bible (WEB)
- Then the princes and all the people said to the priests and to the prophets: “This man is not worthy of death; for he has spoken to us in the name of the LORD our God.”
- American Standard Version (ASV)
- Then said the princes and all the people unto the priests and to the prophets: This man is not worthy of death; for he hath spoken to us in the name of Jehovah our God.
- Bible in Basic English (BBE)
- Then the rulers and all the people said to the priests and the prophets, It is not right for this man to be put to death: for he has said words to us in the name of the Lord our God.
- Darby Translation (DBY)
- And the princes and all the people said unto the priests and to the prophets, This man is not worthy to die; for he hath spoken to us in the name of Jehovah our God.
- Webster's Bible (WBS)
- Then said the princes and all the people to the priests and to the prophets; This man [is] not worthy to die: for he hath spoken to us in the name of the LORD our God.
- Young's Literal Translation (YLT)
- And the heads and all the people say unto the priests and unto the prophets, 'There is not for this man a judgment of death, for in the name of Jehovah our God he hath spoken unto us.'
Read in context
- 14ನಾನಾದರೋ, ಇಗೋ, ನಿಮ್ಮ ಕೈಯಲ್ಲಿ ಇದ್ದೇನೆ; ನಿಮಗೆ ಒಳ್ಳೇದಾಗಿಯೂ ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ.
- 15ಆದರೂ ನೀವು ನನ್ನನ್ನು ಕೊಂದುಹಾಕಿದರೆ ನಿಮ್ಮ ಮೇಲೆಯೂ ಈ ಪಟ್ಟಣದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಅಪರಾಧವಿಲ್ಲದ ರಕ್ತವನ್ನು ಬರಮಾಡು ತ್ತೀರೆಂದು ನಿಶ್ಚಯವಾಗಿ ತಿಳುಕೊಳ್ಳಿರಿ, ಈ ವಾಕ್ಯಗಳ ನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಅಂದನು.
- 16ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ--ಈ ಮನುಷ್ಯನು ಮರಣದ ನಿರ್ಣ ಯಕ್ಕೆ ತಕ್ಕವನಲ್ಲ; ನಮ್ಮ ದೇವರಾದ ಕರ್ತನ ಹೆಸರಿ ನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ ಅಂದರು.
- 17ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟ ಕ್ಕೆಲ್ಲಾ ಹೇಳಿದ್ದೇನಂದರೆ--
- 18ಮೋರೇಷೆತಿನವನಾದ ವಿಾಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ ಯೆಹೂದದ ಜನರಿಗೆಲ್ಲಾ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಚೀಯೋನು ಹೊಲದ ಹಾಗೆ ಉಳಲ್ಪಡು ವದು; ಯೆರೂಸಲೇಮು ದಿಬ್ಬಗಳಾಗುವದು; ಮಂದಿ ರದ ಬೆಟ್ಟವು ಅಡವಿಯ ಉನ್ನತ ಸ್ಥಳವಾಗುವದು.
Cross references
- Acts 5:34–39 ಅಪೊಸ್ತಲರ ಕೃತ್ಯಗಳು 5:34–39ಆಗ ನ್ಯಾಯಪ್ರಮಾಣದಲ್ಲಿ ಪಂಡಿತ ನಾಗಿದ್ದು ಎಲ್ಲಾ ಜನರಲ್ಲಿ ಮಾನ ಹೊಂದಿದ ಗಮಲಿ ಯೇಲನೆಂಬ ಒಬ್ಬ ಫರಿಸಾಯನು ಆಲೋಚನಾ ಸಭೆಯಲ್ಲಿ ನಿಂತುಕೊಂಡು ಸ್ವಲ್ಪ ಹೊತ್ತು ಅಪೊಸ್ತಲರನ್ನು ಹೊರಗೆ ಕಳುಹಿಸಬೇಕೆಂದು ಅಪ್ಪಣೆ ಕೊಟ್ಟು ಅವ ರಿಗೆ-- ಇಸ್ರಾಯೇಲ್ ಜನರೇ, ಈ ಮನುಷ್ಯರಿಗೆ ನೀವು ಏನು ಮಾಡಬೇಕೆಂದಿದ್ದೀರೋ ಅದರ ವಿಷಯ ವಾಗಿ ಎಚ್ಚರಿಕೆಯುಳ್ಳವರಾಗಿರ್ರಿ. ಇದಕ್ಕಿಂತ ಮುಂಚೆ ಥೈದನು ಎದ್ದು ತಾನೊಬ್ಬ ಗಣ್ಯವ್ಯಕ್ತಿ ಎಂದು ತನ್ನ ವಿಷಯವಾಗಿ ತಾನೇ ಕೊಚ್ಚಿಕೊಂಡಾಗ ಸುಮಾರು ನಾನೂರು ಜನರು ಅವನೊಂದಿಗೆ ಸೇರಿಕೊಂಡರು; ಅವನು ಕೊಲ್ಲಲ್ಪಟ್ಟದ್ದರಿಂದ ಅವನಿಗೆ ವಿಧೇಯರಾಗಿ ದ್ದವರೆಲ್ಲರೂ ಚದರಿಹೋಗಿ ಇಲ್ಲವಾದರು. ಈ ಮನುಷ್ಯನ ತರುವಾಯ ಖಾನೇಷುಮಾರಿಯ ದಿನ ಗಳಲ್ಲಿ ಗಲಿಲಾಯದ ಯೂದನು ಎದ್ದು ತನ್ನನ್ನು ಹಿಂಬಾಲಿಸುವಂತೆ ಅನೇಕ ಜನರನ್ನು ಸೆಳೆದನು. ಆದರೆ ಅವನು ಸಹ ನಾಶವಾದನು. ಅವನಿಗೆ ವಿಧೇಯರಾದ ವರೆಲ್ಲರೂ ಚದರಿಹೋದರು ಎಂದು ಹೇಳಿದನು. ಈಗ ನಾನು ನಿಮಗೆ ಹೇಳುವದೇನಂದರೆ--ಈ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಈ ಯೋಚನೆಯು ಅಥವಾ ಈ ಕಾರ್ಯವು ಮನುಷ್ಯರಿಂದಾಗಿದ್ದರೆ ಅದು ನಿಷ್ಫಲವಾಗುವದು. ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.
- Acts 23:9 ಅಪೊಸ್ತಲರ ಕೃತ್ಯಗಳು 23:9ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು.
- Acts 23:29 ಅಪೊಸ್ತಲರ ಕೃತ್ಯಗಳು 23:29ಆಗ ತಮ್ಮ ನ್ಯಾಯಪ್ರಮಾಣ ಸಂಬಂಧವಾದ ಪ್ರಶ್ನೆಗಳಿಂದ ಅವನ ಮೇಲೆ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲೀ ಬೇಡಿಗಳಿಗಾಗಲೀ ಯೋಗ್ಯವಾದ ಯಾವದನ್ನೂ ಅವರು ಅವನ ಮೇಲೆ ತಪ್ಪು ಹೊರಿಸ ಲಿಲ್ಲವೆಂದು ನಾನು ಗ್ರಹಿಸಿದೆನು.
- Acts 25:25 ಅಪೊಸ್ತಲರ ಕೃತ್ಯಗಳು 25:25ಆದರೆ ಮರಣದಂಡನೆಗೆ ಕಾರಣವಾದ ಯಾವ ದನ್ನೂ ಇವನು ಮಾಡಲಿಲ್ಲವೆಂದು ನಾನು ಕಂಡು ಕೊಂಡೆನು. ತಾನೇ ಔಗುಸ್ತನ ಮುಂದೆ ಹೇಳಿಕೊಳ್ಳು ತ್ತೇನೆಂದು ಬೇಡಿಕೊಂಡದ್ದರಿಂದ ಇವನನ್ನು ಕಳುಹಿಸು ವದಕ್ಕೆ ನಾನು ತೀರ್ಮಾನಿಸಿದ್ದೇನೆ.
- Jeremiah 36:19 ಯೆರೆಮೀಯ 36:19ಆಗ ಪ್ರಧಾನರು ಬಾರೂಕನಿಗೆ--ನೀನೂ ಯೆರೆವಿಾಯನೂ ಹೋಗಿ ಅಡಗಿಕೊಳ್ಳಿರಿ; ನೀವು ಎಲ್ಲಿದ್ದೀರೆಂಬದು ಯಾರಿಗೂ ತಿಳಿಯಲ್ಪಡದೆ ಇರಲಿ ಅಂದರು.
- Jeremiah 38:7–13 ಯೆರೆಮೀಯ 38:7–13ಆಗ ಅರಸನ ಮನೆಯಲ್ಲಿರುವ ಕಂಚುಕಿಯಾದ ಎಬೆದೆಲ್ಮೆಕನೆಂಬ ಕೂಷ್ಯನು ಯೆರೆವಿಾಯನನ್ನು ಅವರು ಕುಣಿಯಲ್ಲಿ ಹಾಕಿದರೆಂದು ಕೇಳಿದಾಗ ಅರಸನು ಬೆನ್ಯಾವಿಾನನ ಬಾಗಲಲ್ಲಿ ಕೂತಿರಲಾಗಿ, ಎಬೆದ್ಮೆಲೆ ಕನು ಅರಸನ ಮನೆಯಿಂದ ಹೊರಟು ಅರಸನ ಸಂಗಡ ಮಾತ ನಾಡಿ ಹೇಳಿದ್ದೇನಂದರೆ-- ಅರಸನಾದ ನನ್ನೊ ಡೆಯನೇ, ಈ ಮನುಷ್ಯರು ಕುಣಿಯಲ್ಲಿ ಹಾಕಿದ ಪ್ರವಾ ದಿಯಾದ ಯೆರೆವಿಾಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ; ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ ಅಂದನು. ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ ನೀನು ಇಲ್ಲಿಂದ ಮೂವತ್ತು ಮಂದಿ ಮನುಷ್ಯರನ್ನು ಕರಕೊಂಡು ಹೋಗಿ ಪ್ರವಾದಿಯಾದ ಯೆರೆವಿಾಯನನ್ನು ಅವನು ಸಾಯುವದಕ್ಕಿಂತ ಮುಂಚೆ ಕುಣಿಯೊಳಗಿಂದ ಎತ್ತೆಂದು ಆಜ್ಞಾಪಿಸಿದನು. ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರಕೊಂಡು ಖಜಾನೆ ಕೆಳಗಿರುವ ಅರಮನೆಗೆ ಹೋಗಿ ಅಲ್ಲಿಂದ ಹರಿದು ಹೋದ ಹಳೇ ಬಟ್ಟೆಗಳನ್ನೂ ಸವೆದು ಹೋದ ಹಳೇ ವಸ್ತ್ರಗಳನ್ನೂ ತಕ್ಕೊಂಡು ಅವುಗಳನ್ನು ಹಗ್ಗಗಳಿಂದ ಯೆರೆವಿಾಯನ ಬಳಿಗೆ ಕುಣಿಯೊಳಗೆ ಇಳಿಸಿದನು. ಕೂಷ್ಯನಾದ ಎಬೆದ್ಮೆಲೆಕನು ಯೆರೆವಿಾಯನಿಗೆ-- ಹರಿದು ಸವೆದು ಹೋದ ಈ ಹಳೇಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ ಅಂದನು; ಯೆರೆ ವಿಾಯನು ಹಾಗೆ ಮಾಡಿದನು. ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.
- Matthew 27:23–24 ಮತ್ತಾಯನು 27:23–24ಆಗ ಅಧಿಪತಿಯು--ಯಾಕೆ? ಆತನು ಕೆಟ್ಟದ್ದೇನು ಮಾಡಿ ದ್ದಾನೆ ಅಂದನು. ಆದರೆ ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಹೆಚ್ಚಾಗಿ ಕೂಗಿಕೊಂಡರು. ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು.
- Jeremiah 36:25 ಯೆರೆಮೀಯ 36:25ಹೀಗಾದರೂ ಎಲ್ನಾಥಾ ನನೂ ದೆಲಾಯನೂ ಗೆಮರ್ಯನೂ ಆ ಸುರಳಿಯು ಸುಡಲ್ಪಡದ ಹಾಗೆ ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.
- Jeremiah 26:11 ಯೆರೆಮೀಯ 26:11ಆಗ ಯಾಜಕರೂ ಪ್ರವಾದಿ ಗಳೂ ಪ್ರಧಾನರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ --ಈ ಮನುಷ್ಯನು ಮರಣಕ್ಕೆ ತಕ್ಕವನು. ಯಾಕಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ ಅವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ ಎಂಬದೇ.
- Luke 23:14–15 ಲೂಕನು 23:14–15ಜನರು ತಿರಿಗಿ ಬೀಳುವಂತೆ ಮಾಡುತ್ತಾನೆಂದು ನೀವು ಈ ಮನುಷ್ಯನನ್ನು ನನ್ನ ಬಳಿಗೆ ತಂದಿದ್ದೀರಿ; ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಮಾತ್ರವಲ್ಲದೆ ಹೆರೋದ ನಿಗೆ ಸಹ ಯಾವದೂ ಕಾಣಲಿಲ್ಲ; ಯಾಕಂದರೆ ನಾನು ನಿಮ್ಮನ್ನು ಅವನ ಬಳಿಗೆ ಕಳುಹಿಸಿದೆನು; ಇಗೋ, ಅವನೂ ಆತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
- Acts 26:31–32 ಅಪೊಸ್ತಲರ ಕೃತ್ಯಗಳು 26:31–32ಅವರು ಆಚೆಗೆ ಹೋಗಿ--ಈ ಮನುಷ್ಯನು ಮರಣದಂಡನೆಗಾಗಲೀ ಬೇಡಿಗಳಿ ಗಾಗಲೀ ಯೋಗ್ಯವಾದ ಯಾವದನ್ನೂ ಮಾಡಲಿಲ್ಲ ವೆಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು. ಆಗ ಅಗ್ರಿಪ್ಪನು ಫೆಸ್ತನಿಗೆ--ಈ ಮನುಷ್ಯನು ಕೈಸರನಿಗೆ ಹೇಳಿ ಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು ಎಂದು ಹೇಳಿದನು.
- Matthew 27:54 ಮತ್ತಾಯನು 27:54ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಬೇರೆ ಸಂಭವಗಳು ನಡೆದದ್ದನ್ನೂ ನೋಡಿ ಬಹಳವಾಗಿ ಭಯಪಟ್ಟು-- ನಿಜವಾಗಿಯೂ ಈತನು ದೇವಕುಮಾರನಾಗಿದ್ದನು ಅಂದರು