Jeremiah · chapter 3 · verse 17
Jeremiah 3:17 in Kannada
ಆ ಕಾಲದಲ್ಲಿ ಯೆರೂಸಲೇಮು ಕರ್ತನ ಸಿಂಹಾಸನವೆಂದು ಕರೆಯಲ್ಪಡುವದು; ಜನಾಂಗಗ ಳೆಲ್ಲಾ ಅದರ ಬಳಿಗೆ ಕರ್ತನ ಹೆಸರಿನ ಬಳಿಗೆ ಮತ್ತು ಯೆರೂಸಲೇಮಿನೊಳಗೆ ಕೂಡಿಸಲ್ಪಡುವವು; ಇನ್ನು ಮೇಲೆ ತಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳರು.
Aa kaaladalli yeroosalemu kartana sinhaasanavendu kareyalpaduvadu; janaangaga lellaa adara balige kartana hesarina balige mattu yeroosaleminolage koodisalpaduvavu; innu mele tamma ketta hrudayada kalpaneya prakaara nadakollaru.
Jeremiah 3:17 in English
- King James Version (KJV)
- At that time they shall call Jerusalem the throne of the LORD; and all the nations shall be gathered unto it, to the name of the LORD, to Jerusalem: neither shall they walk any more after the imagination of their evil heart.
- World English Bible (WEB)
- At that time they will call Jerusalem ‘The LORD’s Throne;’ and all the nations will be gathered to it, to the LORD’s name, to Jerusalem. They will no longer walk after the stubbornness of their evil heart.
- American Standard Version (ASV)
- At that time they shall call Jerusalem the throne of Jehovah; and all the nations shall be gathered unto it, to the name of Jehovah, to Jerusalem: neither shall they walk any more after the stubbornness of their evil heart.
- Bible in Basic English (BBE)
- At that time Jerusalem will be named the seat of the Lord's kingdom; and all the nations will come together to it, to the name of the Lord, to Jerusalem: and no longer will their steps be guided by the purposes of their evil hearts.
- Darby Translation (DBY)
- At that time they shall call Jerusalem the throne of Jehovah; and all the nations shall be gathered unto it, to the name of Jehovah, to Jerusalem; and they shall no more walk after the stubbornness of their evil heart.
- Webster's Bible (WBS)
- At that time they shall call Jerusalem the throne of the LORD; and all the nations shall be gathered to it, to the name of the LORD, to Jerusalem; neither shall they walk any more after the imagination of their evil heart.
- Young's Literal Translation (YLT)
- At that time they cry to Jerusalem, 'O throne of Jehovah,' And gathered unto her hath been all the nations, For the name of Jehovah, to Jerusalem, Nor do they go any more after the stubbornness of their evil heart.
Read in context
- 15ನನ್ನ ಹೃದ ಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು; ಅವರು ತಿಳುವಳಿಕೆಯಿಂದಲೂ ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
- 16ನೀವು ದೇಶದಲ್ಲಿ ಅಭಿ ವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ --ಕರ್ತನ ಒಡಂಬಡಿಕೆಯ ಮಂಜೂ ಷವು ಎಂದು ಇನ್ನು ಮೇಲೆ ಅವರು ಹೇಳುವದಿಲ್ಲ ಇಲ್ಲವೆ ಅದು ಮನಸ್ಸಿಗೆ ಬರುವದಿಲ್ಲ ಇಲ್ಲವೆ ಅದು ಜ್ಞಾಪಕಕ್ಕೆ ಬಾರದು; ಇಲ್ಲವೆ ವಿಚಾರಿಸಲ್ಪಡುವದಿಲ್ಲ; ಇನ್ನು ಮೇಲೆ ಮಾಡಲ್ಪಡುವದಿಲ್ಲ ಎಂದು ಕರ್ತನು ಅನ್ನು ತ್ತಾನೆ.
- 17ಆ ಕಾಲದಲ್ಲಿ ಯೆರೂಸಲೇಮು ಕರ್ತನ ಸಿಂಹಾಸನವೆಂದು ಕರೆಯಲ್ಪಡುವದು; ಜನಾಂಗಗ ಳೆಲ್ಲಾ ಅದರ ಬಳಿಗೆ ಕರ್ತನ ಹೆಸರಿನ ಬಳಿಗೆ ಮತ್ತು ಯೆರೂಸಲೇಮಿನೊಳಗೆ ಕೂಡಿಸಲ್ಪಡುವವು; ಇನ್ನು ಮೇಲೆ ತಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳರು.
- 18ಆ ದಿನಗಳಲ್ಲಿ ಯೆಹೂದದ ಮನೆ ತನವು ಇಸ್ರಾಯೇಲಿನ ಮನೆಯ ಸಂಗಡ ಹೋಗು ವದು; ಅವರು ಏಕವಾಗಿ ಉತ್ತರ ದೇಶದಿಂದ ನಾನು ನಿಮ್ಮ ತಂದೆಗಳಿಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಬರುವರು.
- 19ಆದರೆ ನಾನು--ನಿನ್ನನ್ನು ಮಕ್ಕಳೊಳಗೆ ಇಟ್ಟು ಮನೋಹರವಾದ ದೇಶವನ್ನೂ ಜನಾಂಗಗಳವರ ಸೈನ್ಯಗಳ ರಮ್ಯವಾದ ಸ್ವಾಸ್ತ್ಯವನ್ನೂ ನಿನಗೆ ಕೊಡು ವದು ಹೇಗೆಂದು ನಾನು ಅಂದುಕೊಂಡೆನು; ನಾನು --ನನ್ನ ತಂದೆಯೇ, ನೀನು ನನ್ನನ್ನು ಕರೆದು, ನನ್ನನ್ನು ಬಿಟ್ಟು ತಿರುಗುವದಿಲ್ಲವೆಂದು ಅಂದುಕೊಂಡೆನು.
Cross references
- Ezekiel 43:7 ಯೆಹೆಜ್ಕೇಲನು 43:7ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ.
- Micah 4:1–5 ಮೀಕ 4:1–5ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು. ಆಗ ಆತನು ಅನೇಕ ಜನಗಳ ಮಧ್ಯದಲ್ಲಿ ನ್ಯಾಯತೀರಿಸಿ ದೂರದಲ್ಲಿರುವ ಬಲವಾದ ಜನಾಂಗ ಗಳಿಗೆ ತೀರ್ಪುಕೊಡುವನು; ಅವರು ತಮ್ಮ ಕತ್ತಿಗಳನ್ನು ನೇಗಲಿನ ಗುಳಗಳಾಗಿಯೂ ತಮ್ಮ ಈಟಿಗಳನ್ನು ಕುಡು ಗೋಲುಗಳಾಗಿಯೂ ಮಾಡುವರು; ಜನಾಂಗವು ಜನಾಂಗದ ಮೇಲೆ ಕತ್ತಿಯನ್ನು ಎತ್ತದು; ಯುದ್ಧಾಭ್ಯಾಸ ಇನ್ನು ಮೇಲೆ ಇರದು. ಆದರೆ ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷೇ ಬಳ್ಳಿಯ ಕೆಳಗೂ ತನ್ನ ತನ್ನ ಅಂಜೂರದ ಗಿಡದ ಕೆಳಗೂ ಕೂತುಕೊಳ್ಳುವನು. ಭಯಪಡಿಸುವವನು ಯಾರೂ ಇರುವದಿಲ್ಲ. ಯಾಕಂದರೆ ಸೈನ್ಯಗಳ ಕರ್ತನ ಬಾಯಿ ಅದನ್ನು ನುಡಿದಿದೆ. ಎಲ್ಲಾ ಜನಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ದೇವರ ಹೆಸರಿನಲ್ಲಿ ನಡೆ ಯುವನು; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರಿನಲ್ಲಿ ಎಂದೆಂದಿಗೂ ನಡೆಯುವೆವು.
- Jeremiah 17:12 ಯೆರೆಮೀಯ 17:12ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾ ಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Jeremiah 11:8 ಯೆರೆಮೀಯ 11:8ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ; ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡಕೊಂಡರು; ಆದದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಮಾತು ಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.
- Isaiah 2:2–4 ಯೆಶಾಯ 2:2–4ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು. ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು. ಆತನು ಅನೇಕ ಜನಾಂಗ ಗಳ ಮಧ್ಯದಲ್ಲಿ ನ್ಯಾಯ ತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವನು; ಅವರು ತಮ್ಮ ಕತ್ತಿಗಳನ್ನು ನೇಗಿಲಿನ ಗುಳಗಳನ್ನಾಗಿಯೂ ತಮ್ಮ ಈಟಿಗಳನ್ನು ಕುಡುಗೋ ಲುಗಳನ್ನಾಗಿಯೂ ಬಡಿಯುವರು; ಜನಾಂಗಕ್ಕೆ ವಿರೋ ಧವಾಗಿ ಜನಾಂಗವು ಕತ್ತಿಯನ್ನು ಎತ್ತದು; ಇಲ್ಲವೆ ಇನ್ನು ಮೇಲೆ ಯುದ್ಧಾಭ್ಯಾಸವು ಇರುವದೇ ಇಲ್ಲ.
- Isaiah 60:3–9 ಯೆಶಾಯ 60:3–9ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು. ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು, ಅವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ; ನಿನ್ನ ಕುಮಾ ರರು ದೂರದಿಂದ ಬರುವರು ನಿನ್ನ ಕುಮಾರ್ತೆಯರು ನಿನ್ನ ಪಕ್ಕೆಯಲ್ಲಿ ಪೋಷಣೆ ಹೊಂದುವರು. ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ.
- Isaiah 56:6 ಯೆಶಾಯ 56:6ಕರ್ತನನ್ನು ಸೇವಿಸುವದಕ್ಕೂ ಆತನ ಹೆಸರನ್ನು ಪ್ರೀತಿಮಾಡುವದಕ್ಕೂ ಆತನ ಸೇವಕರಾಗಿ ರುವದಕ್ಕೂ ತಾವೇ ಕರ್ತನೊಂದಿಗೆ ಸೇರಿಕೊಂಡಿರುವ ಅನ್ಯರ ಮಕ್ಕಳನ್ನು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಕೊಳ್ಳುವ ಪ್ರತಿಯೊಬ್ಬನನ್ನೂ ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವವರನೂ
- Isaiah 66:20 ಯೆಶಾಯ 66:20ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Isaiah 49:18–23 ಯೆಶಾಯ 49:18–23ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ. ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು. ನೀನು ಕಳಕೊಂಡ ಮಕ್ಕಳ ಸ್ಥಳವು ನನಗೆ ಇಕ್ಕಟ್ಟಾಯಿತು; ನಾನು ವಾಸಿಸುವದಕ್ಕೆ ಸ್ಥಳ ಕೊಡು ಎಂದು ಹೇಳುವರು. ಆಗ ನೀನು ನನ ಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನೋ, ಮಕ್ಕಳನ್ನು ಕಳೆದುಕೊಂಡವಳು, ಏಕಾಂತ ವಾಗಿ ಸೆರೆಯಲ್ಲಿದ್ದು ಹೊರಗೆ ಹಾಕಲ್ಪಟ್ಟವಳ ಹಾಗೆ ಇದ್ದೆನು. ಇವರನ್ನು ಸಾಕಿದವರು ಯಾರು? ಅವರೆ ಲ್ಲಿದ್ದರು ಎಂದು ಅಂದುಕೊಳ್ಳುವಿ. ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು. ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
- Jeremiah 9:14 ಯೆರೆಮೀಯ 9:14ತಮ್ಮ ಹೃದಯದ ಕಾಠಿಣ್ಯದ ಪ್ರಕಾರವಾಗಿಯೂ ತಮ್ಮ ತಂದೆಗಳು ಅವರಿಗೆ ಬೋಧಿಸಿದ ಬಾಳ್ ದೇವತೆ ಗಳ ಹಿಂದೆಯೂ ನಡೆದರು.
Original words (Hebrew)
- time · H6256עֵת ʻêth
- call · H7121קָרָא qârâʼ
- Jerusalem · H3389יְרוּשָׁלַ͏ִם Yᵉrûwshâlaim
- throne · H3678כִּסֵּא kiççêʼ
- nations · H1471גּוֹי gôwy
- gathered · H6960קָוָה qâvâh
- name · H8034שֵׁם shêm
- Jerusalem · H3389יְרוּשָׁלַ͏ִם Yᵉrûwshâlaim
- walk · H3212יָלַךְ yâlak
- after · H310אַחַר ʼachar
- imagination · H8307שְׁרִירוּת shᵉrîyrûwth
- evil · H7451רַע raʻ
- heart · H3820לֵב lêb