Jeremiah · chapter 30 · verse 20
Jeremiah 30:20 in Kannada
ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.
Avara makkalu saha poorva kaalada haage iruvaru; avara sabheyu nanna munde sthaapisalpaduvadu; avarannu baadhisuvavarellarannu vichaarisuvenu.
Jeremiah 30:20 in English
- King James Version (KJV)
- Their children also shall be as aforetime, and their congregation shall be established before me, and I will punish all that oppress them.
- World English Bible (WEB)
- Their children also will be as before, and their congregation will be established before me. I will punish all who oppress them.
- American Standard Version (ASV)
- Their children also shall be as aforetime, and their congregation shall be established before me; and I will punish all that oppress them.
- Bible in Basic English (BBE)
- And their children will be as they were in the old days, and the meeting of the people will have its place before me, and I will send punishment on all who are cruel to them.
- Darby Translation (DBY)
- And their sons shall be as aforetime; and their assembly shall be established before me; and I will punish all that oppress them.
- Webster's Bible (WBS)
- Their children also shall be as in former time, and their congregation shall be established before me, and I will punish all that oppress them.
- Young's Literal Translation (YLT)
- And his sons have been as aforetime, And his company before Me is established, And I have seen after all his oppressors.
Read in context
- 18ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.
- 19ಅವುಗಳೊಳಗಿಂದ ಕೃತಜ್ಞತಾ ಸ್ತೋತ್ರವೂ ಸಂತೋ ಷಪಡುವವರ ಸ್ವರವೂ ಹೊರಡುವದು; ಅವರನ್ನು ಅಭಿವೃದ್ಧಿಮಾಡುವೆನು; ಅವರು ಕೊಂಚವಾಗಿರರು, ಅವರು ಅಲ್ಪವಾಗದ ಹಾಗೆ ಅವರಿಗೆ ಘನವನ್ನು ಕೊಡುವೆನು.
- 20ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.
- 21ಅವರ ಪ್ರಧಾನರು ಅವರೊಳಗೆ ಇರುವರು; ಅವರನ್ನಾಳುವವನು ಅವರ ಮಧ್ಯದಲ್ಲಿಂದ ಹೊರಡುವನು; ನಾನು ಅವನನ್ನು ಹತ್ತಿರ ಬರಮಾಡು ವೆನು; ಅವನು ನನಗೆ ಸವಿಾಪಿಸುವನು; ಆದರೆ ನನಗೆ ಸವಿಾಪಿಸುವದಕ್ಕೆ ತನ್ನ ಹೃದಯ ನಿಶ್ಚಯ ಮಾಡಿಕೊಂಡ ಇವನಾರೆಂದು ಕರ್ತನು ಅನ್ನುತ್ತಾನೆ.
- 22ನೀವು ನನಗೆ ಜನರಾಗಿರುವಿರಿ; ನಾನು ನಿಮಗೆ ದೇವರಾಗಿರುವೆನು.
Cross references
- Jeremiah 32:39 ಯೆರೆಮೀಯ 32:39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- Jeremiah 50:33–34 ಯೆರೆಮೀಯ 50:33–34ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು.
- Jeremiah 2:3 ಯೆರೆಮೀಯ 2:3ಇಸ್ರಾಯೇಲು ಕರ್ತನಿಗೆ ಪರಿಶುದ್ಧವೂ ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿತ್ತು; ಅದನ್ನು ತಿಂದುಬಿಟ್ಟವರೆಲ್ಲರೂ ಅಪರಾಧಿ ಗಳಾಗುವರು; ಅವರಿಗೆ ಕೇಡು ಬರುವದೆಂದು ಕರ್ತನು ಅನ್ನುತ್ತಾನೆ.
- Psalm 102:18 ಕೀರ್ತನೆಗಳು 102:18ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು.
- Isaiah 51:22 ಯೆಶಾಯ 51:22ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Psalm 102:28 ಕೀರ್ತನೆಗಳು 102:28ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.
- Isaiah 49:26 ಯೆಶಾಯ 49:26ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
- Genesis 17:5–9 ಆದಿಕಾಂಡ 17:5–9ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ. ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು. ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ. ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು. ಇದಲ್ಲದೆ ದೇವರು ಅಬ್ರಹಾಮನಿಗೆ--ನೀನು ನಿನ್ನ ತರುವಾಯ ಬರುವ ಸಂತಾನಗಳೂ ತಲತಲಾಂತರ ಗಳಲ್ಲಿ ನನ್ನ ಒಡಂಬಡಿಕೆಯನ್ನು ಕೈಕೊಳ್ಳಬೇಕು.
- Jeremiah 30:16 ಯೆರೆಮೀಯ 30:16ಆದರೂ ನಿನ್ನನ್ನು ನುಂಗುವವರೆಲ್ಲರೂ ನುಂಗಲ್ಪಡು ವರು; ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಗೆ ಹೋಗುವನು; ನಿನ್ನನ್ನು ಕೊಳ್ಳೆಮಾಡುವವರು ಕೊಳ್ಳೆ ಯಾಗುವರು; ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.
- Psalm 90:16–17 ಕೀರ್ತನೆಗಳು 90:16–17ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು; ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
- Isaiah 54:14 ಯೆಶಾಯ 54:14ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆ ಯಿಂದ ದೂರವಾಗಿರುವಿ; ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸವಿಾಪಕ್ಕೆ ಬಾರದು.
- Isaiah 1:26–27 ಯೆಶಾಯ 1:26–27ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ. ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು