Genesis · chapter 17 · verse 5
Genesis 17:5 in Kannada
ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
Maatravallade ninna hesaru innu abraama endu kareyalpadade ninna hesaru abrahaamanendu hesariruvadu; yaakandare naanu ninnannu aneka janaangagala tandeyannaagi maadiddene.
Genesis 17:5 in English
- King James Version (KJV)
- Neither shall thy name any more be called Abram, but thy name shall be Abraham; for a father of many nations have I made thee.
- World English Bible (WEB)
- Your name will no more be called Abram, but your name will be Abraham; for I have made you the father of a multitude of nations.
- American Standard Version (ASV)
- Neither shall thy name any more be called Abram, but thy name shall be Abraham; for the father of a multitude of nations have I made thee.
- Bible in Basic English (BBE)
- No longer will your name be Abram, but Abraham, for I have made you the father of a number of nations.
- Darby Translation (DBY)
- And thy name shall no more be called Abram, but thy name shall be Abraham; for a father of a multitude of nations have I made thee.
- Webster's Bible (WBS)
- Neither shall thy name any more be called Abram, but thy name shall be Abraham; for a father of many nations have I made thee.
- Young's Literal Translation (YLT)
- and thy name is no more called Abram, but thy name hath been Abraham, for father of a multitude of nations have I made thee;
Read in context
- 3ಆಗ ಅಬ್ರಾಮನು ಸಾಷ್ಟಾಂಗಬಿದ್ದನು. ಆಗ ದೇವರು ಅವನ ಸಂಗಡ ಮಾತನಾಡಿದ್ದೇನಂದರೆ--
- 4ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.
- 5ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
- 6ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
- 7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
Cross references
- Matthew 1:21–23 ಮತ್ತಾಯನು 1:21–23ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು. ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು. ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.
- Nehemiah 9:7 ನೆಹೆಮೀಯ 9:7ನೀನು ಅಬ್ರಾಮನನ್ನು ಆದು ಕೊಂಡ ದೇವರಾಗಿರುವ ಕರ್ತನು. ನೀನು ಅವನನ್ನು ಊರ್ ಎಂಬ ಕಸ್ದೀಯರ ಪಟ್ಟಣದಿಂದ ಹೊರಗೆ ಬರಮಾಡಿ ಅವನಿಗೆ ಅಬ್ರಹಾಮ್ ಎಂದು ಹೆಸರಿಟ್ಟು
- Romans 4:17 ರೋಮಾಪುರದವರಿಗೆ 4:17(ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆ ಯಾಗಿ ನೇಮಿಸಿದ್ದೇನೆ ಎಂದು ಬರೆದಿರುವ ಪ್ರಕಾರ) ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲ ದ್ದನ್ನು ಇರುವದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು ದೇವರ ಮುಂದೆ ಅಬ್ರಹಾಮನು ನಂಬಿದನು.
- Genesis 17:15 ಆದಿಕಾಂಡ 17:15ಇದಲ್ಲದೆ ದೇವರು ಅಬ್ರಹಾಮನಿಗೆ--ನಿನ್ನ ಹೆಂಡತಿಯಾದ ಸಾರಯಳ ವಿಷಯದಲ್ಲಾದರೋ ಆಕೆಯನ್ನು ಸಾರಯಳೆಂದು ಕರೆಯಬೇಡ; ಅವಳ ಹೆಸರು ಸಾರಾ.
- Genesis 32:28 ಆದಿಕಾಂಡ 32:28ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- Isaiah 62:2–4 ಯೆಶಾಯ 62:2–4ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ. ಕರ್ತನ ಕೈಯಲ್ಲಿ ಮಹಿಮೆಯ ಕಿರೀಟ ವಾಗಿಯೂ ನಿನ್ನ ದೇವರ ಅಂಗೈಯಲ್ಲಿ ರಾಜತ್ವದ ಕಿರೀಟವಾಗಿಯೂ ಇರುವಿ. ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
- Jeremiah 20:3 ಯೆರೆಮೀಯ 20:3ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್ ಮಿಸ್ಸಾ ಬೀಬ್ನೆಂದು ಕರೆಯುತ್ತಾನೆಂದು ಹೇಳಿದನು.
- Revelation 2:17 ಪ್ರಕಟನೆ 2:17ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನೂ ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವನ್ನು ತಿನ್ನುವದಕ್ಕೆ ನಾನು ಕೊಡು ವೆನು; ಇದಲ್ಲದೆ ಅವನಿಗೆ ಹೊಸ ಹೆಸರು ಬರೆದಿರುವ ಬಿಳೀ ಕಲ್ಲನ್ನು ಕೊಡುವೆನು ಅದನ್ನು ಹೊಂದಿದವನಿಗೇ ಹೊರತು ಅದು ಇನ್ನಾರಿಗೂ ತಿ
- Jeremiah 23:6 ಯೆರೆಮೀಯ 23:6ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ.
- 2 Samuel 12:25 2 ಸಮುವೇಲನು 12:25ಪ್ರವಾದಿಯಾದ ನಾತಾ ನನ ಮುಖಾಂತರ ಕರ್ತನ ನಿಮಿತ್ತ ಅವನಿಗೆ ಯೆದೀದ್ಯ ನೆಂದು ಹೆಸರಿಟ್ಟನು.
- John 1:42 ಯೋಹಾನನು 1:4242ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ).
- Isaiah 65:15 ಯೆಶಾಯ 65:15ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.