Psalms · chapter 90 · verse 16
Psalm 90:16 in Kannada
ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
Ninna sevakarige ninna kelasavoo avara makkalige ninna prabheyoo toribarali.namma devaraada kartana ramyateyu namma mele irali; naavu kaihaakida kailasavannu namage sthirapadisu; haudu, namma kelasavannu sthirapadisu;
Psalm 90:16 in English
- King James Version (KJV)
- Let thy work appear unto thy servants, and thy glory unto their children.
- World English Bible (WEB)
- Let your work appear to your servants, your glory to their children.
- American Standard Version (ASV)
- Let thy work appear unto thy servants, And thy glory upon their children.
- Bible in Basic English (BBE)
- Make your work clear to your servants, and your glory to their children.
- Darby Translation (DBY)
- Let thy work appear unto thy servants, and thy majesty unto their sons.
- Webster's Bible (WBS)
- Let thy work appear to thy servants, and thy glory to their children.
- Young's Literal Translation (YLT)
- Let Thy work appear unto Thy servants, And Thine honour on their sons.
Read in context
- 14ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
- 15ನೀನು ನಮ್ಮನ್ನು ಕುಂದಿಸಿದ ದಿವಸಗಳ ಪ್ರಕಾರವೂ ನಾವು ಕೇಡನ್ನು ನೋಡಿದ ವರುಷಗಳ ಪ್ರಕಾರವೂ ನಮ್ಮನ್ನು ಸಂತೋಷಪಡಿಸು.
- 16ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
- 17ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
Cross references
- Habakkuk 3:2 ಹಬಕ್ಕೂಕ 3:2ಕರ್ತನೇ, ವರುಷ ಗಳ ಮಧ್ಯದಲ್ಲಿ ನಿನ್ನ ಕೆಲಸವನ್ನು ಉಜ್ಜೀವಿಸಮಾಡು. ವರುಷಗಳ ಮಧ್ಯದಲ್ಲಿ ತಿಳಿಯಮಾಡು, ರೌದ್ರದಲ್ಲಿ ಕರುಣೆಯನ್ನು ಜ್ಞಾಪಕಮಾಡು;
- Psalm 44:1 ಕೀರ್ತನೆಗಳು 44:1ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- Deuteronomy 1:39 ಧರ್ಮೋಪದೇಶಕಾಂಡ 1:39ಇದಲ್ಲದೆ ಸುಲಿಗೆ ಆಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈಹೊತ್ತು ಮೇಲು ಕೇಡು ಅರಿಯದ ನಿಮ್ಮ ಮಕ್ಕಳೂ ಅವರೇ ಅದರಲ್ಲಿ ಪ್ರವೇಶಿಸುವರು; ಅವರಿಗೆ ಅದನ್ನು ಕೊಡುವೆನು; ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
- Numbers 14:15–24 ಅರಣ್ಯಕಾಂಡ 14:15–24ಈಗ ನೀನು ಈ ಜನರನ್ನು ಒಬ್ಬ ಮನುಷ್ಯನೋ ಎಂಬಂತೆ ಕೊಂದುಹಾಕಿದರೆ ನಿನ್ನ ಸುದ್ದಿಯನ್ನು ಕೇಳಿದ ಜನಾಂಗಗಳು-- ಕರ್ತನು ಈ ಜನರನ್ನು ಅವರಿಗೆ ಪ್ರಮಾಣಮಾಡಿದ ದೇಶಕ್ಕೆ ತರಲು ಶಕ್ತಿಸಾಲದ ಕಾರಣ ಅವರನ್ನು ಅರಣ್ಯದಲ್ಲಿ ಕೊಂದು ಹಾಕಿದನು ಎಂದು ಹೇಳುವರು. ಈಗ ನೀನು ಹೇಳಿದ ಪ್ರಕಾರ ನನ್ನ ಕರ್ತನ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ. ಕರ್ತನು ದೀರ್ಘಶಾಂತನೂ ಮಹಾಕೃಪೆಯುಳ್ಳವನೂ ಅಕ್ರಮವನ್ನೂ ದ್ರೋಹವನ್ನೂ ಮನ್ನಿಸುವಾತನೂ ಅಪರಾಧಿಯನ್ನು ನಿರಪರಾಧಿಯೆಂದು ಎಣಿಸದವನೂ ಮೂರನೇ ನಾಲ್ಕನೇ ತಲೆಗಳ ವರೆಗೂ ಪಿತೃಗಳ ಅಕ್ರಮವನ್ನು ಮಕ್ಕಳಲ್ಲಿ ವಿಚಾರಿಸುವಾತನೂ ಎಂದು ನೀನು ಹೇಳಿದ್ದೀಯಲ್ಲಾ? ನಿನ್ನ ಕೃಪೆಯು ದೊಡ್ಡದಾಗಿರುವ ಪ್ರಕಾರವೂ ನೀನು ಐಗುಪ್ತದಿಂದ ಇಲ್ಲಿಯ ವರೆಗೆ ಮನ್ನಿಸಿದ ಪ್ರಕಾರವೂ ಈ ಜನರ ಅಕ್ರಮವನ್ನು ದಯ ದಿಂದ ಮನ್ನಿಸು ಎಂದು ಬೇಡಿಕೊಂಡನು. ಆಗ ಕರ್ತನು--ನಿನ್ನ ಮಾತಿನ ಪ್ರಕಾರ ಮನ್ನಿಸಿ ದ್ದೇನೆ. ಆದಾಗ್ಯೂ ನನ್ನ ಜೀವದಾಣೆ, ಭೂಮಿಯೆಲ್ಲಾ ಕರ್ತನ ಮಹಿಮೆಯಿಂದ ತುಂಬಿರುವದು. ಐಗುಪ್ತ ದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿದ ಸೂಚಕಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಸಕಲ ಮನುಷ್ಯರು ನನ್ನನ್ನು ಈಗ ಹತ್ತು ಸಾರಿ ಶೊಧಿಸಿ ಕೇಳದೆ ಹೋದದ್ದರಿಂದ ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವದಿಲ್ಲ; ಇಲ್ಲವೆ ನನಗೆ ಕೋಪವನ್ನು ಎಬ್ಬಿಸಿದವರು ಸಹ ಅದನ್ನು ನೋಡು ವದಿಲ್ಲ. ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ನನ್ನ ಆತ್ಮವಿದದ್ದರಿಂದಲೂ ಅವನು ನನ್ನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದಲೂ ಅವನು ಸಂಚರಿಸಿದ ದೇಶಕ್ಕೆ ಅವನನ್ನು ತರುವೆನು; ಅವನ ಸಂತಾನವು ಅದನ್ನು ಸ್ವತಂತ್ರಿಸಿಕೊಳ್ಳುವದು.
- Psalm 77:12 ಕೀರ್ತನೆಗಳು 77:12ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
- Numbers 14:30–31 ಅರಣ್ಯಕಾಂಡ 14:30–31ಯೆಫುನ್ನೆಯ ಮಗನಾದ ಕಾಲೇಬನು ನೂನನ ಮಗನಾದ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡಿಸುವದಕ್ಕಾಗಿ ಪ್ರಮಾಣಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವು ಬಾರದೆ ಇರುವಿರಿ. ಆದರೆ ಸುಲಿಗೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು; ನೀವು ಅಲಕ್ಷ್ಯ ಮಾಡಿದ ದೇಶವನ್ನು ಅವರು ಅನುಭವಿಸುವರು.
- Joshua 23:14 ಯೆಹೋಶುವ 23:14ಇಗೋ, ನಾನು ಇಂದು ಭೂಲೋಕದವರೆಲ್ಲರ ಮಾರ್ಗವಾಗಿ ಹೋಗುತ್ತೇನೆ. ನಿಮ್ಮ ದೇವರಾದ ಕರ್ತನು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೇ ಮಾತುಗಳಲ್ಲಿ ಒಂದು ಮಾತಾದರೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ; ಅವು ಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
- Psalm 92:4 ಕೀರ್ತನೆಗಳು 92:4ಕರ್ತನೇ, ನಿನ್ನ ಕ್ರಿಯೆಯಿಂದ ನನ್ನನ್ನು ಸಂತೋಷ ಪಡಿಸಿದ್ದೀ. ನಿನ್ನ ಕೈಕೆಲಸಗಳಲ್ಲಿ ನಾನು ಜಯ ಧ್ವನಿಗೈಯುತ್ತೇನೆ.
- Joshua 4:22–24 ಯೆಹೋಶುವ 4:22–24ತಿಳಿಸಬೇಕಾದದ್ದೇನಂದರೆ--ಇಸ್ರಾ ಯೇಲ್ಯರು ಒಣಗಿದ ಭೂಮಿಯಲ್ಲಿ ಈ ಯೊರ್ದನನ್ನು ದಾಟಿ ಬಂದರು. ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು. ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.