Jeremiah · chapter 33 · verse 16
Jeremiah 33:16 in Kannada
ಆ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡುವದು; ಯೆರೂಸಲೇಮು ಭದ್ರವಾಗಿ ವಾಸಿಸುವದು; ಆಕೆಯು (ಯೆರೂಸ ಲೇಮು) ಕರೆಯಲ್ಪಡುವ ಹೆಸರು ಇದೇ--ನಮ್ಮ ನೀತಿ ಯಾಗಿರುವ ಕರ್ತನು.
Aa dinagalalli yehoodavu rakshisalpaduvadu; yeroosalemu bhadravaagi vaasisuvadu; aakeyu (yeroosa lemu) kareyalpaduva hesaru ide--namma neeti yaagiruva kartanu.
Jeremiah 33:16 in English
- King James Version (KJV)
- In those days shall Judah be saved, and Jerusalem shall dwell safely: and this [is the name] wherewith she shall be called, The LORD our righteousness.
- World English Bible (WEB)
- In those days Judah will be saved, and Jerusalem will dwell safely. This is the name by which she will be called: The LORD our righteousness.”
- American Standard Version (ASV)
- In those days shall Judah be saved, and Jerusalem shall dwell safely; and this is [the name] whereby she shall be called: Jehovah our righteousness.
- Bible in Basic English (BBE)
- In those days, Judah will have salvation and Jerusalem will be safe: and this is the name which will be given to her: The Lord is our righteousness.
- Darby Translation (DBY)
- In those days shall Judah be saved, and Jerusalem shall dwell in safety. And this is the name wherewith she shall be called: Jehovah our Righteousness.
- Webster's Bible (WBS)
- In those days shall Judah be saved, and Jerusalem shall dwell in safety: and this [is the name] by which she shall be called, JEHOVAH our righteousness.
- Young's Literal Translation (YLT)
- In those days is Judah saved, And Jerusalem doth dwell confidently, And this [is] he whom Jehovah proclaimeth to her: 'Our Righteousness.'
Read in context
- 14ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯವರ ಸಂಗಡಲೂ ಯೆಹೂದನ ಮನೆಯವರ ಸಂಗಡಲೂ ವಾಗ್ದಾನವನ್ನು ಮಾಡಿದಂತೆ ಒಳ್ಳೇ ಮಾತನ್ನು ನೆರೆವೇರಿ ಸುವೆನು.
- 15ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು; ಆತನು ದೇಶದಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸುವನು.
- 16ಆ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡುವದು; ಯೆರೂಸಲೇಮು ಭದ್ರವಾಗಿ ವಾಸಿಸುವದು; ಆಕೆಯು (ಯೆರೂಸ ಲೇಮು) ಕರೆಯಲ್ಪಡುವ ಹೆಸರು ಇದೇ--ನಮ್ಮ ನೀತಿ ಯಾಗಿರುವ ಕರ್ತನು.
- 17ಕರ್ತನು ಹೀಗೆ ಹೇಳು ತ್ತಾನೆ--ದಾವೀದನಿಗೆ ಇಸ್ರಾಯೇಲಿನ ಮನೆಯ ಸಿಂಹಾಸನದಲ್ಲಿ ಕೂತುಕೊಳ್ಳುವ ಮನುಷ್ಯನು ಇಲ್ಲದೆ ಹೋಗುವದಿಲ್ಲ.
- 18ಯಾಜಕರಿಗೂ ಲೇವಿಯರಿಗೂ ನಿತ್ಯವಾಗಿ ನನ್ನ ಮುಂದೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಆಹಾರದ ಅರ್ಪಣೆಗಳನ್ನು ಬೆಂಕಿಯಿಂದ ಅರ್ಪಿಸುವವದಕ್ಕೂ ಬಲಿಗಳನ್ನು ಮಾಡುವದಕ್ಕೂ ಮನುಷ್ಯನು ಇಲ್ಲದೆ ಹೋಗುವದಿಲ್ಲ.
Cross references
- Jeremiah 23:6 ಯೆರೆಮೀಯ 23:6ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ.
- 1 Corinthians 1:30 1 ಕೊರಿಂಥದವರಿಗೆ 1:30ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- Isaiah 45:17 ಯೆಶಾಯ 45:17ಆದರೆ ಇಸ್ರಾಯೇಲ್ಯರಾದರೋ ಶಾಶ್ವತವಾದ ರಕ್ಷಣೆಯೊಂದಿಗೆ ಕರ್ತನಲ್ಲಿ ರಕ್ಷಿಸಲ್ಪ ಡುವರು; ನೀವು ಯುಗಯುಗಾಂತರಕ್ಕೂ ನಾಚಿಕೆ ಪಡುವದಿಲ್ಲ ಇಲ್ಲವೆ ಮಾನಭಂಗಪಡುವದಿಲ್ಲ.
- Philippians 3:9 ಫಿಲಿಪ್ಪಿಯವರಿಗೆ 3:9ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Romans 11:26 ರೋಮಾಪುರದವರಿಗೆ 11:26ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- Isaiah 45:22 ಯೆಶಾಯ 45:22ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
- Isaiah 45:24–25 ಯೆಶಾಯ 45:24–25ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು. ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
- 2 Peter 1:1 2 ಪೇತ್ರನು 1:1ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮೊಂದಿಗೆ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ--
- Ezekiel 28:26 ಯೆಹೆಜ್ಕೇಲನು 28:26ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.
- Ezekiel 34:25–28 ಯೆಹೆಜ್ಕೇಲನು 34:25–28ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು. ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು; ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು; ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
- Jeremiah 32:37 ಯೆರೆಮೀಯ 32:37ಇಗೋ, ನಾನು ನನ್ನ ಕೋಪ ದಲ್ಲಿಯೂ ಉಗ್ರದಲ್ಲಿಯೂ ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶಗಳೊಳಗಿಂದ ಅವರನ್ನು ಕೂಡಿಸಿ ಈ ಸ್ಥಳಕ್ಕೆ ತಿರಿಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.