Jeremiah · chapter 33 · verse 14
Jeremiah 33:14 in Kannada
ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯವರ ಸಂಗಡಲೂ ಯೆಹೂದನ ಮನೆಯವರ ಸಂಗಡಲೂ ವಾಗ್ದಾನವನ್ನು ಮಾಡಿದಂತೆ ಒಳ್ಳೇ ಮಾತನ್ನು ನೆರೆವೇರಿ ಸುವೆನು.
Igo, dinagalu baruvavendu kartanu annuttaane; aaga naanu israayelina maneyavara sangadaloo yehoodana maneyavara sangadaloo vaagdaanavannu maadidante olle maatannu nereveri suvenu.
Jeremiah 33:14 in English
- King James Version (KJV)
- Behold, the days come, saith the LORD, that I will perform that good thing which I have promised unto the house of Israel and to the house of Judah.
- World English Bible (WEB)
- “Behold, the days come,” says the LORD, “that I will perform that good word which I have spoken concerning the house of Israel and concerning the house of Judah.
- American Standard Version (ASV)
- Behold, the days come, saith Jehovah, that I will perform that good word which I have spoken concerning the house of Israel and concerning the house of Judah.
- Bible in Basic English (BBE)
- See, the days are coming, says the Lord, when I will give effect to the good word which I have said about the people of Israel and the people of Judah.
- Darby Translation (DBY)
- Behold, the days come, saith Jehovah, that I will perform the good word which I have spoken unto the house of Israel and unto the house of Judah.
- Webster's Bible (WBS)
- Behold, the days come, saith the LORD, that I will perform that good thing which I have promised to the house of Israel and to the house of Judah.
- Young's Literal Translation (YLT)
- Lo, days are coming, an affirmation of Jehovah, And I have established the good word That I spake unto the house of Israel, And concerning the house of Judah.
Read in context
- 12ಸೈನ್ಯಗಳ ಕರ್ತನು ಹೇಳುವದೇನಂದರೆ--ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಇನ್ನು ಮೇಲೆ ತಮ್ಮ ಮಂದೆಗಳನ್ನು ಮಲಗಿಸುವ ಕುರುಬರ ನಿವಾಸಗಳು ಇರುವವು.
- 13ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳ ಲ್ಲಿಯೂ ದಕ್ಷಿಣದ ಪಟ್ಟಣಗಳಲ್ಲಿಯೂ ಬೆನ್ಯಾವಿಾನನ ದೇಶದಲ್ಲಿಯೂ ಯೆರೂಸಲೇಮಿನ ಪ್ರದೇಶಗಳ ಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಗಳು ಎಣಿಸುವವನ ಕೈಕೆಳಗೆ ಹಾದು ಹೋಗುವವೆಂದು ಕರ್ತನು ಹೇಳುತ್ತಾನೆ.
- 14ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯವರ ಸಂಗಡಲೂ ಯೆಹೂದನ ಮನೆಯವರ ಸಂಗಡಲೂ ವಾಗ್ದಾನವನ್ನು ಮಾಡಿದಂತೆ ಒಳ್ಳೇ ಮಾತನ್ನು ನೆರೆವೇರಿ ಸುವೆನು.
- 15ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು; ಆತನು ದೇಶದಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸುವನು.
- 16ಆ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡುವದು; ಯೆರೂಸಲೇಮು ಭದ್ರವಾಗಿ ವಾಸಿಸುವದು; ಆಕೆಯು (ಯೆರೂಸ ಲೇಮು) ಕರೆಯಲ್ಪಡುವ ಹೆಸರು ಇದೇ--ನಮ್ಮ ನೀತಿ ಯಾಗಿರುವ ಕರ್ತನು.
Cross references
- Haggai 2:6–9 ಹಗ್ಗಾಯ 2:6–9ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ, ಇನ್ನು ಒಂದು ಸಾರಿ ಕೊಂಚ ಕಾಲವಾದ ಮೇಲೆ ನಾನು ಆಕಾಶಗಳನ್ನೂ ಭೂಮಿಯನ್ನೂ ಸಮುದ್ರ ವನ್ನೂ ಒಣಗಿದ ನೆಲವನ್ನೂ ಕದಲಿಸುತ್ತೇನೆ. ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Jeremiah 23:5 ಯೆರೆಮೀಯ 23:5ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು.
- 2 Corinthians 1:20 2 ಕೊರಿಂಥದವರಿಗೆ 1:20ಆದದರಿಂದ ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ದೇವರ ಎಲ್ಲಾ ವಾಗ್ದಾನ ಗಳು ಆತನಲ್ಲಿ ಹೌದಾಗಿವೆ, ಆತನಲ್ಲಿಯೇ ಆಮೆನ್ ಆಗಿವೆ.
- 1 Chronicles 17:13–14 1 ಪೂರ್ವಕಾಲವೃತ್ತಾಂತ 17:13–14ನಾನು ಅವನ ತಂದೆಯಾಗಿರು ವೆನು; ಅವನು ನನ್ನ ಮಗನಾಗಿರುವನು. ನಿನಗೆ ಮುಂಚೆ ಇದ್ದವನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ಅವನನ್ನು ನನ್ನ ಮನೆಯಲ್ಲಿಯೂ ನನ್ನ ರಾಜ್ಯದಲ್ಲಿಯೂ ಎಂದೆಂದಿಗೂ ನೆಲೆಗೊಳಿಸುವೆನು; ಅವನ ಸಿಂಹಾಸನವು ಯುಗ ಯುಗಕ್ಕೂ ಸ್ಥಿರವಾಗಿರುವದು.
- Genesis 49:10 ಆದಿಕಾಂಡ 49:10ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.
- Ezekiel 34:23–25 ಯೆಹೆಜ್ಕೇಲನು 34:23–25ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ. ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ; ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
- Jeremiah 29:10 ಯೆರೆಮೀಯ 29:10ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನಲ್ಲಿ ಎಪ್ಪತ್ತು ವರುಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿ ಸುವೆನು; ನನ್ನ ಶುಭ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು.
- Genesis 22:18 ಆದಿಕಾಂಡ 22:18ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Isaiah 32:1–2 ಯೆಶಾಯ 32:1–2ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯ ದಿಂದ ದೊರೆತನಮಾಡುವರು. ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ ಬಿರುಗಾಳಿ ಗೋಸ್ಕರ ಮರೆಮಾಡಿಕೊಳ್ಳುವಂತೆಯೂ ಸ್ಥಾನದ ಹಾಗೂ ಒಣಗಿದ ಸ್ಥಳದಲ್ಲಿರುವ ನೀರಿನ ಕಾಲುವೆಗಳ ಹಾಗೂ ಆಯಾಸವುಳ್ಳ ದೇಶದಲ್ಲಿರುವ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.
- Amos 9:11 ಆಮೋಸ 9:11ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.
- Zephaniah 3:15–17 ಚೆಫನ್ಯ 3:15–17ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Jeremiah 31:31–34 ಯೆರೆಮೀಯ 31:31–34ಇಗೋ, ನಾನು ಇಸ್ರಾಯೇಲಿನ ಮನೆತನದವರ ಸಂಗಡಲೂ ಯೆಹೂದದ ಮನೆತನದವರ ಸಂಗ ಡಲೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ. ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ. ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ. ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.