Jeremiah · chapter 36 · verse 2
Jeremiah 36:2 in Kannada
ಪುಸ್ತಕದ ಸುರಳಿಯನ್ನು ತಕ್ಕೊಂಡು ನಾನು ಇಸ್ರಾಯೇಲಿಗೂ ಯೆಹೂದಕ್ಕೂ ಎಲ್ಲಾ ಜನಾಂಗ ಗಳಿಗೂ ವಿರೋಧವಾಗಿ ನಿನ್ನ ಸಂಗಡ ಮಾತಾಡಿ ದಂದಿನಿಂದ ಯೋಷೀಯನ ದಿನಗಳು ಮೊದಲು ಗೊಂಡು ಈ ದಿನದ ವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
Pustakada suraliyannu takkondu naanu israayeligoo yehoodakkoo ellaa janaanga galigoo virodhavaagi ninna sangada maataadi dandininda yosheeyana dinagalu modalu gondu ee dinada varegoo ninage helida vaakyagalannellaa adaralli bare.
Jeremiah 36:2 in English
- King James Version (KJV)
- Take thee a roll of a book, and write therein all the words that I have spoken unto thee against Israel, and against Judah, and against all the nations, from the day I spake unto thee, from the days of Josiah, even unto this day.
- World English Bible (WEB)
- “Take a scroll of a book, and write in it all the words that I have spoken to you against Israel, against Judah, and against all the nations, from the day I spoke to you, from the days of Josiah even to this day.
- American Standard Version (ASV)
- Take thee a roll of a book, and write therein all the words that I have spoken unto thee against Israel, and against Judah, and against all the nations, from the day I spake unto thee, from the days of Josiah, even unto this day.
- Bible in Basic English (BBE)
- Take a book and put down in it all the words I have said to you against Israel and against Judah and against all the nations, from the day when my word came to you in the days of Josiah till this day.
- Darby Translation (DBY)
- Take thee a roll of a book, and write therein all the words that I have spoken unto thee against Israel, and against Judah, and against all the nations, from the day I spoke unto thee, from the days of Josiah, even unto this day.
- Webster's Bible (WBS)
- Take thee a roll of a book, and write in it all the words that I have spoken to thee against Israel, and against Judah, and against all the nations, from the day I spoke to thee, from the days of Josiah, even to this day.
- Young's Literal Translation (YLT)
- 'Take to thee a roll of a book, and thou hast written on it all the words that I have spoken unto thee concerning Israel, and concerning Judah, and concerning all the nations, from the day I spake unto thee, from the days of Josiah, even unto this day;
Read in context
- 1ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೇ ವರುಷದಲ್ಲಿ ಆದದ್ದೇನಂದರೆ--ಯೆರೆವಿಾಯ ನಿಗೆ ಕರ್ತನಿಂದ ಈ ವಾಕ್ಯ ಉಂಟಾಯಿತು, ಯಾವ ದಂದರೆ--
- 2ಪುಸ್ತಕದ ಸುರಳಿಯನ್ನು ತಕ್ಕೊಂಡು ನಾನು ಇಸ್ರಾಯೇಲಿಗೂ ಯೆಹೂದಕ್ಕೂ ಎಲ್ಲಾ ಜನಾಂಗ ಗಳಿಗೂ ವಿರೋಧವಾಗಿ ನಿನ್ನ ಸಂಗಡ ಮಾತಾಡಿ ದಂದಿನಿಂದ ಯೋಷೀಯನ ದಿನಗಳು ಮೊದಲು ಗೊಂಡು ಈ ದಿನದ ವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.
- 3ಒಂದು ವೇಳೆ ಯೆಹೂ ದದ ಮನೆತನದವರು ನಾನು ಅವರಿಗೆ ಮಾಡುವದಕ್ಕೆ ನೆನಸುವ ಕೇಡನ್ನೆಲ್ಲಾ ಕೇಳಿ ನಾನು ಅವರ ಅಕ್ರಮವನ್ನೂ ಪಾಪವನ್ನೂ ಮನ್ನಿಸುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ತಿರುಗಿಕೊಂಡಾರು ಅಂದನು.
- 4ಆಗ ಯೆರೆವಿಾಯನು ನೇರೀಯನ ಮಗನಾದ ಬಾರೂಕನನ್ನು ಕರೆದನು; ಬಾರೂಕನು ಯೆರೆವಿಾಯನ ಬಾಯಿಂದ ಕರ್ತನು ಅವನಿಗೆ ಹೇಳಿದ್ದ ಮಾತು ಗಳನ್ನೆಲ್ಲಾ ಕೇಳಿ ಪುಸ್ತಕದ ಸುರಳಿಯಲ್ಲಿ ಬರೆ ದನು.
Cross references
- Jeremiah 30:2 ಯೆರೆಮೀಯ 30:2ನಾನು ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆ.
- Jeremiah 25:3 ಯೆರೆಮೀಯ 25:3ಯೆಹೂದದ ಅರಸನಾದ ಅಮ್ಮೋನನ ಮಗನಾದ ಯೋಷೀಯನ ಹದಿಮೂರನೇ ವರುಷ ಮೊದಲ್ಗೊಂಡು ಇಂದಿನ ವರೆಗೂ ಈ ಇಪ್ಪತ್ತು ಮೂರು ವರುಷ ಕರ್ತನ ವಾಕ್ಯವು ನನಗೆ ಉಂಟಾಗಿ ನಾನು ಅದನ್ನು ನಿಮಗೆ ಹೇಳಿದ್ದೇನೆ, ಬೆಳಿಗ್ಗೆ ಎದ್ದು ಹೇಳಿದ್ದೇನೆ; ಆದರೆ ನೀವು ಕೇಳಲಿಲ್ಲ.
- Jeremiah 36:6 ಯೆರೆಮೀಯ 36:6ಆದದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ ನೀನು ಬರೆದ ಸುರಳಿಯಲ್ಲಿ ಕರ್ತನ ಆಲಯದೊಳಗೆ ಉಪವಾಸದ ದಿವಸದಲ್ಲಿ ಕರ್ತನ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
- Exodus 17:14 ವಿಮೋಚನಕಾಂಡ 17:14ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು.
- Jeremiah 1:10 ಯೆರೆಮೀಯ 1:10ನೋಡು, ನಿನ್ನನ್ನು ಕೀಳುವದಕ್ಕೂ ಕೆಳಗೆ ಹಾಕಿ ಬಿಡುವದಕ್ಕೂ ನಾಶಮಾಡುವದಕ್ಕೂ ಕೆಡವಿಹಾಕುವದಕ್ಕೂ ಕಟ್ಟುವದಕ್ಕೂ ನೆಡುವದಕ್ಕೂ ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ಈ ದಿನ ನಿನ್ನನ್ನು ನೇಮಿಸಿದ್ದೇನೆ ಅಂದನು.
- Jeremiah 51:60 ಯೆರೆಮೀಯ 51:60ಹೀಗೆ ಯೆರೆವಿಾಯನು ಬಾಬೆಲಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬೆಲಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದನು.
- Jeremiah 25:9–29 ಯೆರೆಮೀಯ 25:9–29ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ. ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು. ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು. ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು. ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ. ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ. ಅವರು ಪಾತ್ರೆಯನ್ನು ನಿನ್ನ ಕೈಯಿಂದ ತಕ್ಕೊಂಡು ಕುಡಿಯಲು ತಿರಸ್ಕರಿಸಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀವು ನಿಶ್ಚಯವಾಗಿ ಕುಡಿಯಬೇಕು. ಇಗೋ, ನನ್ನ ಹೆಸರಿನಿಂದ ಕರೆಯಲ್ಪಟ್ಟಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವದಕ್ಕೆ ಆರಂಭಮಾಡುತ್ತೇನೆ; ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿ ಕೊಳ್ಳುವದಿಲ್ಲ: ನಾನು ಭೂನಿವಾಸಿಗಳೆಲ್ಲರ ಮೇಲೆ ಕತ್ತಿಯನ್ನು ಕರೆಯುತ್ತೇನೆಂದು ಸೈನ್ಯಗಳ ಕರ್ತನು ಅನ್ನು ತ್ತಾನೆ.
- Jeremiah 36:23 ಯೆರೆಮೀಯ 36:23ಆಗ ಆದದ್ದೇನಂದರೆ--ಯೆಹೂದಿಯು ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿ ಯಿಂದ ಕೊಯ್ದು ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟು ಹೋಗುವ ವರೆಗೂ ಹಾಕಿಬಿಟ್ಟನು.
- Ezekiel 2:9 ಯೆಹೆಜ್ಕೇಲನು 2:9ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.ಆತನು ಅದನ್ನು ನನ್ನ ಮುಂದೆ ಹರಡಿದನು; ಅದರ ಒಳಗಡೆಯೂ ಹೊರಗಡೆಯೂ ಬರಹವು ಇತ್ತು. ಆ ಬರಹವೇನಂದರೆ--ಗೋಳಾಟವೂ ಮೂಲುಗುವಿಕೆಯೂ ಸಂಕಟಗಳೂ ಇವೆ ಎಂಬದೇ.
- Psalm 40:7 ಕೀರ್ತನೆಗಳು 40:7ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.
- Revelation 5:1–9 ಪ್ರಕಟನೆ 5:1–9ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯಲ್ಲಿ ಒಂದು ಪುಸ್ತಕವನ್ನು ಕಂಡೆನು; ಅದರ ಒಳಗೂ ಹಿಂದಿನ ಭಾಗದ ಮೇಲೆಯೂ ಬರೆದಿತ್ತು; ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. ಇದಲ್ಲದೆ ಬಲಿಷ್ಠನಾದ ಒಬ್ಬ ದೂತನು--ಈ ಪುಸ್ತಕವನ್ನು ತೆರೆಯುವದಕ್ಕೂ ಇದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯಾವನು ಯೋಗ್ಯನು ಎಂದು ಮಹಾಶಬ್ದದಿಂದ ಸಾರುವದನ್ನು ಕಂಡೆನು. ಆ ಪುಸ್ತಕವನ್ನು ತೆರೆಯುವದಕ್ಕಾದರೂ ಅದರೊಳಗೆ ನೋಡುವದಕ್ಕಾದರೂ ಪರಲೋಕದಲ್ಲಿಯಾಗಲಿ ಭೂಮಿಯಲ್ಲಿಯಾಗಲಿ ಭೂಮಿಯ ಕೆಳಗಾಗಲಿ ಯಾವನಿಗೂ ಶಕ್ತಿಯಿರಲಿಲ್ಲ. ಆಗ ಪುಸ್ತಕವನ್ನು ತೆರೆಯುವದಕ್ಕಾಗಲಿ ಅದನ್ನು ಓದುವದಕ್ಕಾಗಲಿ ಅದರಲ್ಲಿ ನೋಡುವದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅತ್ತೆನು. ಆಗ ಹಿರಿಯರಲ್ಲಿ ಒಬ್ಬನು ನನಗೆ--ಅಳಬೇಡ; ಅಗೋ, ಯೂದಾ ಗೋತ್ರದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಆ ಪುಸ್ತಕವನ್ನು ತೆರೆಯುವದಕ್ಕೂ ಅದರ ಏಳು ಮುದ್ರೆ ಗಳನ್ನು ಬಿಚ್ಚುವದಕ್ಕೂ ಜಯಹೊಂದಿದ್ದಾನೆ ಎಂದು ಹೇಳಿದನು. ನಾನು ನೋಡಲಾಗಿ ಇಗೋ, ಸಿಂಹಾಸ ನದ ಮತ್ತು ನಾಲ್ಕು ಜೀವಿಗಳ ಮಧ್ಯದಲ್ಲಿಯೂ ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ವಧಿಸಲ್ಪಟ್ಟಂತೆ ನಿಂತಿರುವದನ್ನು ಕಂಡೆನು; ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು; ಅವು ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮ ಆತನು ಬಂದು ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯೊಳಗಿಂದ ಆ ಪುಸ್ತಕ ವನ್ನು ತೆಗೆದುಕೊಂಡನು. ಆತನು ಆ ಪುಸ್ತಕವನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಮುಂದೆ ಅಡ್ಡಬಿದ್ದರು; ಅವರೆಲ್ಲರ ಕೈಗಳಲ್ಲಿ ವೀಣೆಗಳೂ ಪರಿ ಶುದ್ಧರ ಪರಿಮಳವಾದ ಪ್ರಾರ್ಥನೆಗಳಿಂದ ತುಂಬಿದ್ದ ಚಿನ್ನದ ಪಾತ್ರೆಗಳೂ ಇದ್ದವು. ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;
- Zechariah 5:1–4 ಜೆಕರ್ಯ 5:1–4ಆಗ ನಾನು ತಿರಿಗಿಕೊಂಡು ನನ್ನ ಕಣ್ಣು ಗಳನ್ನೆತ್ತಿ ನೋಡಲು ಇಗೋ, ಹಾರುವ ಸುರಳಿ. ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು. ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು. ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
Original words (Hebrew)
- Take · H3947לָקַח lâqach
- roll · H4039מְגִלָּה mᵉgillâh
- book · H5612סֵפֶר çêpher
- write · H3789כָּתַב kâthab
- words · H1697דָּבָר dâbâr
- spoken · H1696דָבַר dâbar
- Israel · H3478יִשְׂרָאֵל Yisrâʼêl
- Judah · H3063יְהוּדָה Yᵉhûwdâh
- nations · H1471גּוֹי gôwy
- day · H3117יוֹם yôwm
- spake · H1696דָבַר dâbar
- days · H3117יוֹם yôwm
- Josiah · H2977יֹאשִׁיָּה Yôʼshîyâh
- day · H3117יוֹם yôwm