Jeremiah · chapter 44 · verse 5
Jeremiah 44:5 in Kannada
ಆದರೆ ಅವರು ಕೇಳಲಿಲ್ಲ; ತಮ್ಮ ಕೆಟ್ಟತನದಿಂದ ತಿರುಗದೆಯೂ, ಬೇರೆ ದೇವರುಗಳಿಗೆ ಧೂಪಸುಡು ವದನ್ನು ಬಿಡದೆಯೂ ಇದ್ದರು; ನನ್ನ ಮಾತಿಗೆ ಕಿವಿ ಗೊಡಲಿಲ್ಲ.
Aadare avaru kelalilla; tamma kettatanadinda tirugadeyoo, bere devarugalige dhoopasudu vadannu bidadeyoo iddaru; nanna maatige kivi godalilla.
Jeremiah 44:5 in English
- King James Version (KJV)
- But they hearkened not, nor inclined their ear to turn from their wickedness, to burn no incense unto other gods.
- World English Bible (WEB)
- But they didn’t listen and didn’t incline their ear. They didn’t turn from their wickedness, to stop burning incense to other gods.
- American Standard Version (ASV)
- But they hearkened not, nor inclined their ear to turn from their wickedness, to burn no incense unto other gods.
- Bible in Basic English (BBE)
- But they gave no attention, and their ears were not open so that they might be turned from their evil-doing and from burning perfume to other gods.
- Darby Translation (DBY)
- But they hearkened not, nor inclined their ear to turn from their wickedness, to burn no incense unto other gods.
- Webster's Bible (WBS)
- But they hearkened not, nor inclined their ear to turn from their wickedness, to burn no incense to other gods.
- Young's Literal Translation (YLT)
- and they have not hearkened nor inclined their ear, to turn back from their wickedness, not to make perfume to other gods,
Read in context
- 3ಅವರು ನನಗೆ ಕೋಪವನ್ನು ಎಬ್ಬಿಸುವ ಹಾಗೆ ತಾವೂ ತಮ್ಮ ತಂದೆಗಳೂ ಅರಿಯದ ಬೇರೆ ದೇವರುಗಳನ್ನು ಸೇವಿಸಿ ಧೂಪಸುಟ್ಟು ಮಾಡಿದ ಕೆಟ್ಟತನದ ನಿಮಿತ್ತ ಇಗೋ, ಅವು ಈ ಹೊತ್ತು ಹಾಳಾಗಿವೆ; ಅವುಗಳಲ್ಲಿ ವಾಸಮಾಡುವವರು ಯಾರೂ ಇಲ್ಲ.
- 4ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು.
- 5ಆದರೆ ಅವರು ಕೇಳಲಿಲ್ಲ; ತಮ್ಮ ಕೆಟ್ಟತನದಿಂದ ತಿರುಗದೆಯೂ, ಬೇರೆ ದೇವರುಗಳಿಗೆ ಧೂಪಸುಡು ವದನ್ನು ಬಿಡದೆಯೂ ಇದ್ದರು; ನನ್ನ ಮಾತಿಗೆ ಕಿವಿ ಗೊಡಲಿಲ್ಲ.
- 6ಆದದರಿಂದ ನನ್ನ ಉರಿಯೂ ನನ್ನ ಕೋಪವೂ ಹೊಯ್ಯಲ್ಪಟ್ಟು, ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉರಿಯಿತು; ಅವು ಈ ಹೊತ್ತಿನಂತೆ ಹಾಳೂ ಬೀಡೂ ಆದವು.
- 7ಆದದರಿಂದ ಈಗ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆಗಿರುವ ಕರ್ತನು ಹೀಗೆ ಹೇಳುತ್ತಾನೆ--ಯಾಕೆ ನಿಮಗೆ ಉಳಿದಿರುವ ವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ ಹೆಂಗಸರನ್ನೂ ಮಗುವನ್ನೂ ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು ನಿಮ್ಮ ಪ್ರಾಣ ಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳು ತ್ತೀರಿ?
Cross references
- Jeremiah 19:13 ಯೆರೆಮೀಯ 19:13ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ಸೈನ್ಯಕ್ಕೆಲ್ಲಾ ಧೂಪಸುಟ್ಟು ಬೇರೆ ದೇವರುಗಳಿಗೆ ಪಾನದ ಅರ್ಪಣೆ ಗಳನ್ನು ಹೊಯ್ದಿದ್ದಾರೋ ಆ ಎಲ್ಲಾ ಮನೆಗಳ ನಿಮಿತ್ತ ವಾಗಿ ಯೆರೂಸಲೇಮಿನ ಮನೆಗಳೂ ಯೆಹೂದದ ಅರಸರ ಮನೆಗಳೂ ತೋಫೆತಿನ ಸ್ಥಳದ ಹಾಗೆ ಅಶುದ್ಧವಾಗುವವು.
- Jeremiah 11:10 ಯೆರೆಮೀಯ 11:10ನನ್ನ ಮಾತುಗಳನ್ನು ಕೇಳಲೊಲ್ಲದಿದ್ದ ತಮ್ಮ ಪಿತೃಗಳ ಅಕ್ರಮ ಗಳಿಗೆ ತಿರುಗಿಕೊಂಡಿದ್ದಾರೆ; ಬೇರೆ ದೇವರುಗಳನ್ನು ಸೇವಿಸುವದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ; ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸ್ರಾಯೇಲಿನ ಮನೆತನದವರೂ ಯೆಹೂದದ ಮನೆ ತನದವರೂ ವಿಾರಿದ್ದಾರೆ.
- Revelation 2:21–22 ಪ್ರಕಟನೆ 2:21–22ಅವಳು ಮಾಡಿದ ಜಾರತ್ವಕ್ಕಾಗಿ ಮಾನ ಸಾಂತರಪಡುವದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು; ಆದರೆ ಅವಳು ಮಾನಸಾಂತರಪಡಲಿಲ್ಲ. ಇಗೋ, ನಾನು ಅವಳನ್ನು ಹಾಸಿಗೆಯಲ್ಲಿಯೂ ಅವಳೊಂದಿಗೆ ವ್ಯಭಿಚಾರ ಮಾಡಿದವರು ತಮ್ಮ ಕೃತ್ಯಗಳಿ ಗಾಗಿ ಮಾನಸಾಂತರಪಡದಿದ್ದರೆ ಅವರನ್ನು ಮಹಾಸಂಕ ಟದಲ್ಲಿಯೂ ಹಾಕುವೆನು.
- Isaiah 48:18 ಯೆಶಾಯ 48:18ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
- Psalm 81:11–13 ಕೀರ್ತನೆಗಳು 81:11–13ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ. ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು. ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
- Jeremiah 44:17–21 ಯೆರೆಮೀಯ 44:17–21ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ. ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು. ಇದಲ್ಲದೆ ನಾವು ಗಗನದ ಒಡತಿಗೆ ಧೂಪಸುಟ್ಟು, ಅವಳಿಗೆ ಪಾನದರ್ಪಣೆ ಹೊಯ್ದಾಗ ನಮ್ಮ ಗಂಡಂದಿರನ್ನು ಬಿಟ್ಟು ಅವಳ ಪೂಜೆ ಗೋಸ್ಕರ ದೋಸೆಗಳನ್ನು ಮಾಡಿ ಅವಳಿಗೆ ಪಾನ ದರ್ಪಣೆಗಳನ್ನೂ ಹೊಯಿದೆವಲ್ಲವೋ? ಆಗ ಯೆರೆ ವಿಾಯನು ಗಂಡಸರಿಗೂ ಹೆಂಗಸರಿಗೂ ತನಗೆ ಉತ್ತರ ವನ್ನು ಕೊಟ್ಟಿದ್ದ ಜನರೆಲ್ಲರಿಗೂ ಹೇಳಿದ್ದೇನಂದರೆ-- ನೀವೂ ನಿಮ್ಮ ಪಿತೃಗಳೂ ನಿಮ್ಮ ಅರಸರೂ ನಿಮ್ಮ ಪ್ರಧಾನರೂ ದೇಶದ ಜನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟಧೂಪವನ್ನೇ ಕರ್ತನು ಜ್ಞಾಪಕ ಮಾಡಿಕೊಂಡದ್ದು ಅಲ್ಲವೋ? ಆತನ ಮನಸ್ಸಿಗೆ ಬಂದದ್ದು ಅದೇ ಅಲ್ಲವೋ?
- Jeremiah 7:24 ಯೆರೆಮೀಯ 7:24ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
- Zechariah 7:11–12 ಜೆಕರ್ಯ 7:11–12ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು. ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು.
- Jeremiah 11:8 ಯೆರೆಮೀಯ 11:8ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ; ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡಕೊಂಡರು; ಆದದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಮಾತು ಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.
- Isaiah 48:4 ಯೆಶಾಯ 48:4ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ.
- 2 Chronicles 36:16 2 ಪೂರ್ವಕಾಲವೃತ್ತಾಂತ 36:16ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.