Isaiah · chapter 48 · verse 18
Isaiah 48:18 in Kannada
ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
O, neenu nanna aajnyegalige kivigottiddare chennaagittu! Aaga ninna samaadhaanavu nadiyanteyoo ninna neetiyu samudrada alegalanteyoo iruttiddavu;
Isaiah 48:18 in English
- King James Version (KJV)
- O that thou hadst hearkened to my commandments! then had thy peace been as a river, and thy righteousness as the waves of the sea:
- World English Bible (WEB)
- Oh that you had listened to my commandments! Then your peace would have been like a river and your righteousness like the waves of the sea.
- American Standard Version (ASV)
- Oh that thou hadst hearkened to my commandments! then had thy peace been as a river, and thy righteousness as the waves of the sea:
- Bible in Basic English (BBE)
- If only you had given ear to my orders, then your peace would have been like a river, and your righteousness as the waves of the sea:
- Darby Translation (DBY)
- Oh that thou hadst hearkened to my commandments! Then would thy peace have been as a river, and thy righteousness as the waves of the sea;
- Webster's Bible (WBS)
- O that thou hadst hearkened to my commandments! then had thy peace been as a river, and thy righteousness as the waves of the sea:
- Young's Literal Translation (YLT)
- O that thou hadst attended to My commands, Then as a river is thy peace, And thy righteousness as billows of the sea,
Read in context
- 16ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ.
- 17ನಿನ್ನ ವಿಮೋಚ ಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ--ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ.
- 18ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು;
- 19ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
- 20ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
Cross references
- Deuteronomy 5:29 ಧರ್ಮೋಪದೇಶಕಾಂಡ 5:29ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.
- Psalm 119:165 ಕೀರ್ತನೆಗಳು 119:165ನಿನ್ನ ನ್ಯಾಯಪ್ರಮಾಣ ವನ್ನು ಪ್ರೀತಿಮಾಡುವವರಿಗೆ ಸಂಪೂರ್ಣ ಸಮಾ ಧಾನ ಉಂಟು; ಅವರಿಗೆ ಆತಂಕವೇನೂ ಇರುವದಿಲ್ಲ.
- Isaiah 66:12 ಯೆಶಾಯ 66:12ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ,
- Psalm 81:13–16 ಕೀರ್ತನೆಗಳು 81:13–16ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ, ತೀವ್ರವಾಗಿ ಅವರ ಶತ್ರುಗಳನ್ನು ಅಣಗಿಸುವೆನು; ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು. ಕರ್ತನನ್ನು ಹಗೆಮಾಡುವವರು ಆತನಿಗೆ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಿದ್ದರೆ ಅವರ ಕಾಲವು ಎಂದೆಂದಿಗೂ ಇರುತ್ತಿತ್ತು.ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು. ಇದಲ್ಲದೆ ಆತನು ಉತ್ತಮವಾದ ಗೋಧಿ ಯಿಂದ ಅವರಿಗೆ ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವನು.
- Deuteronomy 32:29 ಧರ್ಮೋಪದೇಶಕಾಂಡ 32:29ಅವರು ಜ್ಞಾನವಂತರಾಗಿ ಇದರ ವಿಷಯ ಬುದ್ಧಿ ತಂದುಕೊಂಡು ತಮ್ಮ ಕಡೇಕಾಲಕ್ಕಾಗಿ ಗ್ರಹಿಕೆಯುಳ್ಳ ವರಾದರೆ ಎಷ್ಟೋ ಒಳ್ಳೇದು!
- Luke 19:41–42 ಲೂಕನು 19:41–42ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು-- ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.
- Psalm 36:8 ಕೀರ್ತನೆಗಳು 36:8ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
- Isaiah 45:8 ಯೆಶಾಯ 45:8ಆಕಾಶ ಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ; ಗಗನಗಳು ನೀತಿಯನ್ನು ಸುರಿಸಲಿ; ಭೂಮಿಯು ತೆರೆದು ರಕ್ಷಣೆ ಯನ್ನು ತರಲಿ, ನೀತಿಯು ಅದರೊಂದಿಗೆ ಮೊಳೆ ಯಲಿ. ಇದನ್ನು ಸೃಷ್ಟಿಸಿದ ಕರ್ತನು ನಾನೇ.
- Amos 5:24 ಆಮೋಸ 5:24ಆದರೆ ನ್ಯಾಯವು ನೀರಿನಂತೆಯೂ ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ.
- Romans 14:17 ರೋಮಾಪುರದವರಿಗೆ 14:17ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ.
- Isaiah 32:15–18 ಯೆಶಾಯ 32:15–18ಬಳಿಕ ಉನ್ನತದಿಂದ ಆತ್ಮ ನಮ್ಮ ಮೇಲೆ ಸುರಿ ಸಲ್ಪಡುವಾಗ, ಆಗ ಅರಣ್ಯಗಳು ಪೈರಿನ ಹೊಲ ವಾಗುವದು. ಪೈರಿನ ಹೊಲವು ಅರಣ್ಯವೆಂದೆಣಿಸಲ್ಪ ಡುವದು. ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು. ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು. ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
- Matthew 23:37 ಮತ್ತಾಯನು 23:37ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ