Jeremiah · chapter 46 · verse 19
Jeremiah 46:19 in Kannada
ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು.
O aiguptada yuvatiyaada nivaasiye, sereya saamaanugalannu sajju golisiko; nophhaalaaguvadu; nivaasi galillada beedaaguvadu.
Jeremiah 46:19 in English
- King James Version (KJV)
- O thou daughter dwelling in Egypt, furnish thyself to go into captivity: for Noph shall be waste and desolate without an inhabitant.
- World English Bible (WEB)
- You daughter who dwells in Egypt, furnish yourself to go into captivity; for Memphis will become a desolation, and will be burned up, without inhabitant.
- American Standard Version (ASV)
- O thou daughter that dwellest in Egypt, furnish thyself to go into captivity; for Memphis shall become a desolation, and shall be burnt up, without inhabitant.
- Bible in Basic English (BBE)
- O daughter living in Egypt, make ready the vessels of a prisoner: for Noph will become a waste, it will be burned up and become unpeopled.
- Darby Translation (DBY)
- Thou, inhabitress, daughter of Egypt, furnish for thyself a captive's baggage, for Noph shall be a desolation and shall be ruined, so that none shall dwell therein.
- Webster's Bible (WBS)
- O thou daughter dwelling in Egypt, furnish thyself to go into captivity: for Noph shall be waste and desolate without an inhabitant.
- Young's Literal Translation (YLT)
- Goods for removal make for thee, O inhabitant, daughter of Egypt, For Noph becometh a desolation, And hath been burnt up, without inhabitant.
Read in context
- 17ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
- 18ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು.
- 19ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು.
- 20ಐಗುಪ್ತವು ಬಹಳ ಚೆಲುವಾದ ಕಡಸಾಗಿದೆ; ಆದರೆ ಉತ್ತರದಿಂದ ನಾಶ ನವು ಬಂದೇ ಬರುತ್ತದೆ.
- 21ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
Cross references
- Isaiah 20:4 ಯೆಶಾಯ 20:4ಹಾಗೆಯೇ ಅಶ್ಶೂರಿನ ಅರಸನು ಐಗುಪ್ತ್ಯರನ್ನು ಬಂಧಿಸಿ ಐಥಿಯೋಪಿಯಾದ ಕೈದಿಗಳನ್ನು ಅವರು ದೊಡ್ಡವರಾಗಲಿ ಸಣ್ಣವರಾಗಲಿ ಬಟ್ಟೆ ಕೆರಗಳಿಲ್ಲದೆ ಬರಿ ಕುಂಡಿಯವರಾಗಿ ಐಗುಪ್ತದ ಮಾನಭಂಗಕ್ಕೋ ಸ್ಕರ ಸೆರೆಗೆ ನಡೆಯುವಂತೆ ಮಾಡುವನು.
- Jeremiah 48:18 ಯೆರೆಮೀಯ 48:18ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ದಾಹವಾಗಿ ಕೂತುಕೋ, ಮೋವಾಬನ್ನು ಸೂರೆ ಮಾಡುವವನು ನಿನ್ನ ಮೇಲೆ ಬರುವನು, ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿ ಬಿಡುವನು.
- Jeremiah 44:1 ಯೆರೆಮೀಯ 44:1ಐಗುಪ್ತದ ಮಿಗ್ದೋಲ್ನಲ್ಲಿಯೂ ತಹಪನೇಸನಲ್ಲಿಯೂ ನೋಫನಲ್ಲಿಯೂ ಪತ್ರೋಸ್ ದೇಶದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆರೆವಿಾಯನಿಗೆ ಉಂಟಾದ ವಾಕ್ಯವು ಏನಂದರೆ--
- Ezekiel 30:13 ಯೆಹೆಜ್ಕೇಲನು 30:13ದೇವರಾದ ಕರ್ತನು ಹೀಗೆ ಹೇಳುತ್ತಾನೆ. ನಾನು ವಿಗ್ರಹಗಳನ್ನು ಹಾಳು ಮಾಡಿ ಬೊಂಬೆಗಳನ್ನು ನೋಫಿನಲ್ಲಿ ತೀರಿಸಿಬಿಡುವೆನು; ಐಗುಪ್ತದೇಶದ ಪ್ರಭುವು ಇನ್ನು ಇರುವದಿಲ್ಲ, ನಾನು ಐಗುಪ್ತ ದೇಶದಲ್ಲಿ ಭಯವನ್ನು ಉಂಟುಮಾಡುತ್ತೇನೆ.
- Jeremiah 34:22 ಯೆರೆಮೀಯ 34:22ಕರ್ತನು ಹೇಳುವದೇನಂದರೆ--ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರಿಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡು ವರು; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗ ಮಾಡುವೆನು.
- Jeremiah 51:29–30 ಯೆರೆಮೀಯ 51:29–30ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು. ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
- Ezekiel 12:3–12 ಯೆಹೆಜ್ಕೇಲನು 12:3–12ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು. ನಿನ್ನ ಸಾಮಾಗ್ರಿಗಳನ್ನು ತೆಗೆದುಹಾಕು ವದಕ್ಕಾಗುವಂತ ಸಾಮಾಗ್ರಿಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು; ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ ನೀನು ಅವರ ಕಣ್ಣುಗಳ ಮುಂದೆಹೋಗಬೇಕು. ಅವರ ಕಣ್ಣುಗಳ ಮುಂದೆಯೇ ನೀನು ಗೋಡೆಯನ್ನು ಕೊರೆದು ಅಲ್ಲಿಂದ ಹೊತ್ತು ಕೊಂಡು ಹೊರಗೆ ಹೊರಟುಹೋಗು. ಅವರ ಕಣ್ಣು ಗಳ ಮುಂದೆ ಸಾಮಾಗ್ರಿಯನ್ನು ಹೆಗಲಿನ ಮೇಲೆ ಹೊತ್ತುಕೊಂಡು ನಸುಬೆಳಕಿನಲ್ಲಿ ಹೋಗಬೇಕು; ನೆಲ ವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿ ಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನ ದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ. ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು; ನನ್ನ ಸಾಮಗ್ರಿಗಳನ್ನು ಸೆರೆಯ ಸಾಮಗ್ರಿಗಳಂತೆ ಹಗಲಿ ನಲ್ಲಿಯೇ ಹೊರಗೆ ತಂದೆನು; ನಸುಬೆಳಕಿನಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು; ಅದನ್ನು ನಾನು ನಸುಬೆಳಕಿನಲ್ಲಿ ಹೊರಗೆ ತಂದು ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು. ಬೆಳಗಿನ ಜಾವದಲ್ಲಿ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ-- ಮನುಷ್ಯ ಪುತ್ರನೇ, ಆ ಇಸ್ರಾಯೇಲಿನ ಮನೆತನದವರು ತಿರುಗಿ ಬೀಳುವ ಮನೆತನದವರಲ್ಲವೇ? ನೀನು ಏನು ಮಾಡುತ್ತೀ ಎಂದು ಹೇಳುತ್ತಾರಲ್ಲಾ. ಅವರಿಗೆ ನೀನು ಹೀಗೆ ಹೇಳಬೇಕು ಎಂದು ದೇವರಾದ ಕರ್ತನು ಹೇಳುತ್ತಾನೆ--ಈ ಭಾರವು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ ಅದರ ಮಧ್ಯದಲ್ಲಿರುವ ಸಮಸ್ತ ಇಸ್ರಾ ಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ. ಹೀಗೆ ಹೇಳು--ನಾನು ನಿಮಗೆ ಗುರುತಾಗಿದ್ದೇನೆ. ನಾನು ಮಾಡಿದ ಹಾಗೆ ಅವರಿಗೆ ಮಾಡಲ್ಪಡುವದು, ಅವರು ಸಾಗಿ ಸೆರೆಗೆ ಹೋಗುವರು. ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು.
- Zephaniah 2:5 ಚೆಫನ್ಯ 2:5ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು.
- Jeremiah 26:9 ಯೆರೆಮೀಯ 26:9ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.