Jeremiah · chapter 48 · verse 41
Jeremiah 48:41 in Kannada
ಕೆರೀಯೋತ್ ವಶ ವಾಯಿತು; ಬಲವಾದ ಕೋಟೆಗಳು ಹಿಡಿಯಲ್ಪಟ್ಟವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೃದಯಗಳು ಹೆರುವ ಸ್ತ್ರೀಯ ಹೃದಯದಂತೆ ಇರುವವು.
Kereeyot vasha vaayitu; balavaada kotegalu hidiyalpattavu; aa divasadalli movaabina paraakramashaaligala hrudayagalu heruva streeya hrudayadante iruvavu.
Jeremiah 48:41 in English
- King James Version (KJV)
- Kerioth is taken, and the strong holds are surprised, and the mighty men’s hearts in Moab at that day shall be as the heart of a woman in her pangs.
- World English Bible (WEB)
- Kerioth is taken, and the strongholds are seized. The heart of the mighty men of Moab at that day will be as the heart of a woman in her pangs.
- American Standard Version (ASV)
- Kerioth is taken, and the strongholds are seized, and the heart of the mighty men of Moab at that day shall be as the heart of a woman in her pangs.
- Bible in Basic English (BBE)
- Kerioth is taken, and the strong places have been forced, and the hearts of Moab's men of war in that day will be like the heart of a woman in birth-pains.
- Darby Translation (DBY)
- Kerijoth is taken, and the strongholds are seized, and at that day the heart of the mighty men of Moab shall be as the heart of a woman in her pangs.
- Webster's Bible (WBS)
- Kerioth is taken, and the strong holds are surprised, and the mighty men's hearts in Moab at that day shall be as the heart of a woman in her pangs.
- Young's Literal Translation (YLT)
- Captured have been the cities, And the strongholds are caught, And the heart of the mighty of Moab Hath been in that day as the heart of a distressed woman.
Read in context
- 39ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು.
- 40ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು.
- 41ಕೆರೀಯೋತ್ ವಶ ವಾಯಿತು; ಬಲವಾದ ಕೋಟೆಗಳು ಹಿಡಿಯಲ್ಪಟ್ಟವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೃದಯಗಳು ಹೆರುವ ಸ್ತ್ರೀಯ ಹೃದಯದಂತೆ ಇರುವವು.
- 42ಮೋವಾಬು ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ ಜನಾಂಗವಲ್ಲದ ಹಾಗೆ ನಾಶವಾಗುವದು.
- 43ಮೋವಾಬಿನ ನಿವಾಸಿಯೇ, ಹೆದರಿಕೆಯೂ ಕುಣಿಯೂ ಬೋನೂ ನಿನ್ನ ಮೇಲೆ ಇರುವವೆಂದು ಕರ್ತನು ಅನ್ನುತ್ತಾನೆ.
Cross references
- Isaiah 21:3 ಯೆಶಾಯ 21:3ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
- Isaiah 13:8 ಯೆಶಾಯ 13:8ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು.
- Jeremiah 30:6 ಯೆರೆಮೀಯ 30:6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?
- Micah 4:9–10 ಮೀಕ 4:9–10ಈಗ ಯಾಕೆ ಗಟ್ಟಿಯಾಗಿ ಕೂಗುತ್ತೀ? ನಿನ್ನಲ್ಲಿ ಅರಸನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶ ವಾದನೋ? ಹೆರುವವಳಂತೆ ನಿನಗೆ ವೇದನೆ ಬಂತು. ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು.
- Jeremiah 49:22 ಯೆರೆಮೀಯ 49:22ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
- Jeremiah 6:24 ಯೆರೆಮೀಯ 6:24ಅದರ ಕೀರ್ತಿಯನ್ನು ಕೇಳಿದ್ದೇವೆ, ನಮ್ಮ ಕೈಗಳು ಜೋಲಾ ಡುತ್ತವೆ; ಸಂಕಟವೂ ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.
- Jeremiah 51:30 ಯೆರೆಮೀಯ 51:30ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
- Jeremiah 49:24 ಯೆರೆಮೀಯ 49:24ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ.
- 1 Thessalonians 5:3 1 ಥೆಸಲೊನೀಕದವರಿಗೆ 5:3ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.
- Jeremiah 50:43 ಯೆರೆಮೀಯ 50:43ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.
- Isaiah 26:17–18 ಯೆಶಾಯ 26:17–18ಓ ಕರ್ತನೇ, ಬಸುರಾದ ಸ್ತ್ರೀಯು ಹೆರುವ ದಕ್ಕೆ ಸವಿಾಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆ ಯಲ್ಲಿ ಅರಚುವಂತೆ ಓ ಕರ್ತನೇ, ನಾವು ನಿನ್ನ ಸಮ್ಮುಖದಲ್ಲಿದ್ದೆವು. ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹೆತ್ತಂತಾಯಿತು, ಭೂಮಿಗೆ ನಮ್ಮಿಂದ ಯಾವ ಬಿಡು ಗಡೆಯೂ ಆಗಲಿಲ್ಲ. ಇಲ್ಲವೇ ಭೂಲೋಕದ ನಿವಾಸಿ ಗಳು ಬೀಳಲಿಲ್ಲ.
- Jeremiah 4:31 ಯೆರೆಮೀಯ 4:31ಪ್ರಸವವೇದನೆ ಪಡುವವಳ ಸ್ವರಕ್ಕೂ ಚೊಚ್ಚಲನ್ನು ಹೆರುವವಳ ಸಂಕಟಕ್ಕೂ ಸಮಾನವಾಗಿ ರುವ ಚೀಯೋನಿನ ಮಗಳ ಸ್ವರವನ್ನು ಕೇಳಿದ್ದೇನೆ; ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ--ನನಗೀಗ ಅಯ್ಯೋ, ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ ಎಂದನ್ನುತ್ತಾಳೆ.