Jeremiah · chapter 51 · verse 1
Jeremiah 51:1 in Kannada
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಬಾಬೆಲಿಗೆ ವಿರೋಧವಾಗಿಯೂ ನನಗೆದುರಾಗಿ ಎದ್ದಿರುವವರ ಮಧ್ಯದಲ್ಲಿ ವಾಸಿಸುವ ವರಿಗೆ ವಿರೋಧವಾಗಿಯೂ ನಾಶಮಾಡುವ ಗಾಳಿ ಯನ್ನು ಎಬ್ಬಿಸುತ್ತೇನೆ.
Kartanu heege heluttaane--igo, naanu baabelige virodhavaagiyoo nanageduraagi eddiruvavara madhyadalli vaasisuva varige virodhavaagiyoo naashamaaduva gaali yannu ebbisuttene.
Jeremiah 51:1 in English
- King James Version (KJV)
- Thus saith the LORD; Behold, I will raise up against Babylon, and against them that dwell in the midst of them that rise up against me, a destroying wind;
- World English Bible (WEB)
- The LORD says: “Behold, I will raise up against Babylon, and against those who dwell in Lebkamai, a destroying wind.
- American Standard Version (ASV)
- Thus saith Jehovah: Behold, I will raise up against Babylon, and against them that dwell in Leb-kamai, a destroying wind.
- Bible in Basic English (BBE)
- The Lord has said: See, I will make a wind of destruction come up against Babylon and against those who are living in Chaldaea;
- Darby Translation (DBY)
- Thus saith Jehovah: Behold, I will raise up against Babylon, and against them that dwell in the heart of those that rise against me, a destroying wind;
- Webster's Bible (WBS)
- Thus saith the LORD; Behold, I will raise up against Babylon, and against them that dwell in the midst of them that rise against me, a destroying wind;
- Young's Literal Translation (YLT)
- Thus said Jehovah: Lo, I am stirring up against Babylon, And the inhabitants of Leb — My withstanders, A destroying wind,
Read in context
- 1ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಬಾಬೆಲಿಗೆ ವಿರೋಧವಾಗಿಯೂ ನನಗೆದುರಾಗಿ ಎದ್ದಿರುವವರ ಮಧ್ಯದಲ್ಲಿ ವಾಸಿಸುವ ವರಿಗೆ ವಿರೋಧವಾಗಿಯೂ ನಾಶಮಾಡುವ ಗಾಳಿ ಯನ್ನು ಎಬ್ಬಿಸುತ್ತೇನೆ.
- 2ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು.
- 3ಬಿಲ್ಲು ಬೊಗ್ಗಿಸುವವನಿಗೆ ವಿರೋಧವಾಗಿಯೂ ಕವಚದಲ್ಲಿ ತನ್ನನ್ನು ಹೆಚ್ಚಿಸಿ ಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬೊಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.
Cross references
- Amos 3:6 ಆಮೋಸ 3:6ಪಟ್ಟಣದಲ್ಲಿ ಕೊಂಬನ್ನು ಊದಿದರೆ ಜನರು ಹೆದರುವದಿಲ್ಲವೇ? ಪಟ್ಟಣದಲ್ಲಿ ಕೇಡು ಇರು ವದಾದರೆ ಅದು ಕರ್ತನಿಂದ ಅಲ್ಲವೇ?
- Hosea 13:15 ಹೋಶೇಯ 13:15ಅವನು ತನ್ನ ಸಹೋದರರ ಮಧ್ಯದಲ್ಲಿ ಫಲಭರಿತನಾಗಿದ್ದರೂ ಪೂರ್ವದ ಗಾಳಿಯು ಬರಲು ಕರ್ತನ ಗಾಳಿಯು ಅರಣ್ಯದಿಂದ ಏರಿಬರುವದು, ಆಗ ಅವನ ಬುಗ್ಗೆಯು ಒಣಗಿ ಅವನ ಒರತೆಯು ಬತ್ತಿ ಹೋಗುವದು. ಅವನು ಎಲ್ಲಾ ಪ್ರಿಯ ವಸ್ತುಗಳ ನಿಧಿಯನ್ನು ಹಾಳು ಮಾಡುವನು.ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.
- Jeremiah 4:11–12 ಯೆರೆಮೀಯ 4:11–12ಆ ಸಮಯದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಹೇಳಲ್ಪಡುವದೇನಂದರೆ--ಒಣ ಗಾಳಿಯು ಅರಣ್ಯದ ಉನ್ನತ ಸ್ಥಳಗಳಿಂದ ನನ್ನ ಜನರ ಕುಮಾರಿಯ ಕಡೆಗೆ ಬರುತ್ತದೆ. ಅದು ತೂರುವದಕ್ಕೂ ಶುದ್ಧಮಾಡುವದಕ್ಕೂ ಆಗತಕ್ಕದ್ದಲ್ಲ. ಅದಕ್ಕಿಂತ ತುಂಬ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವದು; ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯ ತೀರ್ಪುಗಳನ್ನು ಕೊಡುವೆನು.
- Jeremiah 50:21 ಯೆರೆಮೀಯ 50:21ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿ ಗಳಿಗೂ ವಿರೋಧವಾಗಿ ಏರಿಹೋಗು; ಅವರನ್ನು ಹಿಂದಟ್ಟಿ ಕೆಡಿಸಿಬಿಟ್ಟು ಸಂಪೂರ್ಣ ನಾಶಮಾಡು, ನಾನು ನಿನಗೆ ಆಜ್ಞಾಪಿಸಿದ್ದೆಲಾದರ ಪ್ರಕಾರ ಮಾಡು ಎಂದು ಕರ್ತನು ಅನ್ನುತ್ತಾನೆ.
- Isaiah 13:3–5 ಯೆಶಾಯ 13:3–5ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ. ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ. ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
- Jeremiah 50:24 ಯೆರೆಮೀಯ 50:24ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ;
- Ezekiel 19:12 ಯೆಹೆಜ್ಕೇಲನು 19:12ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
- Zechariah 2:8 ಜೆಕರ್ಯ 2:8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- Jeremiah 50:33 ಯೆರೆಮೀಯ 50:33ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು.
- 2 Kings 19:7 2 ಅರಸುಗಳು 19:7ಇಗೋ, ನಾನು ಅವನ ಮೇಲೆ ಗಾಳಿಯನ್ನು ಕಳುಹಿಸುವೆನು. ಅವನು ಒಂದು ಸುದ್ದಿ ಯನ್ನು ಕೇಳಿ ತನ್ನ ದೇಶಕ್ಕೆ ಹಿಂತಿರುಗುವನು. ಇದಲ್ಲದೆ ತನ್ನ ದೇಶದಲ್ಲಿ ಕತ್ತಿಯಿಂದ ಅವನನ್ನು ಬೀಳಮಾಡು ವೆನು ಎಂದು ಕರ್ತನು ಹೇಳುತ್ತಾನೆ ಅಂದನು.
- Jeremiah 50:14–16 ಯೆರೆಮೀಯ 50:14–16ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ. ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಒಳಪಟ್ಟಿತು; ಅದರ ಅಸ್ತಿವಾರಗಳು ಬಿದ್ದು ಹೋದವು; ಅದರ ಗೋಡೆಗಳು ಕೆಡವಲ್ಪಟ್ಟವು; ಅದು ಕರ್ತನ ಪ್ರತಿದಂಡನೆಯೇ, ಅದರಿಂದ ಪ್ರತಿ ದಂಡನೆ ತಕ್ಕೊಳ್ಳಿರಿ. ಅದು ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು.
- Acts 9:4 ಅಪೊಸ್ತಲರ ಕೃತ್ಯಗಳು 9:4ಆಗ ಅವನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ ಎಂದು ಹೇಳುವ ಧ್ವನಿಯನ್ನು ಕೇಳಿದನು.