Jeremiah · chapter 51 · verse 46
Jeremiah 51:46 in Kannada
ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
Nimma hrudayavu kundada haage deshadalli kelalpaduva suddige neevu bhayapadada haage ondu varushadalli ondu suddiyoo innondu varushadalli innondu suddiyoo baruvadu; deshadalli balaatkaaraviru vadu, aaluvavanu aaluvavanige virodhavaagiru vanu.
Jeremiah 51:46 in English
- King James Version (KJV)
- And lest your heart faint, and ye fear for the rumour that shall be heard in the land; a rumour shall both come [one] year, and after that in [another] year [shall come] a rumour, and violence in the land, ruler against ruler.
- World English Bible (WEB)
- Don’t let your heart faint. Don’t fear for the news that will be heard in the land. For news will come one year, and after that in another year news will come, and violence in the land, ruler against ruler.
- American Standard Version (ASV)
- And let not your heart faint, neither fear ye for the tidings that shall be heard in the land; for tidings shall come one year, and after that in another year [shall come] tidings, and violence in the land, ruler against ruler.
- Bible in Basic English (BBE)
- So that your hearts may not become feeble and full of fear because of the news which will go about in the land; for a story will go about one year, and after that in another year another story, and violent acts in the land, ruler against ruler.
- Darby Translation (DBY)
- lest your heart faint, and ye fear for the rumour that shall be heard in the land; for a rumour shall come [one] year, and after that a rumour in [another] year, and violence in the earth, ruler against ruler.
- Webster's Bible (WBS)
- And lest your heart should faint, and ye should fear for the rumor that shall be heard in the land; a rumor shall both come [one] year, and after that in [another] year [shall come] a rumor, and violence in the land, ruler against ruler.
- Young's Literal Translation (YLT)
- And lest your heart be tender, And ye be afraid of the report that is heard in the land, And come in a year hath the report, And after it in a year the report, And violence [is] in the land, ruler against ruler;
Read in context
- 44ನಾನು ಬಾಬೆಲಿನಲ್ಲಿರುವ ಬೇಲ್ನನ್ನು ದಂಡಿಸಿ ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ತರಿಸುವೆನು; ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವದಿಲ್ಲ; ಹೌದು, ಬಾಬೆಲಿನ ಗೋಡೆ ಬೀಳುವದು.
- 45ನನ್ನ ಜನರೇ, ಅದರೊಳಗಿಂದ ಹೊರಡಿರಿ; ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣವನ್ನು ಕರ್ತನ ಕೋಪದ ಉರಿಗೆ ತಪ್ಪಿಸಿರಿ.
- 46ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
- 47ಆದದರಿಂದ ಇಗೋ, ದಿನಗಳು ಬರುವವು; ಆಗ ನಾನು ಬಾಬೆಲಿನ ವಿಗ್ರಹಗಳಿಗೆ ನ್ಯಾಯತೀರಿ ಸುವೆನು. ಅದರ ದೇಶವೆಲ್ಲಾ ನಾಚಿಕೆಪಡುವದು; ಕೊಲ್ಲಲ್ಪಟ್ಟವರು ಅದರ ಮಧ್ಯದಲ್ಲಿ ಬೀಳುವರು.
- 48ಆಗ ಆಕಾಶವೂ ಭೂಮಿಯೂ ಅವುಗಳಲ್ಲಿರುವ ಸಮಸ್ತವೂ ಬಾಬೆಲಿನ ವಿಷಯವಾಗಿ ಹಾಡುವೆವು. ಸೂರೆ ಮಾಡುವವರು ಉತ್ತರದಿಂದ ಅದಕ್ಕೆ ವಿರೋಧ ವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
Cross references
- Isaiah 21:2–3 ಯೆಶಾಯ 21:2–3ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ. ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
- Isaiah 19:2 ಯೆಶಾಯ 19:2ಇದಲ್ಲದೆ ನಾನು ಐಗುಪ್ತಕ್ಕೆ ವಿರೋಧವಾಗಿ ಐಗುಪ್ತ ವನ್ನು ಎಬ್ಬಿಸುವೆನು; ಸಹೋದರನಿಗೆ ವಿರೋದವಾಗಿ ಸಹೋದರನೂ ನೆರೆಯವನಿಗೆ ವಿರೋದವಾಗಿ ನೆರೆ ಯವನೂ ಪಟ್ಟಣಕ್ಕೆ ವಿರೋಧವಾಗಿ ಪಟ್ಟಣವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಹೋರಾಡುವವು.
- 2 Kings 19:7 2 ಅರಸುಗಳು 19:7ಇಗೋ, ನಾನು ಅವನ ಮೇಲೆ ಗಾಳಿಯನ್ನು ಕಳುಹಿಸುವೆನು. ಅವನು ಒಂದು ಸುದ್ದಿ ಯನ್ನು ಕೇಳಿ ತನ್ನ ದೇಶಕ್ಕೆ ಹಿಂತಿರುಗುವನು. ಇದಲ್ಲದೆ ತನ್ನ ದೇಶದಲ್ಲಿ ಕತ್ತಿಯಿಂದ ಅವನನ್ನು ಬೀಳಮಾಡು ವೆನು ಎಂದು ಕರ್ತನು ಹೇಳುತ್ತಾನೆ ಅಂದನು.
- Isaiah 13:3–5 ಯೆಶಾಯ 13:3–5ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ. ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ. ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ.
- Mark 13:7–8 ಮಾರ್ಕನು 13:7–8ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ. ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಇದಲ್ಲದೆ ಬರ ಗಾಲಗಳು ಕಳವಳಗಳು ಉಂಟಾಗುವವು; ಇವು ಸಂಕಟಗಳ ಪ್ರಾರಂಭವಾಗಿವೆ.
- Judges 7:22 ನ್ಯಾಯಸ್ಥಾಪಕರು 7:22ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು.
- 1 Samuel 14:16–20 1 ಸಮುವೇಲನು 14:16–20ಬೆನ್ಯಾವಿಾ ನನ ದೇಶದ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ನೋಡಿದಾಗ ಇಗೋ, ಆ ಗುಂಪಿನವರು ಕಡಿಮೆ ಯಾಗುತ್ತಾ ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು. ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ--ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ ಅಂದನು. ಅವರು ಲೆಕ್ಕ ನೋಡುವಾಗ ಇಗೋ, ಯೋನಾತಾನನೂ ಅವನ ಆಯುಧಗಳನ್ನು ಹೊರುವವನೂ ಅಲ್ಲಿ ಇರಲಿಲ್ಲ. ಆಗ ಸೌಲನು ಅಹೀಯನಿಗೆ -- ನೀನು ದೇವರ ಮಂಜೂಷವನ್ನು ತಕ್ಕೊಂಡು ಬಾ ಅಂದನು. ಯಾಕಂದರೆ ದೇವರ ಮಂಜೂಷವು ಆ ಕಾಲದಲ್ಲಿ ಇಸ್ರಾಯೇಲ್ ಮಕ್ಕಳ ಬಳಿಯಲ್ಲಿತ್ತು. ಸೌಲನು ಯಾಜಕನ ಸಂಗಡ ಇನ್ನೂ ಮಾತಾನಾಡುತ್ತಿರುವಾಗ ಏನಾಯಿತಂದರೆ ಫಿಲಿಷ್ಟಿಯರ ದಂಡಿನಲ್ಲಿ ಗದ್ದಲವು ಅಧಿಕವಾಗುತ್ತಾ ಇದದ್ದರಿಂದ ಸೌಲನು ಯಾಜಕನಿಗೆ ನಿನ್ನ ಕೈಯನ್ನು ಹಿಂದಕ್ಕೆ ತಕ್ಕೋ ಅಂದನು. ಆಗ ಸೌಲನೂ ಅವನ ಸಂಗಡ ಇದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ ಇಗೋ, ಪ್ರತಿಯೊಬ್ಬನು ತನ್ನ ಜೊತೆಗಾರನನ್ನು ಕತ್ತಿ ಯಿಂದ ಕೊಂದುಬಿಟ್ಟದ್ದರ ಪರಿಣಾಮವಾಗಿ ಅಲ್ಲಿ ಬಹು ದೊಡ್ಡ ಸೋಲು ಉಂಟಾಯಿತು.
- Luke 21:9–19 ಲೂಕನು 21:9–19ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇವುಗಳು ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು. ಆತನು ಅವರಿಗೆ--ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳು ವವು. ಬೇರೆ ಬೇರೆ ಸ್ಥಳಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವವು; ಭಯಹುಟ್ಟಿ ಸುವ ದೃಶ್ಯಗಳೂ ಮಹಾಸೂಚನೆಗಳೂ ಆಕಾಶದಿಂದ ಆಗುವವು. ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು. ಇದು ಸಾಕ್ಷಿಗೋಸ್ಕರ ನಿಮಗೆ ಪರಿಣಮಿ ಸುವದು. ಹೀಗಿರುವದರಿಂದ ನೀವು ಏನು ಉತ್ತರ ಕೊಡಬೇಕೆಂದು ಮುಂದಾಗಿ ಯೋಚಿಸಬಾರದೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ. ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು. ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ನಿಮ್ಮ ತಲೆಯ ಒಂದು ಕೂದಲಾದರೂ ನಾಶವಾಗುವದಿಲ್ಲ. ನೀವು ನಿಮ್ಮ ಸಹನೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತೀರಿ. 20ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ.
- 2 Chronicles 20:23 2 ಪೂರ್ವಕಾಲವೃತ್ತಾಂತ 20:23ಅಮ್ಮೋನ್, ಮೋವಾಬ್ಯರ ಮಕ್ಕಳು ಸೇಯಾರ್ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು.
- Luke 21:28 ಲೂಕನು 21:28ಆದರೆ ಈ ಸಂಗತಿಗಳು ಸಂಭವಿಸುವದಕ್ಕೆ ಪ್ರಾರಂಭಿಸಿದಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆಗಳನ್ನು ಎತ್ತಿರಿ; ಯಾಕಂದರೆ ನಿಮ್ಮ ವಿಮೋಚನೆಯು ಸವಿಾಪವಾಗಿದೆ ಅಂದನು.
- Matthew 24:6–8 ಮತ್ತಾಯನು 24:6–8ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ. ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು. ಇವೆಲ್ಲವುಗಳು ಸಂಕಟಗಳ ಆರಂಭವು.
- Jeremiah 46:27 ಯೆರೆಮೀಯ 46:27ಆದರೆ ನೀನು, ಓ ನನ್ನ ಸೇವಕನಾದ ಯಾಕೋಬನೇ, ನೀನು ಭಯ ಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶ ದಿಂದಲೂ ರಕ್ಷಿಸುವೆನು; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಾಗಿಯೂ ಸುಖವಾಗಿಯೂ ಇರುವನು; ಅವನನ್ನು ಭಯಪಡಿಸುವದಕ್ಕೆ ಯಾರೂ ಇರುವದಿಲ್ಲ.ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
Original words (Hebrew)
- heart · H3824לֵבָב lêbâb
- faint · H7401רָכַךְ râkak
- fear · H3372יָרֵא yârêʼ
- rumour · H8052שְׁמוּעָה shᵉmûwʻâh
- heard · H8085שָׁמַע shâmaʻ
- land · H776אֶרֶץ ʼerets
- rumour · H8052שְׁמוּעָה shᵉmûwʻâh
- come · H935בּוֹא bôwʼ
- year · H8141שָׁנֶה shâneh
- after · H310אַחַר ʼachar
- year · H8141שָׁנֶה shâneh
- rumour · H8052שְׁמוּעָה shᵉmûwʻâh
- violence · H2555חָמָס châmâç
- land · H776אֶרֶץ ʼerets
- ruler · H4910מָשַׁל mâshal
- ruler · H4910מָשַׁל mâshal