Mark · chapter 13 · verse 7
Mark 13:7 in Kannada
ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ.
Idallade yuddhagala vishayavaagiyoo yuddhagala suddhiya vishayavaagiyoo neevu keluvaaga kalavalapada bediri; yaakandare avugalu aaguvadu agatya; aadare innoo adu antyavalla.
Mark 13:7 in English
- King James Version (KJV)
- And when ye shall hear of wars and rumours of wars, be ye not troubled: for [such things] must needs be; but the end [shall] not [be] yet.
- World English Bible (WEB)
- “When you hear of wars and rumors of wars, don’t be troubled. For those must happen, but the end is not yet.
- American Standard Version (ASV)
- And when ye shall hear of wars and rumors of wars, be not troubled: [these things] must needs come to pass; but the end is not yet.
- Bible in Basic English (BBE)
- And when you have news of wars and talk of wars, do not be troubled; these things have to be, but it is still not the end.
- Darby Translation (DBY)
- But when ye shall hear of wars and rumours of wars, be not disturbed, for [this] must happen, but the end is not yet.
- Webster's Bible (WBS)
- And when ye shall hear of wars, and rumors of wars, be ye not troubled: for [such things] must needs be; but the end [will] not [be] yet.
- Young's Literal Translation (YLT)
- and when ye may hear of wars and reports of wars, be not troubled, for these behove to be, but the end [is] not yet;
Read in context
- 5ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಲಾ ರಂಭಿಸಿ-- ಯಾವನಾದರೂ ನಿಮ್ಮನ್ನು ಮೋಸಗೊಳಿಸ ದಂತೆ ಎಚ್ಚರಿಕೆ ತೆಗೆದು ಕೊಳ್ಳಿರಿ;
- 6ಯಾಕಂದರೆ ಅನೇ ಕರು ನನ್ನ ಹೆಸರಿನಲ್ಲಿ ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
- 7ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ.
- 8ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಇದಲ್ಲದೆ ಬರ ಗಾಲಗಳು ಕಳವಳಗಳು ಉಂಟಾಗುವವು; ಇವು ಸಂಕಟಗಳ ಪ್ರಾರಂಭವಾಗಿವೆ.
- 9ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ಅವರಿಗೆ ವಿರೋಧವಾಗಿ ನನ್ನ ನಿಮಿತ್ತ ಅಧಿಕಾರಿಗಳ ಮತ್ತು ಅರಸುಗಳ ಮುಂದೆ ನೀವು ತರಲ್ಪಡುವಿರಿ.
Cross references
- Luke 21:9–11 ಲೂಕನು 21:9–11ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇವುಗಳು ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು. ಆತನು ಅವರಿಗೆ--ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳು ವವು. ಬೇರೆ ಬೇರೆ ಸ್ಥಳಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವವು; ಭಯಹುಟ್ಟಿ ಸುವ ದೃಶ್ಯಗಳೂ ಮಹಾಸೂಚನೆಗಳೂ ಆಕಾಶದಿಂದ ಆಗುವವು.
- John 14:27 ಯೋಹಾನನು 14:27ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.
- Matthew 24:6–7 ಮತ್ತಾಯನು 24:6–7ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ. ಕಳವಳಗೊಳ್ಳದಂತೆ ನೀವು ನೋಡಿಕೊಳ್ಳಿರಿ; ಯಾಕಂದರೆ ಇವೆಲ್ಲವುಗಳು ಸಂಭವಿಸುವದು ಅಗತ್ಯ; ಆದರೆ ಇದು ಇನ್ನೂ ಅಂತ್ಯವಲ್ಲ. ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಅಲ್ಲಲ್ಲಿ ಬರಗಳು, ಘೋರವ್ಯಾಧಿಗಳು ಮತ್ತು ಭೂಕಂಪಗಳು ಆಗುವವು.
- Psalm 112:7 ಕೀರ್ತನೆಗಳು 112:7ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ.
- Psalm 27:3 ಕೀರ್ತನೆಗಳು 27:3ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- Acts 17:3 ಅಪೊಸ್ತಲರ ಕೃತ್ಯಗಳು 17:3ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.
- Psalm 46:1–3 ಕೀರ್ತನೆಗಳು 46:1–3ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯ ಲ್ಪಟ್ಟರೂ ಅದರ ನೀರುಗಳು ಘೋಷಿಸಿ ಕದಲಿದರೂ ಅದರ ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು. ಸೆಲಾ.
- 2 Samuel 14:14 2 ಸಮುವೇಲನು 14:14ನಾವು ಸಾಯುವದು ಅವಶ್ಯವೇ. ನೆಲದ ಮೇಲೆ ಚೆಲ್ಲಲ್ಪಟ್ಟು ತಿರಿಗಿ ಕೂಡಿಸಲ್ಪಡದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಯಾರನ್ನೂ ಲಕ್ಷ್ಯಮಾಡುವಾತನಲ್ಲ. ಆದರೂ ಹೊರಡಿಸಲ್ಪಟ್ಟವನು ಹೊರಡಿಸಲ್ಪಟ್ಟಿರದ ಹಾಗೆ ಆಲೋಚನೆಗಳನ್ನು ಮಾಡುವಾತನಾಗಿದ್ದಾನೆ.
- Jeremiah 51:46 ಯೆರೆಮೀಯ 51:46ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
- Isaiah 8:12 ಯೆಶಾಯ 8:12ಇವರು ಯಾವದನ್ನು ಒಪ್ಪಂದ ಎಂದು ಹೇಳುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
- John 14:1 ಯೋಹಾನನು 14:1ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
- Matthew 18:7 ಮತ್ತಾಯನು 18:7ತೊಡಕುಗಳ ನಿಮಿತ್ತವಾಗಿ ಲೋಕಕ್ಕೆ ಅಯ್ಯೋ! ಯಾಕಂದರೆ ತೊಡಕುಗಳು ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ತೊಡಕು ಬರುವದೋ ಅವನಿಗೆ ಅಯ್ಯೋ!