Jeremiah · chapter 52 · verse 2
Jeremiah 52:2 in Kannada
ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
Avanu yehoyaakeemanu maadiddellaadara prakaara kartana drushtiyalli kettaddannu maadidanu.
Jeremiah 52:2 in English
- King James Version (KJV)
- And he did [that which was] evil in the eyes of the LORD, according to all that Jehoiakim had done.
- World English Bible (WEB)
- He did that which was evil in the LORD’s sight, according to all that Jehoiakim had done.
- American Standard Version (ASV)
- And he did that which was evil in the sight of Jehovah, according to all that Jehoiakim had done.
- Bible in Basic English (BBE)
- And he did evil in the eyes of the Lord, as Jehoiakim had done.
- Darby Translation (DBY)
- And he did evil in the sight of Jehovah, according to all that Jehoiakim had done.
- Webster's Bible (WBS)
- And he did [that which was] evil in the eyes of the LORD, according to all that Jehoiakim had done.
- Young's Literal Translation (YLT)
- and he doth the evil thing in the eyes of Jehovah, according to all that Jehoiakim hath done,
Read in context
- 1ಚಿದ್ಕೀಯನು ಆಳುವದಕ್ಕೆ ಆರಂಭಿಸಿದಾಗ ಇಪ್ಪತ್ತೊಂದು ವರುಷದವನಾಗಿದ್ದನು; ಅವನು ಹನ್ನೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು; ಅವನ ತಾಯಿಯ ಹೆಸರು ಲಿಬ್ನದವನಾದ ಯೆರೆವಿಾಯನ ಮಗಳಾದ ಹಮೂಟಲ್.
- 2ಅವನು ಯೆಹೋಯಾಕೀಮನು ಮಾಡಿದ್ದೆಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
- 3ಕರ್ತನು ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವ ವರೆಗೆ ಮಾಡಿದ ಕೋಪದಿಂದ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
- 4ಅವನ ಆಳಿಕೆಯ ಒಂಭತ್ತನೇ ವರುಷದಲ್ಲಿ, ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ತನ್ನ ಸಮಸ್ತ ಸೈನ್ಯದ ಸಂಗಡ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದಕ್ಕೆ ವಿರೋಧವಾಗಿ ದಂಡಿಳಿದು ಅದಕ್ಕೆ ವಿರೋಧವಾಗಿ ಸುತ್ತಲೂ ಕೋಟೆಗಳನ್ನು ಕಟ್ಟಿದನು.
Cross references
- 1 Kings 14:22 1 ಅರಸುಗಳು 14:22ಆದರೆ ಯೆಹೂದದವರು ಕರ್ತನ ಸಮ್ಮುಖದಲ್ಲಿ ಕೆಟ್ಟತನ ಮಾಡಿ ತಮ್ಮ ಪಿತೃಗಳು ಮಾಡಿದ ಸಮಸ್ತ ಪಾಪಗಳಿ ಗಿಂತ ತಾವು ಹೆಚ್ಚಾಗಿ ಪಾಪಮಾಡಿ ಆತನಿಗೆ ರೋಷ ವನ್ನೆಬ್ಬಿಸಿದರು.
- Jeremiah 36:21–23 ಯೆರೆಮೀಯ 36:21–23ಆಗ ಅರಸನು ಆ ಸುರಳಿಯನ್ನು ತಕ್ಕೊಂಡು ಬರುವ ಹಾಗೆ ಯೆಹೂದಿಯನ್ನು ಕಳುಹಿಸಿದನು; ಅವನು ಅದನ್ನು ಲೇಖಕನಾದ ಎಲೀಷಾಮನ ಕೊಠಡಿಯೊಳಗಿಂದ ತೆಗೆದುಕೊಂಡನು; ಯೆಹೂದಿಯು ಅದನ್ನು ಅರಸನ ಮತ್ತು ಅವನ ಬಳಿಯಲ್ಲಿ ನಿಂತ ಎಲ್ಲಾ ಪ್ರಧಾನ ರಿಗೂ ಓದಿ ಹೇಳಿದನು. ಆಗ ಒಂಭತ್ತನೇ ತಿಂಗಳಲ್ಲಿ ಅರಸನು ಚಳಿಗಾಲದ ಮನೆಯಲ್ಲಿ ಕೂತುಕೊಂಡಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯಲ್ಲಿ ಬೆಂಕಿ ಉರಿಯುತ್ತಿತ್ತು. ಆಗ ಆದದ್ದೇನಂದರೆ--ಯೆಹೂದಿಯು ಮೂರು ನಾಲ್ಕು ಪುಟಗಳನ್ನು ಓದಿದ ಮೇಲೆ ಅದನ್ನು ಚೂರಿ ಯಿಂದ ಕೊಯ್ದು ಅಗ್ಗಿಷ್ಟಿಕೆಯಲ್ಲಿದ್ದ ಬೆಂಕಿಯೊಳಗೆ ಸುರಳಿಯನ್ನೆಲ್ಲಾ ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಸುಟ್ಟು ಹೋಗುವ ವರೆಗೂ ಹಾಕಿಬಿಟ್ಟನು.
- Jeremiah 26:21–23 ಯೆರೆಮೀಯ 26:21–23ಆಗ ಅರಸನಾದ ಯೆಹೋಯಾಕೀಮನೂ ಅವನ ಪರಾಕ್ರಮಶಾಲಿಗಳೆ ಲ್ಲರೂ ಪ್ರಧಾನರೆಲ್ಲರೂ ಅವನ ಮಾತುಗಳನ್ನು ಕೇಳಿ ದಾಗ ಅರಸನು ಅವನನ್ನು ಕೊಂದುಹಾಕುವದಕ್ಕೆ ಹುಡುಕಿದನು; ಅದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತಕ್ಕೆ ಸೇರಿಕೊಂಡನು. ಆದರೆ ಅರಸನಾದ ಯೆಹೋಯಾಕೀಮನು ಐಗು ಪ್ತಕ್ಕೆ ಜನರನ್ನು, ಅಂದರೆ ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು. ಅವರು ಊರೀಯನನ್ನು ಐಗುಪ್ತದಿಂದ ತಕ್ಕೊಂಡು ಅರಸನಾದ ಯೆಹೋಯಾ ಕೀಮನ ಬಳಿಗೆ ತಂದರು; ಇವನು ಅವನನ್ನು ಕತ್ತಿ ಯಿಂದ ಹೊಡೆದು ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.ಆದಾಗ್ಯೂ ಅವರು ಯೆರೆವಿಾಯನನ್ನು ಜನರ ಕೈಗೆ ಒಪ್ಪಿಸಿ ಕೊಂದು ಹಾಕಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಇತ್ತು.
- Jeremiah 36:29–31 ಯೆರೆಮೀಯ 36:29–31ಯೆಹೂದದ ಅರಸನಾದ ಯೆಹೋಯಾಕೀಮನಿಗೆ ನೀನು ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ಬಾಬೆಲಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ ಮನುಷ್ಯರನ್ನೂ ಪ್ರಾಣ ಗಳನ್ನೂ ಅದರೊಳಗಿಂದ ಹಾಳು ಮಾಡುವದು ಖಂಡಿತ ಎಂದು ಇದರಲ್ಲಿ ಯಾಕೆ ಬರೆದಿದ್ದೀ ಎಂದು ಹೇಳಿ ನೀನು ಈ ಸುರಳಿಯನ್ನು ಸುಟ್ಟಿದ್ದೀ. ಆದದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೇಳುವದೇನಂದರೆ--ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವವನು ಅವನಿಗೆ ಇರು ವದಿಲ್ಲ; ಅವನ ಹೆಣವು ಹಗಲಿನಲ್ಲಿ ಬಿಸಲಿಗೂ ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲ್ಪಡುವದು. ಅವ ನನ್ನೂ ಅವನ ಸಂತಾನವನ್ನೂ ಸೇವಕರನ್ನೂ ಅವರ ಅಕ್ರಮಕ್ಕಾಗಿ ದಂಡಿಸುವೆನು; ಅವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡ ದಂಥ ಕೇಡನ್ನೆಲ್ಲಾ ಬರಮಾಡುವೆನು.ಆಗ ಯೆರೆವಿಾ ಯನು ಮತ್ತೊಂದು ಸುರಳಿಯನ್ನು ತಕ್ಕೊಂಡು ನೇರೀಯನ ಮಗನಾದ ಲೇಖಕನಾದ ಬಾರೂಕನಿಗೆ ಕೊಟ್ಟನು; ಇವನು ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಪುಸ್ತಕದ ವಾಕ್ಯಗಳನ್ನೆಲ್ಲಾ ಯೆರೆವಿಾಯನ ಬಾಯಿಂದ ಬಂದ ಹಾಗೆ ಬರೆದನು; ಇದಲ್ಲದೆ ಅವುಗಳ ಹಾಗಿರುವ ಅನೇಕ ವಾಕ್ಯಗಳು ಅವುಗಳ ಸಂಗಡ ಕೂಡಿಸಲ್ಪಟ್ಟವು.
- Ezekiel 21:25 ಯೆಹೆಜ್ಕೇಲನು 21:25ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
- 2 Kings 24:19–20 2 ಅರಸುಗಳು 24:19–20ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು.ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು. ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
- Ezekiel 17:16–20 ಯೆಹೆಜ್ಕೇಲನು 17:16–20ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ. ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ. ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು. ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ; ಆಗ ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು; ನಾನು ಅವನನ್ನು ಬಾಬೆಲಿಗೆ ಒಯ್ದು ಅವನು ನನಗೆ ವಿರೋಧವಾಗಿ ಮಾಡಿರುವ ಅಪರಾಧದ ವಿಷಯದಲ್ಲಿ ನಾನು ಅವರೊಂದಿಗೆ ವಾದಿಸುವೆನು.
- 2 Chronicles 36:12–13 2 ಪೂರ್ವಕಾಲವೃತ್ತಾಂತ 36:12–13ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.