Jeremiah · chapter 7 · verse 30
Jeremiah 7:30 in Kannada
ಯೆಹೂದನ ಮಕ್ಕಳು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದಾರೆಂದು ಕರ್ತನು ಅನ್ನುತ್ತಾನೆ; ನನ್ನ ಹೆಸರಿನಿಂದ ಕರೆಯಲ್ಪಟ್ಟ ಆಲಯದಲ್ಲಿ ಅದನ್ನು ಅಪವಿತ್ರ ಮಾಡುವದಕ್ಕೆ ತಮ್ಮ ಅಸಹ್ಯವಾದ ವುಗಳನ್ನು ಇಟ್ಟಿದ್ದಾರೆ.
Yehoodana makkalu nanna drushtiyalli kettaddannu maadiddaarendu kartanu annuttaane; nanna hesarininda kareyalpatta aalayadalli adannu apavitra maaduvadakke tamma asahyavaada vugalannu ittiddaare.
Jeremiah 7:30 in English
- King James Version (KJV)
- For the children of Judah have done evil in my sight, saith the LORD: they have set their abominations in the house which is called by my name, to pollute it.
- World English Bible (WEB)
- “For the children of Judah have done that which is evil in my sight,” says the LORD. “They have set their abominations in the house which is called by my name, to defile it.
- American Standard Version (ASV)
- For the children of Judah have done that which is evil in my sight, saith Jehovah: they have set their abominations in the house which is called by my name, to defile it.
- Bible in Basic English (BBE)
- For the children of Judah have done what is evil in my eyes, says the Lord: they have put their disgusting images in the house which is named by my name, making it unclean.
- Darby Translation (DBY)
- For the children of Judah have done evil in my sight, saith Jehovah; they have set their abominations in the house which is called by my name, to defile it.
- Webster's Bible (WBS)
- For the children of Judah have done evil in my sight, saith the LORD: they have set their abominations in the house which is called by my name, to pollute it.
- Young's Literal Translation (YLT)
- For the sons of Judah Have done the evil thing in Mine eyes, An affirmation of Jehovah, They have set their abominations in the house On which My name is called — to defile it,
Read in context
- 28ಹಾಗಾದರೆ ನೀನು ಅವರಿಗೆ--ತನ್ನ ದೇವರಾದ ಕರ್ತನ ಸ್ವರಕ್ಕೆ ವಿಧೇಯವಾಗದಂಥ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸ ದಂಥ ಜನಾಂಗವಾಗಿದೆ; ಸತ್ಯವು ನಾಶವಾಯಿತು, ಅದು ಅವರ ಬಾಯಿಯೊಳಗಿಂದ ಕಡಿದುಹಾಕಲ್ಪಟ್ಟಿದೆ.
- 29ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು; ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು; ಕರ್ತನು ತನ್ನ ಉಗ್ರದ ಸಂತತಿಯನ್ನು ನಿರಾಕರಿಸಿ ತಳ್ಳಿ ಬಿಟ್ಟಿದ್ದಾನೆ;
- 30ಯೆಹೂದನ ಮಕ್ಕಳು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದಾರೆಂದು ಕರ್ತನು ಅನ್ನುತ್ತಾನೆ; ನನ್ನ ಹೆಸರಿನಿಂದ ಕರೆಯಲ್ಪಟ್ಟ ಆಲಯದಲ್ಲಿ ಅದನ್ನು ಅಪವಿತ್ರ ಮಾಡುವದಕ್ಕೆ ತಮ್ಮ ಅಸಹ್ಯವಾದ ವುಗಳನ್ನು ಇಟ್ಟಿದ್ದಾರೆ.
- 31ಹಿನ್ನೋಮನ ಮಗನ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಕುಮಾರ ಕುಮಾರ್ತೆಯರನ್ನು ಬೆಂಕಿಯಲ್ಲಿ ಸುಡುವದಕ್ಕೆ ಕಟ್ಟಿದ್ದಾರೆ; ಇದನ್ನು ನಾನು ಆಜ್ಞಾಪಿಸಲಿಲ್ಲ, ಇಲ್ಲವೆ ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
- 32ಆದದರಿಂದ ಕರ್ತನು ಅನ್ನುವದೇನಂದರೆ--ಇಗೋ, ದಿನಗಳು ಬರುವವು; ಆಗ ಅದು ಇನ್ನು ತೋಫೆತೆಂದೂ ಹಿನ್ನೋಮನ ಮಗನ ತಗ್ಗು ಎಂದೂ ಕರೆಯಲ್ಪಡುವದೇ ಇಲ್ಲ; ಆದರೆ ಕೊಲೆಯ ತಗ್ಗು ಎಂದು ಅದಕ್ಕೆ ಹೆಸರಾಗುವದು. ಯಾಕಂದರೆ ಸ್ಥಳವಿಲ್ಲದ ವರೆಗೂ ತೋಫೆತಿನಲ್ಲಿ ಅವರು ಹೂಣಿಡುವರು.
Cross references
- Ezekiel 7:20 ಯೆಹೆಜ್ಕೇಲನು 7:20ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ.
- Jeremiah 32:34 ಯೆರೆಮೀಯ 32:34ಆದರೆ ನನ್ನ ಹೆಸರಿನಿಂದ ಕರೆಯ ಲ್ಪಟ್ಟಿರುವ ಮನೆಯಲ್ಲಿ ಅದನ್ನು ಅಪವಿತ್ರ ಮಾಡುವ ಹಾಗೆ ತಮ್ಮ ಅಸಹ್ಯಗಳನ್ನು ಇಟ್ಟಿದ್ದಾರೆ.
- Daniel 9:27 ದಾನಿಯೇಲನು 9:27ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- 2 Chronicles 33:7 2 ಪೂರ್ವಕಾಲವೃತ್ತಾಂತ 33:7ದೇವರು--ಈ ಆಲಯದಲ್ಲಿಯೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಯೆರೂ ಸಲೇಮಿನಲ್ಲಿಯೂ ನಾನು ನನ್ನ ಹೆಸರನ್ನು ಯುಗ ಯುಗಕ್ಕೂ ಇರಿಸುವೆನೆಂದೂ ಮೋಶೆಯಿಂದ
- 2 Kings 21:4 2 ಅರಸುಗಳು 21:4ಇದಲ್ಲದೆ ಯೆರೂಸಲೇಮಿನಲ್ಲಿ ನನ್ನ ನಾಮವನ್ನು ಇರಿಸುವೆನೆಂದು ಕರ್ತನು ಯಾವದನ್ನು ಕುರಿತು ಹೇಳಿದ್ದನೋ ಆ ಕರ್ತನ ಮನೆಯಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
- 2 Kings 21:7 2 ಅರಸುಗಳು 21:7ಈ ಮನೆಯಲ್ಲಿಯೂ ಇಸ್ರಾಯೇಲಿನ ಸಕಲ ಗೋತ್ರಗಳ ಲ್ಲಿಯೂ ನಾನು ಆದುಕೊಂಡ ಯೆರೂಸಲೇಮಿನ ಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನೆಂದು ಕರ್ತನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಯಾವದನ್ನು ಕುರಿತು ಹೇಳಿದ್ದನೋ ಆ ಮನೆಯಲ್ಲಿ ತಾನು ಮಾಡಿದ ತೋಪಿನ ಕೆತ್ತಿದ ವಿಗ್ರಹವನ್ನು ಇಟ್ಟನು.
- 2 Chronicles 33:4–5 2 ಪೂರ್ವಕಾಲವೃತ್ತಾಂತ 33:4–5ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು. ಕರ್ತನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.
- Ezekiel 43:7–8 ಯೆಹೆಜ್ಕೇಲನು 43:7–8ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ. ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ; ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿ ಬಿಟ್ಟಿದ್ದೇನೆ.
- 2 Kings 23:4–6 2 ಅರಸುಗಳು 23:4–6ಅರ ಸನು--ಬಾಳನಿಗೋಸ್ಕರವೂ ವಿಗ್ರಹದ ತೋಪುಗಳಿ ಗೋಸ್ಕರವೂ ಆಕಾಶದ ಸೈನ್ಯಕ್ಕೋಸ್ಕರವೂ ಮಾಡ ಲ್ಪಟ್ಟಿದ್ದ ಎಲ್ಲಾ ಪಾತ್ರೆಗಳನ್ನು ಕರ್ತನ ಆಲಯದಿಂದ ಹೊರಗೆ ತಕ್ಕೊಂಡು ಬರಬೇಕೆಂದು ಪ್ರಧಾನ ಯಾಜಕ ನಾದ ಹಿಲ್ಕೀಯನಿಗೂ ಎರಡನೇ ತರಗತಿಯ ಯಾಜಕ ರಿಗೂ ದ್ವಾರಪಾಲಕರಿಗೂ ಆಜ್ಞಾಪಿಸಿದನು ಮತ್ತು ಅವನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಸುಡಿಸಿ ಅವುಗಳ ಬೂದಿ ಯನ್ನು ಬೇತೇಲಿಗೆ ತರುವಂತೆ ಮಾಡಿದನು. ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು. ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.
- Ezekiel 8:5–17 ಯೆಹೆಜ್ಕೇಲನು 8:5–17ಆಮೇಲೆ ಆತನು ನನಗೆ --ಮನುಷ್ಯಪುತ್ರನೇ, ಈಗ ಉತ್ತರದ ಕಡೆಗೆ ನಿನ್ನ ಕಣ್ಣುಗಳನ್ನು ಎತ್ತು ಅಂದಾಗ ನಾನು ಉತ್ತರದ ಕಡೆಗೆ ಕಣ್ಣುಗಳನ್ನೆತ್ತಿದೆನು; ಇಗೋ, ಉತ್ತರದಲ್ಲಿ ಯಜ್ಞ ವೇದಿಯ ಬಾಗಿಲಲ್ಲಿ ಅಸೂಯೆ ವಿಗ್ರಹವು ಪ್ರವೇಶ ದಲ್ಲಿತ್ತು. ಇದಲ್ಲದೆ ಆತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಅವರು ಮಾಡುತ್ತಿರುವದನ್ನು ನೋಡುತ್ತಿರುವಿಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವ ಹಾಗೆ ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯ ಗಳನ್ನು ನೋಡುತ್ತಿರುವಿಯಾ? ಆದರೆ ಮತ್ತೆ ತಿರು ಗಿಕೋ, ನೀನು ಇನ್ನೂ ದೊಡ್ಡ ಅಸಹ್ಯಗಳನ್ನು ನೋಡುವಿ ಅಂದನು. ಆಗ ಅವನು ನನ್ನನ್ನು ಅಂಗಳದ ಬಾಗಲಿಗೆ ತಂದನು; ಮತ್ತು ನಾನು ನೋಡುವಾಗ ಇಗೋ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು ಆಮೇಲೆ ಆತನು ನನಗೆ--ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ ಎಂದು ಹೇಳಿದನು. ಯಾವಾಗ ನಾನು ಗೋಡೆಯನ್ನು ಕೊರೆದೆನೋ ಒಂದು ಬಾಗಿಲು ಕಾಣಿಸಿತು. ಆಗ ಆತನು ನನಗೆ--ಒಳಗೆ ಹೋಗು; ಅವರು ಮಾಡುವ ಕೆಟ್ಟ ಅಸಹ್ಯಗಳನ್ನು ನೋಡು ಅಂದನು. ಹಾಗೆಯೇ ನಾನು ಒಳಗೆ ಹೋಗಿ ನೋಡಿದೆನು; ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ ಅಸಹ್ಯ ಮೃಗಗಳೂ ಇಸ್ರಾಯೇಲ್ಯರು ಪೂಜಿಸುವ ಸಕಲ ಮೂರ್ತಿಗಳೂ ಈ ಗೋಡೆಯ ಸುತ್ತಲೂ ಚಿತ್ರಿಸ ಲ್ಪಟ್ಟಿವೆ. ಇದಲ್ಲದೆ ಇಸ್ರಾಯೇಲಿನ ಮನೆತನ ದವರಲ್ಲಿ ಎಪ್ಪತ್ತು ಮಂದಿಯೂ ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿ ದ್ದರು; ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾ ರತಿ ಇತ್ತು; ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು. ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು. ಇದಲ್ಲದೆ ಆತನು ಹೇಳಿದ್ದೇನಂದರೆ--ಮತ್ತೊಂದು ಸಾರಿ ತಿರುಗಿಕೋ; ಅವರು ಮಾಡುವ ಇನ್ನೂ ಮಹಾ ಅಸಹ್ಯವಾದವು ಗಳನ್ನು ನೋಡುವಿ ಅಂದನು. ಆಗ ಅವನು ನನ್ನನ್ನು ಕರ್ತನ ಆಲಯದ ಉತ್ತರ ಕಡೆಗೆ ಎದುರಾಗಿ ಬಾಗಲಿದ್ದ ಕಡೆಗೆ ತಂದನು; ಇಗೋ, ಅಲ್ಲಿ ತಮ್ಮೂಜ್ಗೋಸ್ಕರ ಅಳುವ ಹೆಂಗಸರು ಕೂತಿದ್ದರು. ಆಮೇಲೆ ನನಗೆ ಆತನು, ಓ ನರಪುತ್ರನೇ, ನೋಡಿದಿಯೋ? ಮತ್ತೊಂದು ಸಾರಿ ತಿರುಗಿಕೋ ಇವುಗಳಿಗಿಂತ ಇನ್ನೂ ದೊಡ್ಡ ಅಸಹ್ಯವಾದವುಗಳನ್ನು ನೋಡುವಿ ಎಂದು ಹೇಳಿದನು. ಆಗ ಅವನು ನನ್ನನ್ನು ಕರ್ತನ ಆಲ ಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋದನು. ಇಗೋ, ಕರ್ತನ ಮಂದಿರದ ಬಾಗಿಲಲ್ಲಿ ದ್ವಾರಾಂಗ ಳಕ್ಕೂ ಯಜ್ಞವೇದಿಗೂ ಮಧ್ಯದಲ್ಲಿ ಸುಮಾರು ಇಪ್ಪ ತ್ತೈದು ಮಂದಿಯು ಕರ್ತನ ಮಂದಿರಕ್ಕೆ ಬೆನ್ನು ಕೊಟ್ಟು, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನು ತಿರು ಗಿಸಿ ಸೂರ್ಯ ನಮಸ್ಕಾರ ಮಾಡುತ್ತಿದ್ದರು. ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ.
- Jeremiah 23:11 ಯೆರೆಮೀಯ 23:11ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ.
- 2 Chronicles 33:15 2 ಪೂರ್ವಕಾಲವೃತ್ತಾಂತ 33:15ಇದಲ್ಲದೆ ಅವನು ಅನ್ಯ ದೇವರುಗಳನ್ನೂ ಕರ್ತನ ಆಲಯದಲ್ಲಿರುವ ವಿಗ್ರಹವನ್ನೂ ಕರ್ತನ ಆಲಯದ ಪರ್ವತದಲ್ಲಿಯೂ ಯೆರೂಸಲೇಮಿನ ಲ್ಲಿಯೂ ತಾನು ಕಟ್ಟಿಸಿದ ಸಮಸ್ತ ಬಲಿಪೀಠಗಳನ್ನೂ ತೆಗೆದುಹಾಕಿ ಅವುಗಳನ್ನು ಪಟ್ಟಣದ ಹೊರಗೆ ಬಿಸಾಡಿ ಬಿಟ್ಟನು.
Original words (Hebrew)
- children · H1121בֵּן bên
- Judah · H3063יְהוּדָה Yᵉhûwdâh
- done · H6213עָשָׂה ʻâsâh
- evil · H7451רַע raʻ
- sight · H5869עַיִן ʻayin
- saith · H5002נְאֻם nᵉʼum
- set · H7760שׂוּם sûwm
- abominations · H8251שִׁקּוּץ shiqqûwts
- house · H1004בַּיִת bayith
- called · H7121קָרָא qârâʼ
- name · H8034שֵׁם shêm
- pollute · H2930טָמֵא ṭâmêʼ