Job · chapter 10 · verse 1
Job 10:1 in Kannada
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
Nanna praanavu nanna jeevanakkaagi besaragondide. Nanna doorugalannu nanna meleye biduvenu; nanna manovyathe yinda maatanaaduvenu.
Job 10:1 in English
- King James Version (KJV)
- My soul is weary of my life; I will leave my complaint upon myself; I will speak in the bitterness of my soul.
- World English Bible (WEB)
- “My soul is weary of my life. I will give free course to my complaint. I will speak in the bitterness of my soul.
- American Standard Version (ASV)
- My soul is weary of my life; I will give free course to my complaint; I will speak in the bitterness of my soul.
- Bible in Basic English (BBE)
- My soul is tired of life; I will let my sad thoughts go free in words; my soul will make a bitter outcry.
- Darby Translation (DBY)
- My soul is weary of my life: I will give free course to my complaint; I will speak in the bitterness of my soul.
- Webster's Bible (WBS)
- My soul is weary of my life; I will leave my complaint upon myself; I will speak in the bitterness of my soul.
- Young's Literal Translation (YLT)
- My soul hath been weary of my life, I leave off my talking to myself, I speak in the bitterness of my soul.
Read in context
- 1ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
- 2ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
- 3ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ?
Cross references
- Job 7:11 ಯೋಬನು 7:11ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು.
- 1 Kings 19:4 1 ಅರಸುಗಳು 19:4ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು--ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.
- Numbers 11:15 ಅರಣ್ಯಕಾಂಡ 11:15ನೀನು ಈ ಪ್ರಕಾರ ನನಗೆ ಮಾಡುವದಾ ಗಿದ್ದು ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವ ನಾದರೆ ನನ್ನ ಕೇಡನ್ನು ನೋಡದಂತೆ ನನ್ನನ್ನು ಕೊಂದುಬಿಡು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
- Jonah 4:8 ಯೋನ 4:8ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
- Job 9:21 ಯೋಬನು 9:21ನಾನು ಸಂಪೂರ್ಣವಾಗಿದ್ದರೂ ನನ್ನ ಪ್ರಾಣವನ್ನು ನಾನೇ ಅರಿಯದಿರುವೆನು; ನನ್ನ ಜೀವವನ್ನು ತಿರಸ್ಕಾರ ಮಾಡುವೆನು.
- Job 5:15–16 ಯೋಬನು 5:15–16ಆತನು ಕತ್ತಿಯಿಂದಲೂ ಅದರ ಬಾಯಿಂದಲೂ ಬಲಿಷ್ಠನ ಕೈಯೊಳಗಿಂದಲೂ ಬಡವ ನನ್ನು ರಕ್ಷಿಸುತ್ತಾನೆ. ಆದದರಿಂದ ದರಿದ್ರನಿಗೆ ನಿರೀಕ್ಷೆ ಯುಂಟು; ಅಪರಾಧವು ಬಾಯಿ ಮುಚ್ಚುವದು.
- Job 5:20 ಯೋಬನು 5:20ಬರದಲ್ಲಿ ನಿನ್ನನ್ನು ಮರಣದೊಳ ಗಿಂದಲೂ ಯುದ್ಧದಲ್ಲಿ ಕತ್ತಿಯ ಬಲದಿಂದಲೂ ವಿಮೋಚಿಸುವನು.
- Job 16:6–16 ಯೋಬನು 16:6–16ನಾನು ಮಾತನಾಡಿದರೆ ನನ್ನ ನೋವಿಗೆ ಉಪಶಮನವಾಗುವದಿಲ್ಲ; ನಾನು ಬಿಟ್ಟರೆ ನನಗೆ ಏನು ಉಪಶಮನವಾದೀತು? ಆತನು ಈಗ ನನ್ನನ್ನು ದಣಿಸಿದ್ದಾನೆ; ನನ್ನ ಜೊತೆಯವರನ್ನೆಲ್ಲಾ ನೀನು ಹಾಳುಮಾಡಿದಿ. ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ. ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ. ನನ್ನ ಮೇಲೆ ತಮ್ಮ ಬಾಯಿ ತೆರೆಯುತ್ತಾರೆ; ನಿಂದೆಗಾಗಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ. ಏಕವಾಗಿ ನನ್ನ ಮೇಲೆ ಕೂಡಿಕೊಳ್ಳುತ್ತಾರೆ. ದೇವರು ನನ್ನನ್ನು ಭಕ್ತಿಹೀನರಿಗೆ ಒಪ್ಪಿಸುತ್ತಾನೆ. ದುಷ್ಟರ ಕೈಗೆ ನನ್ನನ್ನು ಕೊಟ್ಟುಬಿಡುತ್ತಾನೆ. ನಾನು ಶಾಂತವಾಗಿದ್ದಾಗ ನನ್ನನ್ನು ಪುಡಿಪುಡಿ ಮಾಡಿದನು. ನನ್ನ ಕುತ್ತಿಗೆ ಹಿಡಿದು ಚೂರುಚೂರಾಗಿ ಮಾಡಿದನು; ನನ್ನನ್ನು ತನಗೆ ಗುರಿಯಾಗಿ ನಿಲ್ಲಿಸಿದನು; ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ. ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ. ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು. ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;
- Jonah 4:3 ಯೋನ 4:3ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.
- Job 21:2–4 ಯೋಬನು 21:2–4ನನ್ನ ಮಾತನ್ನು ಲಕ್ಷ್ಯವಿಟ್ಟು ಕೇಳಿರಿ; ಇವು ನಿಮ್ಮ ಆದರಣೆಗಳಾಗಿರಲಿ. ನನ್ನನ್ನು ತಾಳಿಕೊಳ್ಳಿರಿ, ನಾನು ಮಾತನಾಡುವೆನು; ನಾನು ಮಾತ ನಾಡಿದ ಮೇಲೆ ಹಾಸ್ಯ ಮಾಡಬಹುದು. ನಾನಾದರೆ ಮನುಷ್ಯನಿಗೆ ನನ್ನ ದೂರು ಹೇಳುವೆನೋ? ಹೇಳಿ ದರೂ ನನ್ನ ಆತ್ಮವು ಯಾಕೆ ವ್ಯಾಕುಲಪಡಬಾರದು?
- Job 14:13 ಯೋಬನು 14:13ನೀನು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿನ್ನ ಕೋಪವು ತಿರುಗುವ ವರೆಗೂ ನನ್ನನ್ನು ಅಡಗಿಸಿ ನನಗೆ ನೇಮಕವಾದ ಸಮಯವನ್ನು ನೇಮಿಸಿ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು.
- Job 6:26 ಯೋಬನು 6:26ಗಾಳಿಯ ಹಾಗಿರುವ ಮಾತುಗಳನ್ನೂ ದಿಕ್ಕಿಲ್ಲದವನ ನುಡಿಗಳನ್ನೂ ಗದರಿಸು ವದಕ್ಕೆ ನೀವು ಯೋಚಿಸುತ್ತೀರೋ?