Job · chapter 10 · verse 2
Job 10:2 in Kannada
ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
Naanu devarige heege heluttene--nannannu khandisabeda; yaavadakko skara nanna sangada vyaajyamaaduttee endu nanage tilisu.
Job 10:2 in English
- King James Version (KJV)
- I will say unto God, Do not condemn me; shew me wherefore thou contendest with me.
- World English Bible (WEB)
- I will tell God, ‘Do not condemn me. Show me why you contend with me.
- American Standard Version (ASV)
- I will say unto God, Do not condemn me; Show me wherefore thou contendest with me.
- Bible in Basic English (BBE)
- I will say to God, Do not put me down as a sinner; make clear to me what you have against me.
- Darby Translation (DBY)
- I will say unto God, Do not condemn me; shew me wherefore thou strivest with me.
- Webster's Bible (WBS)
- I will say to God, Do not condemn me; show me why thou contendest with me.
- Young's Literal Translation (YLT)
- I say unto God, 'Do not condemn me, Let me know why Thou dost strive [with] me.
Read in context
- 1ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
- 2ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
- 3ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ?
- 4ನಿನಗೆ ಮಾಂಸದ ಕಣ್ಣುಗಳುಂಟೋ ಅಥವಾ ಮನುಷ್ಯನು ನೋಡುವಂತೆಯೇ ನೀನೂ ನೋಡುತ್ತೀಯೋ;
Cross references
- Psalm 139:23–24 ಕೀರ್ತನೆಗಳು 139:23–24ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು. ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು.
- Job 9:29 ಯೋಬನು 9:29ನಾನು ಕೆಟ್ಟವನಾಗಿದ್ದರೆ ಯಾಕೆ ಈ ವ್ಯರ್ಥವಾದ ಪ್ರಯಾಸ?
- Psalm 143:2 ಕೀರ್ತನೆಗಳು 143:2ನಿನ್ನ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡ; ಜೀವಿತರಲ್ಲಿ ಒಬ್ಬನಾದರೂ ನಿನ್ನ ಮುಂದೆ ನೀತಿವಂತನಾಗುವದಿಲ್ಲ.
- Psalm 38:1–8 ಕೀರ್ತನೆಗಳು 38:1–8ಓ ಕರ್ತನೇ, ನಿನ್ನ ರೌದ್ರದಿಂದ ನನ್ನನ್ನು ಗದರಿಸಬೇಡ; ನಿನ್ನ ರೋಷದಿಂದ ನನ್ನನ್ನು ಶಿಕ್ಷಿಸಬೇಡ. ನಿನ್ನ ಬಾಣಗಳು ನನ್ನಲ್ಲಿ ಬಲವಾಗಿ ನೆಟ್ಟಿವೆ; ನಿನ್ನ ಕೈ ನನ್ನ ಮೇಲೆ ಭಾರವಾಗಿದೆ. ನಿನ್ನ ಕೋಪದ ನಿಮಿತ್ತವಾಗಿ ನನ್ನ ಶರೀರದಲ್ಲಿ ಸ್ವಸ್ಥವೇನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ವಿಶ್ರಾಂತಿಯೇ ಇಲ್ಲ. ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿಹೋಗಿವೆ; ಭಾರವಾದ ಹೊರೆಯ ಹಾಗೆ ನನಗೆ ವಿಾರಿದ ಭಾರವಾಗಿವೆ. ನನ್ನ ಬಾಸುಂಡೆಗಳು ನನ್ನ ಮೂಢತ್ವದ ನಿಮಿತ್ತ ನಾರುತ್ತಾ ಕೀವು ತುಂಬಿ ಅವೆ. ನಾನು ಕುಗ್ಗಿದ್ದೇನೆ, ಬಹಳವಾಗಿ ಬೊಗ್ಗಿದ್ದೇನೆ; ದಿನವೆಲ್ಲಾ ದುಃಖವುಳ್ಳವನಾಗಿ ತಿರುಗಾಡುತ್ತೇನೆ. ನನ್ನ ನಡುವು ಉರಿಯಿಂದ ತುಂಬಿದೆ; ನನ್ನ ಮಾಂಸದಲ್ಲಿ ಸ್ವಸ್ಥವೇನೂ ಇಲ್ಲ. ನಾನು ಬಹಳವಾಗಿ ಜಜ್ಜಲ್ಪಟ್ಟು ಬಲಹೀನನಾಗಿದ್ದೇನೆ; ನನ್ನ ಹೃದಯದ ನರಳುವಿಕೆ ಯಿಂದ ಮೂಲ್ಗುತ್ತೇನೆ.
- Romans 8:1 ರೋಮಾಪುರದವರಿಗೆ 8:1ಆದದರಿಂದ ಕ್ರಿಸ್ತ ಯೇಸುವಿನಲ್ಲಿ ರುವವರಿಗೆ ಅಪರಾಧ ನಿರ್ಣಯವು ಈಗ ಇಲ್ಲವೇ ಇಲ್ಲ; ಇವರು ಶರೀರಕ್ಕನುಸಾರವಾಗಿ ಅಲ್ಲ, ಆತ್ಮನಿಗನುಸಾರವಾಗಿಯೇ ನಡೆಯುವವರಾಗಿದ್ದಾರೆ.
- Psalm 6:1–4 ಕೀರ್ತನೆಗಳು 6:1–4ಓ ಕರ್ತನೇ, ನಿನ್ನ ಕೋಪದಿಂದ ನನ್ನನ್ನು ಗದರಿಸಬೇಡ; ನಿನ್ನ ಉಗ್ರತೆಯಿಂದ ನನ್ನನ್ನು ದಂಡಿಸಬೇಡ. ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ. ನನ್ನ ಪ್ರಾಣವು ಸಹ ಬಹಳವಾಗಿ ತಲ್ಲಣಿಸುತ್ತದೆ; ಆದರೆ ಓ ಕರ್ತನೇ, ಇದು ಎಲ್ಲಿಯ ವರೆಗೆ? ಓ ಕರ್ತನೇ, ಹಿಂತಿರುಗಿ ನನ್ನ ಪ್ರಾಣವನ್ನು ತಪ್ಪಿಸಿಬಿಡು. ಹಾ! ನಿನ್ನ ಕರುಣೆಯ ನಿಮಿತ್ತ ನನ್ನನ್ನು ರಕ್ಷಿಸು.
- Job 8:5–6 ಯೋಬನು 8:5–6ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು.
- Psalm 109:21 ಕೀರ್ತನೆಗಳು 109:21ಕರ್ತನಾದ ಓ ದೇವರೇ, ನಿನ್ನ ಹೆಸರಿಗೋಸ್ಕರ ನನಗೆ ಸಹಾಯಮಾಡು; ನಿನ್ನ ಕರುಣೆಯು ಒಳ್ಳೇದಾಗಿ ರುವದರಿಂದ ನನ್ನನ್ನು ಬಿಡಿಸು.
- Lamentations 5:16–17 ಪ್ರಲಾಪಗಳು 5:16–17ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ. ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
- Job 34:31–32 ಯೋಬನು 34:31–32ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ. ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- Psalm 25:7 ಕೀರ್ತನೆಗಳು 25:7ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.
- 1 Corinthians 11:31–32 1 ಕೊರಿಂಥದವರಿಗೆ 11:31–32ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ. ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.