Job · chapter 6 · verse 26
Job 6:26 in Kannada
ಗಾಳಿಯ ಹಾಗಿರುವ ಮಾತುಗಳನ್ನೂ ದಿಕ್ಕಿಲ್ಲದವನ ನುಡಿಗಳನ್ನೂ ಗದರಿಸು ವದಕ್ಕೆ ನೀವು ಯೋಚಿಸುತ್ತೀರೋ?
Gaaliya haagiruva maatugalannoo dikkilladavana nudigalannoo gadarisu vadakke neevu yochisutteero?
Job 6:26 in English
- King James Version (KJV)
- Do ye imagine to reprove words, and the speeches of one that is desperate, [which are] as wind?
- World English Bible (WEB)
- Do you intend to reprove words, since the speeches of one who is desperate are as wind?
- American Standard Version (ASV)
- Do ye think to reprove words, Seeing that the speeches of one that is desperate are as wind?
- Bible in Basic English (BBE)
- My words may seem wrong to you, but the words of him who has no hope are for the wind.
- Darby Translation (DBY)
- Do ye imagine to reprove words? The speeches of one that is desperate are indeed for the wind.
- Webster's Bible (WBS)
- Do ye imagine to reprove words, and the speeches of one that is desperate, [which are] as wind?
- Young's Literal Translation (YLT)
- For reproof — do you reckon words? And for wind — sayings of the desperate.
Read in context
- 24ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ.
- 25ಸರಿಯಾದ ಮಾತುಗಳು ಎಷ್ಟು ಬಲವಾಗಿವೆ! ಆದರೆ ನಿಮ್ಮ ತರ್ಕವು ಯಾವದನ್ನು ಗದರಿಸುತ್ತದೆ?
- 26ಗಾಳಿಯ ಹಾಗಿರುವ ಮಾತುಗಳನ್ನೂ ದಿಕ್ಕಿಲ್ಲದವನ ನುಡಿಗಳನ್ನೂ ಗದರಿಸು ವದಕ್ಕೆ ನೀವು ಯೋಚಿಸುತ್ತೀರೋ?
- 27ಹೌದು, ದಿಕ್ಕಿಲ್ಲದವನ ಮೇಲೆ ಬಲೆ ಹಾಕುತ್ತೀರಿ; ನಿಮ್ಮ ಸ್ನೇಹಿತನಿ ಗೋಸ್ಕರ ಕುಣಿಯನ್ನು ಅಗೆಯುತ್ತೀರಿ.
- 28ಆದದರಿಂದ ಈಗ ಸಂತೃಪ್ತರಾಗಿ ನನ್ನನ್ನು ದೃಷ್ಟಿಸಿರಿ; ನಾನು ಸುಳ್ಳು ಹೇಳಿದರೆ ನಿಮ್ಮ ಕಣ್ಣಿಗೆ ಕಾಣುವದು.
Cross references
- Job 8:2 ಯೋಬನು 8:2ಎಷ್ಟರ ವರೆಗೆ ನೀನು ಇವುಗಳನ್ನು ನುಡಿಯುವಿ? ಎಷ್ಟರ ವರೆಗೆ ನಿನ್ನ ಬಾಯಿಯ ಮಾತುಗಳು ಬಿರುಗಾಳಿಯಂತಿರುವವು?
- Matthew 12:37 ಮತ್ತಾಯನು 12:37ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯಾಗುವಿ ಎಂದು ಹೇಳಿದನು.
- Ephesians 4:14 ಎಫೆಸದವರಿಗೆ 4:14ನಾವು ಇನ್ನು ಮೇಲೆ ಹೊಂಚು ಹಾಕುವವರ ವಂಚನೆಗೂ ಮನುಷ್ಯರ ಕಪಟದಿಂದಲೂ ಮೋಸದ ಉಪಾಯ ಮಾಡುವ ತಂತ್ರದಿಂದಲೂ ಬೋಧನೆಯ ಪ್ರತಿಯೊಂದು ಗಾಳಿ ಯಿಂದಲೂ ಬಡಿಯಲ್ಪಟ್ಟು ಅತ್ತಿತ್ತ ನೂಕಾಡಲ್ಪಡುವ ಬಾಲಕರಂತೆ ಇರಬಾರದು.
- Job 34:3–9 ಯೋಬನು 34:3–9ಆಹಾರವನ್ನು ಬಾಯಿ ರುಚಿನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ. ನ್ಯಾಯವನ್ನು ನಾವು ಆದುಕೊಳ್ಳೋಣ; ಒಳ್ಳೇದೇನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ. ಯೋಬನು--ನಾನು ನೀತಿವಂತನಾಗಿದ್ದೇನೆ, ದೇವರು ನನ್ನ ನ್ಯಾಯತೀ ರ್ಪನ್ನು ತೆಗೆದುಬಿಟ್ಟನು. ನನ್ನ ನ್ಯಾಯಕ್ಕೆ ವಿರೋಧ ವಾಗಿ ನಾನು ಸುಳ್ಳಾಡಲೋ? ದ್ರೋಹವಿಲ್ಲದೆ ನನ್ನ ಗಾಯವು ಮಾಯದಂಥದ್ದೇ ಎಂದು ಹೇಳಿದ್ದನು. ಯೋಬನಂತೆ ಹಾಸ್ಯವನ್ನು ನೀರಿನಂತೆ ಕುಡಿಯುವ ಪುರುಷನು ಯಾರು? ಅವನು ಅಪರಾಧ ಮಾಡು ವವರ ಸಹವಾಸದಲ್ಲಿ ಹೋಗುತ್ತಾ, ದುಷ್ಟ ಜನರ ಸಂಗಡ ನಡೆದುಕೊಳ್ಳುತ್ತಾನೆ. ಅವನು--ದೇವರ ಸಂಗಡ ಆನಂದಿಸುವದು ಮನುಷ್ಯನಿಗೆ ಉಪಯೋಗ ವಿಲ್ಲವೆಂದು ಹೇಳುತ್ತಾನೆ.
- Job 4:3–4 ಯೋಬನು 4:3–4ಇಗೋ, ಅನೇಕರನ್ನು ಶಿಕ್ಷಿಸಿದಿ; ಬಲಹೀನವಾದ ಕೈಗಳನ್ನು ಬಲ ಪಡಿಸಿದಿ. ಎಡವಿ ಬೀಳುವವನನ್ನು ನಿನ್ನ ನುಡಿಗಳು ನಿಲ್ಲಿಸಿದವು. ಬಲಹೀನವಾದ ಮೊಣಕಾಲುಗಳನ್ನು ಬಲ ಪಡಿಸಿದಿ.
- Job 42:7 ಯೋಬನು 42:7ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ.
- Job 3:3–26 ಯೋಬನು 3:3–26ನಾನು ಹುಟ್ಟಿದ ದಿವ ಸವೂ ಗಂಡು ಹುಟ್ಟಿತೆಂದು ಹೇಳಿದ ರಾತ್ರಿಯೂ ಹಾಳಾಗಲಿ. ಆ ದಿವಸವು ಕತ್ತಲಾಗಲಿ; ಮೇಲಿನಿಂದ ದೇವರು ಅದನ್ನು ಗೌರವಿಸದಿರಲಿ; ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ. ಕತ್ತಲೂ ಮರಣದ ನೆರಳೂ ಅದನ್ನು ಅಶುದ್ಧಮಾಡಲಿ; ಮೋಡವು ಅದರ ಮೇಲೆ ವಾಸಮಾಡಲಿ; ಹಗಲಿನ ಮೊಬ್ಬುಗಳು ಅದನ್ನು ಹೆದ ರಿಸಲಿ. ಆ ರಾತ್ರಿಯನ್ನು ಅಂಧಕಾರವು ಮುತ್ತಲಿ, ಅದು ವರುಷದ ದಿವಸಗಳಲ್ಲಿ ಸಂತೋಷಪಡದಿರಲಿ; ತಿಂಗಳುಗಳ ಲೆಕ್ಕದಲ್ಲಿ ಸೇರದಿರಲಿ. ಇಗೋ, ಆ ರಾತ್ರಿಯು ಒಂಟಿಯಾಗಿರಲಿ; ಆನಂದ ಸ್ವರವು ಅದಕ್ಕೆ ಬಾರದಿರಲಿ. ತಮ್ಮ ಶೋಕಕ್ಕಾಗಿ ಸಿದ್ಧವಾಗಿರುವ ಆ ದಿನವು ಶಪಿಸಲ್ಪಡಲಿ. ಅದರ ಸಂಧ್ಯಾರುಣದ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದು ಕೊಳ್ಳಲೂ ಬಾರದಿರಲಿ; ಅದು ದಿನದ ಉದಯವನ್ನು ನೋಡದಿರಲಿ. ಅದು ನನ್ನ ತಾಯಿಯ ಗರ್ಭದ ಬಾಗಲನ್ನು ಮುಚ್ಚಲಿಲ್ಲ; ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ. ನಾನು ಗರ್ಭ ಬಿಟ್ಟಾಗಲೇ ಯಾಕೆ ಸಾಯಲಿಲ್ಲ? ಹೊಟ್ಟೆಯೊಳಗಿಂದ ಹೊರಟಾಗಲೇ ಯಾಕೆ ಪ್ರಾಣ ಬಿಡಲಿಲ್ಲ? ಮೊಣಕಾಲುಗಳು ನನ್ನನ್ನು ತಡೆಯದಿ ದ್ದದ್ದೇಕೆ? ನಾನು ಕುಡಿಯುವ ಹಾಗೆ ಮೊಲೆಗಳು ಯಾಕೆ? ಹಾಗಾಗಿದ್ದರೆ ಈಗ ಮೌನವಾಗಿ ಮಲಗಿ ಕೊಳ್ಳುತ್ತಿದ್ದೆನು; ವಿಶ್ರಾಂತಿಯಲ್ಲಿರುತ್ತಿದ್ದೆನು. ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ ಇಲ್ಲವೆ ಬಂಗಾರ ಇರುವ ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸುವಂಥ ಪ್ರಧಾನರ ಸಂಗಡ ಆಗಲೇ ನನಗೆ ಶಾಂತಿಯಾಗಿರುವದು. ಇಲ್ಲವೆ ಮರೆಯಾದ ಗರ್ಭ ಪತನದ ಹಾಗೆಯೂ ಬೆಳಕನ್ನು ನೋಡದ ಕೂಸುಗಳ ಹಾಗೆಯೂ ಇಲ್ಲದೆ ಇರುವೆನು. ಅಲ್ಲಿ ದುಷ್ಟರು ತೊಂದರೆ ಕೊಡುವದನ್ನು ಬಿಟ್ಟುಬಿಡುತ್ತಾರೆ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿದ್ದಾರೆ. ಸೆರೆ ಯವರು ಕೂಡ ಶಾಂತವಾಗಿದ್ದಾರೆ; ಬಾಧೆಪಡಿಸುವ ವನ ಶಬ್ದವನ್ನು ಕೇಳುವದಿಲ್ಲ. ಕಿರಿಯನು ಹಿರಿಯನು ಅಲ್ಲಿ ಇದ್ದಾರೆ. ದಾಸನು ಯಜಮಾನನಿಂದ ಬಿಡುಗಡೆ ಯಾಗಿದ್ದಾನೆ. ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ? ಬಾರ ದಿರುವ ಮರಣಕ್ಕೋಸ್ಕರ ಕಾದುಕೊಂಡವರಿಗೂ ಅಡ ಗಿಸಿದ ನಿಧಿಗಿಂತಲೂ ಹೆಚ್ಚಾಗಿ ಅದಕ್ಕಾಗಿ ಅಗೆಯುತ್ತಾರೆ. ಸಮಾಧಿ ಕಂಡುಕೊಂಡೆವೆಂದು ಸಂತೋಷ ಸಂಭ್ರಮವಾಗಿ ಹರ್ಷಿಸುವವರಿಗೂ ದೇವರು ಸುತ್ತು ಬೇಲಿ ಹಾಕಿದ್ದರಿಂದ ಅಡಗಿದ ಮಾರ್ಗವುಳ್ಳವರಿಗೂ ಬೆಳಕು ಯಾಕೆ? ನಾನು ತಿನ್ನುವದಕ್ಕಿಂತ ಮುಂಚೆ ನನ್ನ ನಿಟ್ಟುಸಿರು ಬರುವದು. ನೀರಿನಂತೆ ನನ್ನ ಗರ್ಜನೆ ಗಳು ಹೊಯ್ಯಲ್ಪಟ್ಟಿವೆ. ಬಹಳವಾದ ಹೆದರಿಕೆಯು ನನ್ನ ಮೇಲೆ ಬಂತು, ನಾನು ಅಂಜಿದ್ದೇ ನನಗೆ ಬಂತು.ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು. ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು.
- Job 6:9 ಯೋಬನು 6:9ನಾನು ನಾಶವಾಗುವದು ದೇವರಿಗೆ ಮೆಚ್ಚಿಕೆಯಾಗುವದಾದರೆ ತನ್ನ ಕೈಚಾಚಿ ನನ್ನನ್ನು ಸಾಯಿಸಿದರೆ ಒಳ್ಳೆದು.
- Job 2:10 ಯೋಬನು 2:10ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ.
- Job 10:1 ಯೋಬನು 10:1ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
- Job 38:2 ಯೋಬನು 38:2ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
- Hosea 12:1 ಹೋಶೇಯ 12:1ಎಫ್ರಾಯಾಮು ಗಾಳಿಯನ್ನೇ ಸೇವಿಸುತ್ತದೆ; ಪಶ್ಚಿಮದ ಗಾಳಿಯ ಹಿಂದೆ ಹಿಂಬಾಲಿಸಿ ಕೊಂಡು ಹೋಗುತ್ತದೆ. ಅವರು ಪ್ರತಿದಿನವು ಸುಳ್ಳನ್ನೂ ನಾಶನವನ್ನೂ ಹೆಚ್ಚಿಸಿ ಅಶ್ಯೂರ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡು ಐಗುಪ್ತಕ್ಕೆ ಎಣ್ಣೆಯನ್ನು ಹೊತ್ತುಕೊಂಡು ಹೋಗುತ್ತಾರೆ.