Job · chapter 11 · verse 8
Job 11:8 in Kannada
ಅದು ಆಕಾಶಕ್ಕಿಂತಲೂ ಎತ್ತರವಾಗಿದೇ; ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳ ವಾಗಿದೆ; ನೀನೇನು ತಿಳಿದುಕೊಳ್ಳುವಿ?
Adu aakaashakkintaloo ettaravaagide; neenenu maaduvi? Adu paataalakkintaloo aala vaagide; neenenu tilidukolluvi?
Job 11:8 in English
- King James Version (KJV)
- [It is] as high as heaven; what canst thou do? deeper than hell; what canst thou know?
- World English Bible (WEB)
- They are high as heaven. What can you do? They are deeper than Sheol. What can you know?
- American Standard Version (ASV)
- It is high as heaven; what canst thou do? Deeper than Sheol; what canst thou know?
- Bible in Basic English (BBE)
- They are higher than heaven; what is there for you to do? deeper than the underworld, and outside your knowledge;
- Darby Translation (DBY)
- [It is as] the heights of heaven; what wilt thou do? deeper than Sheol; what canst thou know?
- Webster's Bible (WBS)
- [It is] as high as heaven; what canst thou do? deeper than hell; what canst thou know?
- Young's Literal Translation (YLT)
- Heights of the heavens! — what dost thou? Deeper than Sheol! — what knowest thou?
Read in context
- 6ಸುಜ್ಞಾನವು ಇಮ್ಮಡಿಯಾಗಿದೆ. ಹಾಗಾದರೆ ದೇವರು ನಿನ್ನ ಅಕ್ರಮ ಕ್ಕಿಂತ ಕಡಿಮೆಯಾದದ್ದನ್ನು ನಿನಗೆ ಮನ್ನಿಸಿ ಬಿಡುತ್ತಾ ನೆಂದು ತಿಳಿದುಕೋ.
- 7ದೇವರನ್ನು ಶೋಧಿಸಿ ಕಂಡುಕೊಳ್ಳುವಿಯೋ? ಸರ್ವಶಕ್ತನ ಸಂಪೂರ್ಣತ್ವವನ್ನು ನಿನ್ನಿಂದ ಕಂಡು ಹಿಡಿಯ ಲಾದೀತೆ?
- 8ಅದು ಆಕಾಶಕ್ಕಿಂತಲೂ ಎತ್ತರವಾಗಿದೇ; ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳ ವಾಗಿದೆ; ನೀನೇನು ತಿಳಿದುಕೊಳ್ಳುವಿ?
- 9ಅದರ ಅಳತೆ ಭೂಮಿಗಿಂತ ಉದ್ದವೂ ಸಮುದ್ರಕ್ಕಿಂತ ಅಗಲವೂ ಆಗಿದೆ.
- 10ಆತನು ಅದನ್ನು ಕಡಿಯುವದಾದರೆ ಇಲ್ಲವೆ ಮುಚ್ಚುವದಾದರೆ ಅಥವಾ ಒಟ್ಟು ಗೂಡಿಸುವದಾದರೆ ಆತನನ್ನು ತಡೆಯುವವರು ಯಾರಿದ್ದಾರೆ?
Cross references
- Job 22:12 ಯೋಬನು 22:12ದೇವರು ಆಕಾಶದ ಎತ್ತರದಲ್ಲಿದ್ದಾನಲ್ಲವೋ? ನಕ್ಷತ್ರಗಳ ಎತ್ತರ ನೋಡು, ಅವು ಎಷ್ಟು ಉನ್ನತ!
- Psalm 139:6–8 ಕೀರ್ತನೆಗಳು 139:6–8ಇಂಥ ತಿಳುವಳಿಕೆಯು ನನಗೆ ಅತಿ ಅದ್ಭುತವಾಗಿದೆ; ಅದು ನನಗೆ ನಿಲುಕದಷ್ಟು ಉನ್ನತವಾಗಿದೆ. ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿನ್ನ ಸನ್ನಿಧಿಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಲಿ? ನಾನು ಆಕಾಶಕ್ಕೆ ಏರಿಹೋದರೆ ನೀನು ಅಲ್ಲಿ ಇದ್ದೀ; ಪಾತಾಳದಲ್ಲಿ ನನ್ನ ಹಾಸಿಗೆಯನ್ನು ಮಾಡಿಕೊಂಡರೆ ಅಗೋ, ನೀನು ಅಲ್ಲಿ ಇದ್ದೀ.
- Isaiah 55:9 ಯೆಶಾಯ 55:9ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
- Job 35:5 ಯೋಬನು 35:5ಆಕಾಶಗಳನ್ನು ದೃಷ್ಟಿಸಿ ನೋಡು, ಮೇಘಗಳನ್ನು ದೃಷ್ಟಿಸು; ಅವು ನಿನಗಿಂತ ಎತ್ತರವಾಗಿವೆ.
- Psalm 148:13 ಕೀರ್ತನೆಗಳು 148:13ಕರ್ತನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳ ಮೇಲೆ ಅದೆ.ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
- Job 26:6 ಯೋಬನು 26:6ಆತನ ಮುಂದೆ ನರಕವು ಬೆತ್ತಲೆಯಾಗಿದೆ; ನಾಶನಕ್ಕೆ ಮರೆ ಇಲ್ಲ.
- Amos 9:2 ಆಮೋಸ 9:2ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು.
- 2 Chronicles 6:18 2 ಪೂರ್ವಕಾಲವೃತ್ತಾಂತ 6:18ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾಕಾಶಗಳೂ ನಿನ್ನನ್ನು ಹಿಡಿಸಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಆಲಯವು ನಿನ್ನನ್ನು ಹಿಡಿಸುವದು ಹೇಗೆ?
- Ephesians 3:18–19 ಎಫೆಸದವರಿಗೆ 3:18–19ಪರಿಶುದ್ಧರೆಲ್ಲ ರೊಂದಿಗೆ ಅದರ ಅಗಲ ಉದ್ದ ಆಳ ಮತ್ತು ಎತ್ತರವನ್ನು ಗ್ರಹಿಸುವಂತೆಯೂ ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
- Psalm 103:11 ಕೀರ್ತನೆಗಳು 103:11ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ.
- Proverbs 25:2–3 ಜ್ಞಾನೋಕ್ತಿಗಳು 25:2–3ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು. ಆಕಾ ಶವು, ಉನ್ನತ ಭೂಮಿಯು ಅಗಾಧ ಮತ್ತು ಅರಸರ ಹೃದಯವು ಅಗೋಚರ.