Job · chapter 12 · verse 17
Job 12:17 in Kannada
ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ.
Aatanu salahegaara rannu kedige nadisuttaane; nyaayaadhipatigalannu moorkharannaagi maaduttaane.
Job 12:17 in English
- King James Version (KJV)
- He leadeth counsellors away spoiled, and maketh the judges fools.
- World English Bible (WEB)
- He leads counselors away stripped. He makes judges fools.
- American Standard Version (ASV)
- He leadeth counsellors away stripped, And judges maketh he fools.
- Bible in Basic English (BBE)
- He takes away the wisdom of the wise guides, and makes judges foolish;
- Darby Translation (DBY)
- He leadeth counsellors away spoiled, and judges maketh he fools;
- Webster's Bible (WBS)
- He leadeth counselors away spoiled, and maketh the judges fools.
- Young's Literal Translation (YLT)
- Causing counsellors to go away a spoil, And judges He maketh foolish.
Read in context
- 15ಇಗೋ, ಆತನು ಜಲಗಳನ್ನು ಬಿಗಿ ಹಿಡಿಯುತ್ತಾನೆ; ಅವು ಬತ್ತಿಹೋಗುತ್ತವೆ; ಆತನು ಅವುಗಳನ್ನು ಹೊರಗೆ ಕಳುಹಿಸಿದಾಗ ಅವು ಭೂಮಿ ಯನ್ನು ಬುಡಮೇಲು ಮಾಡುತ್ತವೆ.
- 16ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ.
- 17ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ.
- 18ಆತನು ಅರಸರ ಬಂಧನಗಳನ್ನು ಬಿಡಿಸಿ ಅವರ ನಡುಗಳಿಗೆ ನಡುಕಟ್ಟನ್ನು ಕಟ್ಟುತ್ತಾನೆ.
- 19ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ.
Cross references
- Isaiah 29:14 ಯೆಶಾಯ 29:14ಹೀಗಿರುವದ ರಿಂದ ಇಗೋ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಮಾಡು ವೆನು; ಅವರ ಜ್ಞಾನಿಗಳ ಜ್ಞಾನವು ಅಳಿಯುವದು (ನಾಶ), ಅವರ ವಿವೇಕಿಗಳ ತಿಳುವಳಿಕೆಯು ಅಡಗಿ ಕೊಳ್ಳುವದು ಅಂದನು.
- 1 Corinthians 1:19–20 1 ಕೊರಿಂಥದವರಿಗೆ 1:19–20ನಾನು ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ಇಲ್ಲದಂತಾಗ ಮಾಡುವೆನು ಎಂದು ಬರೆಯಲ್ಪಟ್ಟಿದೆ. ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ?
- 2 Samuel 17:23 2 ಸಮುವೇಲನು 17:23ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ ಪಟ್ಟಣದಲ್ಲಿರುವ ತನ್ನ ಮನೆಗೆ ಹೋಗಿ ಅದನ್ನು ಕ್ರಮಪಡಿಸಿ ಉರ್ಲುಹಾಕಿ ಕೊಂಡು ಸತ್ತು ತನ್ನ ತಂದೆಯ ಸಮಾಧಿಯಲ್ಲಿ ಹೂಣಲ್ಪಟ್ಟನು.
- Job 3:14 ಯೋಬನು 3:14ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ
- 2 Samuel 15:31 2 ಸಮುವೇಲನು 15:31ಅಹೀತೋಫೆಲನು ಅಬ್ಷಾಲೋ ಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾ ನೆಂದು ದಾವೀದನಿಗೆ ತಿಳಿಸಲ್ಪಟ್ಟಾಗ ದಾವೀದನು--ಕರ್ತನೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವಾಗ ಮಾಡು ಅಂದನು.
- Job 9:24 ಯೋಬನು 9:24ಲೋಕವು ಕೆಟ್ಟವನ ಕೈಯಲ್ಲಿ ಕೊಡಲ್ಪಟ್ಟಿದೆ. ಅದರ ನ್ಯಾಯಾಧಿಪತಿಗಳ ಮುಖಗ ಳನ್ನು ಆತನು ಮುಚ್ಚುತ್ತಾನೆ. ಇಲ್ಲವಾದರೆ ಆತನು ಎಲ್ಲಿರುತ್ತಿದ್ದನೋ? ಯಾರಾಗಿರುತ್ತಿದ್ದನೋ?
- 2 Samuel 17:14 2 ಸಮುವೇಲನು 17:14ಆಗ ಅಬ್ಷಾ ಲೋಮನೂ ಇಸ್ರಾಯೇಲಿನ ಎಲ್ಲಾ ಜನರೂಅಹೀತೋಫೆಲನ ಆಲೋಚನೆಗಿಂತ ಅರ್ಕೀಯನಾದ ಹೂಷೈಯ ಆಲೋಚನೆ ಒಳ್ಳೇದು ಅಂದರು. ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೇ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ಕರ್ತನು ನೇಮಿಸಿದ್ದನು.
- Isaiah 19:12–14 ಯೆಶಾಯ 19:12–14ಅವರು ಎಲ್ಲಿದ್ದಾರೆ? ನಿನ್ನ ಜ್ಞಾನಿಗಳು ಎಲ್ಲಿ? ಅವರು ನಿನಗೆ ಹೇಳಲಿ. ಸೈನ್ಯಗಳ ಕರ್ತನು ಐಗುಪ್ತ್ಯರ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದು ಕೊಳ್ಳಲಿ. ಚೋಯನಿನ ಶ್ರೇಷ್ಠರು (ಪ್ರಧಾನರು) ಮೂರ್ಖರಾಗಿದ್ದಾರೆ. ನೋಫಿನ ಶ್ರೇಷ್ಠರು ಮೋಸ ಹೋಗಿದ್ದಾರೆ. ಐಗುಪ್ತದ ಗೋತ್ರಗಳ ಪ್ರಮುಖರು ಅದನ್ನು ಭ್ರಮೆಗೊಳಿಸಿ ತಪ್ಪುದಾರಿಗೆಳೆದಿದ್ದಾರೆ. ಕರ್ತನು ಅದರ ಮಧ್ಯದಲ್ಲಿ ವಕ್ರವಾದ ಆತ್ಮವನ್ನು ಕಲ್ಪಿಸಿದ್ದಾನೆ (ಬೆರೆಸಿದ್ದಾನೆ). ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾನೆ.