Job · chapter 3 · verse 14
Job 3:14 in Kannada
ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ
Tamage haalaada sthalagalannu kattuva arasugala sangadaloo; bhoomiya salahegaarara sangadaloo
Job 3:14 in English
- King James Version (KJV)
- With kings and counsellors of the earth, which built desolate places for themselves;
- World English Bible (WEB)
- with kings and counselors of the earth, who built up waste places for themselves;
- American Standard Version (ASV)
- With kings and counsellors of the earth, Who built up waste places for themselves;
- Bible in Basic English (BBE)
- With kings and the wise ones of the earth, who put up great houses for themselves;
- Darby Translation (DBY)
- With kings and counsellors of the earth, who build desolate places for themselves,
- Webster's Bible (WBS)
- With kings and counselors of the earth, who built desolate places for themselves;
- Young's Literal Translation (YLT)
- With kings and counsellors of earth, These building wastes for themselves.
Read in context
- 12ಮೊಣಕಾಲುಗಳು ನನ್ನನ್ನು ತಡೆಯದಿ ದ್ದದ್ದೇಕೆ? ನಾನು ಕುಡಿಯುವ ಹಾಗೆ ಮೊಲೆಗಳು ಯಾಕೆ?
- 13ಹಾಗಾಗಿದ್ದರೆ ಈಗ ಮೌನವಾಗಿ ಮಲಗಿ ಕೊಳ್ಳುತ್ತಿದ್ದೆನು; ವಿಶ್ರಾಂತಿಯಲ್ಲಿರುತ್ತಿದ್ದೆನು.
- 14ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ
- 15ಇಲ್ಲವೆ ಬಂಗಾರ ಇರುವ ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸುವಂಥ ಪ್ರಧಾನರ ಸಂಗಡ ಆಗಲೇ ನನಗೆ ಶಾಂತಿಯಾಗಿರುವದು.
- 16ಇಲ್ಲವೆ ಮರೆಯಾದ ಗರ್ಭ ಪತನದ ಹಾಗೆಯೂ ಬೆಳಕನ್ನು ನೋಡದ ಕೂಸುಗಳ ಹಾಗೆಯೂ ಇಲ್ಲದೆ ಇರುವೆನು.
Cross references
- Job 15:28 ಯೋಬನು 15:28ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ.
- Psalm 89:48 ಕೀರ್ತನೆಗಳು 89:48ಮರಣವನ್ನು ನೋಡದೆ ಬದುಕುವಂಥ, ಸಮಾಧಿಯ ವಶದಿಂದ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಂಥ, ಪುರುಷನು ಯಾರು ಸೆಲಾ.
- Psalm 49:14 ಕೀರ್ತನೆಗಳು 49:14ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು.
- Isaiah 14:10–16 ಯೆಶಾಯ 14:10–16ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು. ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ; ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ
- Psalm 49:6–10 ಕೀರ್ತನೆಗಳು 49:6–10ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು. ಆದರೆ ಸದಾ ಕಾಲಕ್ಕೂ ಬದುಕಿರುವಂತೆ ಮಾಡಿ ಕೊಳೆಯುವಿಕೆಯನ್ನು ನೋಡದ ಹಾಗೆ ತನ್ನ ಸಹೋದರನನ್ನು ಯಾವ ಮನುಷ್ಯನೂ ಅವನು ದೇವರಿಗೆ ಹಣವನ್ನು (ಈಡು) ಕೊಟ್ಟು ಅದರಿಂದ ವಿಮೋಚಿಸಲಾರನು. ಅವರ ಪ್ರಾಣದ ವಿಮೋಚನೆಯು ಅಮೂಲ್ಯ ವಾಗಿದೆ; ಅದು ಯುಗಯುಗಕ್ಕೂ ನಿಲ್ಲುವದು. ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ.
- Isaiah 5:8 ಯೆಶಾಯ 5:8ಸ್ಥಳ ಮಿಗಿಸದೆ ನೀವು ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ ಹೊಲಕ್ಕೆ ಹೊಲ ಸೇರಿಸುವವರಿಗೆ ಅಯ್ಯೋ!
- Ezekiel 27:18–32 ಯೆಹೆಜ್ಕೇಲನು 27:18–32ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿ ದ್ದದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದರಿಂದಲೂ ದಾನ್ ಮತ್ತು ಯಾವಾನ್ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು. ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು. ಅರಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ವ್ಯಾಪಾರಿಗಳಾಗಿದ್ದರು; ಕುರಿಮರಿಗಳಿಂದಲೂ ಟಗರುಗಳಿಂದಲೂ ಹೋತಗ ಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು. ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಹಾರಾನ್, ಕನ್ನೆ, ಏದೆನ್, ಶೆಬ, ಅಶ್ಶೂರ್ ಮತ್ತು ಕಿಲ್ಮದ್ವರು ನಿನ್ನ ವ್ಯಾಪಾರಿಗಳಾಗಿದ್ದರು. ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು. ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಯಲ್ಲಿ ಸರಕುಗಳನ್ನು ತರುತ್ತಿದ್ದವು; ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದಿ. ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ. ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಾವಿಕರೂ ಅಂಬಿಗರೂ ಒಡಕುಗಳನ್ನು ಮುಚ್ಚುವವರೂ ವ್ಯಾಪಾರಿ ಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು. ನಿನ್ನ ನಾವಿಕರ ಕಿರಿಚಾಟಕ್ಕೆ ಉಪ ನಗರಗಳು, ಪ್ರದೇಶಗಳು, ನಡುಗುವವು. ಹುಟ್ಟು ಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು, ನಿನ್ನ ನಿಮಿತ್ತ ದುಃಖದಿಂದ ಅರಚಿ ತಲೆಗೆ ದೂಳೆರೆಚಿಕೊಂಡು ಬೂದಿಯಲ್ಲಿ ಬಿದ್ದು ಹೊರಳಾಡಿ; ನಿನಗಾಗಿ ತಲೆಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆ ಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು. ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು?
- Ecclesiastes 8:8 ಪ್ರಸಂಗಿ 8:8ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.
- 1 Kings 11:43 1 ಅರಸುಗಳು 11:43ಸೊಲೊಮೋನನು ತನ್ನ ಪಿತೃ ಗಳ ಸಂಗಡ ಮಲಗಿದನು; ಅವನು ತನ್ನ ತಂದೆ ಯಾದ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.
- Ezekiel 26:20 ಯೆಹೆಜ್ಕೇಲನು 26:20ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 58:12 ಯೆಶಾಯ 58:12ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು, ತಲತಲಾ ಂತರಕ್ಕಿದ್ದ ಅಸ್ತಿವಾರಗಳನ್ನು ನೀನು ಎಬ್ಬಿಸುವಿ; ಸೀಳಿ ದ್ದನ್ನು ಸರಿ ಮಾಡುವವನೆಂದೂ ನಿವಾಸಿಗಳಿಗಾಗಿ ಹಾದಿಗಳನ್ನು ತಿರಿಗಿ ಸರಿಮಾಡುವವನೆಂದೂ ನೀನು ಕರೆಯಲ್ಪಡುವಿ.
- Job 30:23 ಯೋಬನು 30:23ಮರಣಕ್ಕೂ ಎಲ್ಲಾ ಜೀವಿಗಳ ನೇಮಕವಾದ ಮನೆಗೂ ನನ್ನನ್ನು ತಿರುಗಿಸುವಿ ಎಂದು ತಿಳಿದಿದ್ದೇನೆ.