Job · chapter 18 · verse 15
Job 18:15 in Kannada
ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು.
Avanigillada avana gudaaradalli adu vaasi suvudu; avana nivaasada mele gandhaka chaduri baruvadu.
Job 18:15 in English
- King James Version (KJV)
- It shall dwell in his tabernacle, because [it is] none of his: brimstone shall be scattered upon his habitation.
- World English Bible (WEB)
- There will dwell in his tent that which is none of his. Sulfur will be scattered on his habitation.
- American Standard Version (ASV)
- There shall dwell in his tent that which is none of his: Brimstone shall be scattered upon his habitation.
- Bible in Basic English (BBE)
- In his tent will be seen that which is not his, burning stone is dropped on his house.
- Darby Translation (DBY)
- They who are none of his shall dwell in his tent; brimstone shall be showered upon his habitation:
- Webster's Bible (WBS)
- It shall dwell in his tabernacle, because [it is] none of his: brimstone shall be scattered upon his habitation.
- Young's Literal Translation (YLT)
- It dwelleth in his tent — out of his provender, Scattered over his habitation is sulphur.
Read in context
- 13ಅವನ ಚರ್ಮದ ಬಲವನ್ನು ತಿನ್ನುವನು; ಮರಣದ ಚೊಚ್ಟಲ ಮಗನು ಅವನ ಬಲವನ್ನು ತಿನ್ನುವನು.
- 14ಅವನ ಭರವಸವು ಅವನ ಗುಡಾರದೊಳಗಿಂದ ಕೀಳಲ್ಪಡುವುದು; ಅದು ಅವ ನನ್ನು ದಿಗಿಲುಗಳ ಅರಸನ ಬಳಿಗೆ ನಡಿಸುವದು.
- 15ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು.
- 16ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು;
- 17ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು.
Cross references
- Psalm 11:6 ಕೀರ್ತನೆಗಳು 11:6ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು;ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
- Deuteronomy 29:23 ಧರ್ಮೋಪದೇಶಕಾಂಡ 29:23ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ--
- Isaiah 34:9–10 ಯೆಶಾಯ 34:9–10ಪ್ರವಾಹಗಳು ಇಳಿಜಾರಾಗಿ ಮಾರ್ಪಡುವದೂ; ಅದರ ದೂಳು ಗಂಧಕವಾಗುವದು; ದೇಶವು ಉರಿ ಯುವ ಇಳಿಜಾರು ಪ್ರದೇಶವಾಗುವದು. ಅದು ರಾತ್ರಿಯಲ್ಲಾದರೂ ಇಲ್ಲವೆ ಹಗಲಿನಲ್ಲಾದರೂ ಆರು ವದಿಲ್ಲ; ಅದರ ಹೊಗೆಯು ನಿರಂತರವಾಗಿ ಏಳುತ್ತಿರು ವದು; ಅದು ತಲತಲಾಂತರಕ್ಕೂ ಹಾಳಾಗಿ ಬಿದ್ದಿರು ವದು; ಅದನ್ನು ಎಂದೆಂದಿಗೂ ಯಾರೂ ಹಾದು ಹೋಗರು.
- Job 20:18–21 ಯೋಬನು 20:18–21ದುಡಿದದ್ದನ್ನ್ನು ನುಂಗದೆ ತಿರುಗಿ ಕೊಡುವನು; ಆಸ್ತಿಯ ಮೇರೆಗೆ ಬದಲು ಕೊಡುವನು; ಅವನು ಉಲ್ಲಾಸ ಹೊಂದುವದಿಲ್ಲ. ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು. ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ. ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ.
- Genesis 19:24 ಆದಿಕಾಂಡ 19:24ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು.
- Revelation 19:20 ಪ್ರಕಟನೆ 19:20ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Habakkuk 2:6–11 ಹಬಕ್ಕೂಕ 2:6–11ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ? ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ. ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ. ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ! ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ. ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Zechariah 5:4 ಜೆಕರ್ಯ 5:4ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
- Job 18:12–13 ಯೋಬನು 18:12–13ಅವನ ಬಲವು ಕುಸಿಯುವುದು, ನಾಶನವು ಅವನ ಬಳಿಯಲ್ಲಿ ಸಿದ್ಧವಾಗಿರುವದು. ಅವನ ಚರ್ಮದ ಬಲವನ್ನು ತಿನ್ನುವನು; ಮರಣದ ಚೊಚ್ಟಲ ಮಗನು ಅವನ ಬಲವನ್ನು ತಿನ್ನುವನು.
- Jeremiah 22:13 ಯೆರೆಮೀಯ 22:13ಅನೀತಿಯಿಂದ ತನ್ನ ಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳು ವವನಿಗೂ ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸತಕ್ಕೊಳ್ಳುವವನಿಗೂ ಅಯ್ಯೋ!
- Job 31:38–39 ಯೋಬನು 31:38–39ನನ್ನ ಭೂಮಿಯು ನನಗೆ ವಿರೋಧವಾಗಿ ಕೂಗಿದರೆ, ಅದರ ಸಾಲುಗಳು ಕೂಡ ದೂರಿದರೆ, ಅದರ ಫಲವನ್ನು ನಾನು ಹಣಕೊಡದೆ ತಿಂದಿದ್ದರೆ, ಅದರ ಯಾಜಮಾನರ ಪ್ರಾಣವನ್ನು ತೆಗೆದುಬಿಟ್ಟಿದ್ದರೆ,ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು.