Job · chapter 21 · verse 31
Job 21:31 in Kannada
ಅವನ ಮಾರ್ಗವನ್ನು ಮುಖಾ ಮುಖಿಯಾಗಿ ಅವನಿಗೆ ತೋರಿಸಿ ಅವನು ಮಾಡಿದ್ದ ಕ್ಕೋಸ್ಕರ ಅವನಿಗೆ ಮುಯ್ಯಿಗೆಮುಯ್ಯಿ ಕೊಡುವವನು ಯಾರು?
Avana maargavannu mukhaa mukhiyaagi avanige torisi avanu maadidda kkoskara avanige muyyigemuyyi koduvavanu yaaru?
Job 21:31 in English
- King James Version (KJV)
- Who shall declare his way to his face? and who shall repay him [what] he hath done?
- World English Bible (WEB)
- Who will declare his way to his face? Who will repay him what he has done?
- American Standard Version (ASV)
- Who shall declare his way to his face? And who shall repay him what he hath done?
- Bible in Basic English (BBE)
- Who will make his way clear to his face? and if he has done a thing, who gives him punishment for it?
- Darby Translation (DBY)
- Who shall declare his way to his face? and who shall repay him what he hath done?
- Webster's Bible (WBS)
- Who shall declare his way to his face? and who shall repay him [what] he hath done?
- Young's Literal Translation (YLT)
- Who doth declare to his face his way? And [for] that which he hath done, Who doth give recompence to him?
Read in context
- 29ಮಾರ್ಗದಲ್ಲಿ ಹಾದುಹೋಗುವ ವರನ್ನು ಕೇಳಲಿಲ್ಲವೋ? ಅವರ ಗುರುತುಗಳನ್ನು ನೀವು ಗೊತ್ತುಮಾಡಲಿಲ್ಲವೋ?
- 30ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.
- 31ಅವನ ಮಾರ್ಗವನ್ನು ಮುಖಾ ಮುಖಿಯಾಗಿ ಅವನಿಗೆ ತೋರಿಸಿ ಅವನು ಮಾಡಿದ್ದ ಕ್ಕೋಸ್ಕರ ಅವನಿಗೆ ಮುಯ್ಯಿಗೆಮುಯ್ಯಿ ಕೊಡುವವನು ಯಾರು?
- 32ಅವನು ಸಮಾಧಿಗಳಿಗೆ ಒಯ್ಯಲ್ಪಡು ವನು; ಗೋರಿಯ ಮೇಲೆ ಇರುವನು.
- 33ತಗ್ಗಿನ ಗಡ್ಡೆಗಳು ಅವನಿಗೆ ರಮ್ಯವಾಗಿರುವವು; ಎಲ್ಲಾ ಮನು ಷ್ಯರನ್ನು ತನ್ನ ಹಿಂದೆ ಎಳೆಯುತ್ತಾನೆ; ಅವನ ಮುಂದಿನ ವರಿಗೆ ಲೆಕ್ಕವಿಲ್ಲ.ವ್ಯರ್ಥತ್ವದಿಂದ ನೀವು ನನ್ನನ್ನು ಸಂತೈಸುವದು ಹೇಗೆ? ನಿಮ್ಮ ಉತ್ತರಗಳಲ್ಲಿ ಸುಳ್ಳು ಉಳುಕೊಳ್ಳುವದು.
Cross references
- Deuteronomy 7:10 ಧರ್ಮೋಪದೇಶಕಾಂಡ 7:10ತನ್ನನ್ನು ಹಗೆ ಮಾಡುವವರಿಗೆ ಮುಖಾಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸಿ ಅವರನ್ನು ನಾಶಮಾಡುತ್ತಾನೆ; ಆತನು ತನ್ನನ್ನು ಹಗೆಮಾಡುವವರಿಗೆ ತಡಮಾಡದೆ ಮುಖಾ ಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ ಎಂದು ತಿಳಿದುಕೋ.
- Galatians 2:11 ಗಲಾತ್ಯದವರಿಗೆ 2:11ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು.
- Romans 12:19 ರೋಮಾಪುರದವರಿಗೆ 12:19ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
- Psalm 50:21 ಕೀರ್ತನೆಗಳು 50:21ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು.
- Job 21:19 ಯೋಬನು 21:19ದೇವರು ಅವನ ಮಕ್ಕಳಿಗೆ ಅವನ ಅಪರಾಧವನ್ನು ಇಡುತ್ತಾನೆ; ಅವನು ತಿಳುಕೊಳ್ಳುವ ಹಾಗೆ ಅವನಿಗೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ.
- 1 Kings 21:19–24 1 ಅರಸುಗಳು 21:19–24ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು. ಆಗ ಅಹಾಬನು ಎಲೀಯನಿಗೆ--ನನ್ನ ಶತ್ರುವೇ, ನೀನು ನನ್ನನ್ನು ಕಂಡುಕೊಂಡಿಯಾ ಅಂದನು. ಅದಕ್ಕ ವನು--ಕಂಡುಕೊಂಡೆನು; ನೀನು ಕರ್ತನ ದೃಷ್ಟಿ ಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡ ದ್ದರಿಂದ ಇಗೋ, ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನ ಸಂತತಿಯನ್ನು ತೆಗೆದುಹಾಕಿ ಅಹಾಬ ನಿಗೆ ಒಬ್ಬ ಗಂಡಸಾದರೂ ಇಸ್ರಾಯೇಲಿನಲ್ಲಿ ಬಚ್ಚಿಡ ಲ್ಪಟ್ಟವನಾದರೂ ಉಳಿದವನಾದರೂ ಇರದ ಹಾಗೆ ತೆಗೆದುಬಿಡುವೆನು. ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು ಅಂದನು. ಈಜೆಬೆಲ ಳನ್ನು ಕುರಿತು ಕರ್ತನು--ನಾಯಿಗಳು ಈಜೆಬೆಲಳನ್ನು ಇಜ್ರೇಲಿನ ಗೋಡೆಯ ಬಳಿಯಲ್ಲಿ ತಿನ್ನುವವು. ಅಹಾಬನವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಹೇಳುತ್ತಾನೆ ಅಂದನು.
- 2 Samuel 12:7–12 2 ಸಮುವೇಲನು 12:7–12ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು. ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ. ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ. ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
- Jeremiah 2:33–35 ಯೆರೆಮೀಯ 2:33–35ಪ್ರೀತಿಯನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಯಾಕೆ ಚಂದ ಮಾಡಿಕೊಳ್ಳುತ್ತೀ? ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ. ಇದಲ್ಲದೆ ನಿನ್ನ ಸೆರಗುಗಳಲ್ಲಿ ಅಪರಾಧವಿಲ್ಲದ ಬಡಪ್ರಾಣಿಗಳ ರಕ್ತವು ಸಿಕ್ಕಿದೆ; ಅಂತರಂಗದ ಶೋಧನೆಯಿಂದಲ್ಲ, ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೇನೆ. ಆದಾಗ್ಯೂ ನೀನು--ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ಆತನ ಕೋಪವು ನನ್ನನ್ನು ಬಿಟ್ಟು ತಿರುಗುವದೆಂದು ಹೇಳುತ್ತೀ; ನಾನು ಪಾಪ ಮಾಡಲಿಲ್ಲವೆಂದು ನೀನು ಹೇಳುವದ ರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
- Isaiah 59:13 ಯೆಶಾಯ 59:13ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ.
- Job 41:11 ಯೋಬನು 41:11ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ.
- Acts 24:25 ಅಪೊಸ್ತಲರ ಕೃತ್ಯಗಳು 24:25ಇದಲ್ಲದೆ ನೀತಿ ದಮೆಯ ಮತ್ತು ಮುಂದೆ ಬರುವ ನ್ಯಾಯತೀರ್ಪಿನ ವಿಷಯವಾಗಿ ಅವನು ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ನಡುಗಿ--ನೀನು ಸದ್ಯಕ್ಕೆ ಹೋಗು; ನನಗೆ ಅನುಕೂಲವಾದ ಸಮಯವು ಇರುವಾಗ ನಿನ್ನನ್ನು ನಾನು ಕರೆಯಿಸುವೆನು ಎಂದು ಉತ್ತರಕೊಟ್ಟನು.