Job · chapter 22 · verse 23
Job 22:23 in Kannada
ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.
Sarvashaktana kadege neenu tirugi kondare kattalpaduvi; ninna gudaaragalinda dushtatvavannu doora maaduvi.
Job 22:23 in English
- King James Version (KJV)
- If thou return to the Almighty, thou shalt be built up, thou shalt put away iniquity far from thy tabernacles.
- World English Bible (WEB)
- If you return to the Almighty, you will be built up, if you put away unrighteousness far from your tents.
- American Standard Version (ASV)
- If thou return to the Almighty, thou shalt be built up, If thou put away unrighteousness far from thy tents.
- Bible in Basic English (BBE)
- If you come back to the Ruler of all, making yourself low before him; if you put evil far away from your tents;
- Darby Translation (DBY)
- If thou return to the Almighty, thou shalt be built up. If thou remove unrighteousness far from thy tents,
- Webster's Bible (WBS)
- If thou shalt return to the Almighty, thou shalt be built up, thou shalt put away iniquity far from thy tabernacles.
- Young's Literal Translation (YLT)
- If thou dost return unto the Mighty Thou art built up, Thou puttest iniquity far from thy tents.
Read in context
- 21ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು.
- 22ಆತನ ಬಾಯಿಂದ ನ್ಯಾಯಪ್ರಮಾಣವನ್ನು ತಕ್ಕೋ; ಆತನ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.
- 23ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.
- 24ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್ ಬಂಗಾರವನ್ನು ತೆಗೆದು ಹಾಕುವಿ.
- 25ಆಗ ಸರ್ವಶಕ್ತನು ನಿನಗೆ ರಕ್ಷಣೆಯೂ ಸಮೃದ್ಧಿಯಾದ ಬೆಳ್ಳಿಯೂ ಆಗಿರುವನು.
Cross references
- Job 11:13–14 ಯೋಬನು 11:13–14ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ, ನಿನ್ನ ಕೈಯಲ್ಲಿರುವ ಅಪರಾಧವನ್ನು ದೂರಮಾಡಿ ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಮಾಡಗೊಡಿಸದಿದ್ದರೆ
- Zechariah 1:3 ಜೆಕರ್ಯ 1:3ಆದದರಿಂದ ನೀನು ಅವರಿಗೆ ಹೇಳತಕ್ಕದ್ದೇ ನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕಡೆಗೆ ತಿರುಗಿ ಕೊಳ್ಳಿರಿ, ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Job 8:5–6 ಯೋಬನು 8:5–6ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು.
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Hosea 14:1–2 ಹೋಶೇಯ 14:1–2ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ; ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಕರ್ತನ ಕಡೆಗೆ ತಿರಿಗಿಕೊಂಡು ಆತನಿಗೆ--ಎಲ್ಲಾ ದುಷ್ಕತ್ಯವನ್ನು ತೆಗೆದು ಹಾಕಿ ನಮ್ಮನ್ನು ಕೃಪೆಯಿಂದ ಸ್ವೀಕರಿಸು; ಆಗ ನಮ್ಮ ತುಟಿಗಳ ಯಜ್ಞಗಳನ್ನು ನಿನಗೆ ಅರ್ಪಿಸುವೆವು.
- 2 Timothy 2:19 2 ತಿಮೊಥೆಯನಿಗೆ 2:19ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
- Acts 26:20 ಅಪೊಸ್ತಲರ ಕೃತ್ಯಗಳು 26:20ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.
- Joshua 7:13–16 ಯೆಹೋಶುವ 7:13–16ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್ ಕರ್ತನಾದ ದೇವರು ಹೇಳುತ್ತಾನೆ. ಆದದರಿಂದ ಹೊತ್ತಾರೆಯಲ್ಲಿ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಕರ್ತನು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರ ವಾಗಿಯೂ ಕರ್ತನು ಹಿಡಿಯುವ ಕುಟುಂಬವು ಮನೆ ಮನೆಯಾಗಿಯೂ ಕರ್ತನು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ. ಆಗ ಶಾಪಕ್ಕೀಡಾದ ದ್ದನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುವವನು ಕರ್ತನ ಒಡಂಬಡಿಕೆಯನ್ನು ವಿಾರಿ ಇಸ್ರಾಯೇಲಿ ನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲ್ಪಡಬೇಕು ಅಂದನು. ಹೀಗೆಯೇ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲನ್ನು ಗೋತ್ರಗೋತ್ರವಾಗಿ ಕರೆದಾಗ ಯೂದ ಗೋತ್ರವು ಹಿಡಿಯಲ್ಪಟ್ಟಿತು.
- Zechariah 5:3–4 ಜೆಕರ್ಯ 5:3–4ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು. ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
- Jude 1:20 ಯೂದನು 1:20ಪ್ರಿಯರೇ, ನೀವಾ ದರೋ ನಿಮಗಿರುವ ಅತಿಪರಿಶುದ್ಧವಾದ ನಂಬಿಕೆಯ ಮೇಲೆ ನಿಮ್ಮನ್ನು ನೀವೇ ಕಟ್ಟಿಕೊಂಡು ಪರಿಶುದ್ಧಾತ್ಮನಲ್ಲಿ ಪ್ರಾರ್ಥಿಸಿರಿ.
- Colossians 2:7 ಕೊಲೊಸ್ಸೆಯವರಿಗೆ 2:7ಆತನಲ್ಲಿ ಬೇರೂರಿಕೊಂಡು ದೃಢವಾಗಿ ನಿಮಗೆ ಕಲಿಸಿದ ಪ್ರಕಾರವೇ ನಂಬಿಕೆಯಲ್ಲಿ ನೆಲೆಗೊಂಡು ಕೃತಜ್ಞತೆಯಿಂದೊಡಗೂಡಿ ಅದರಲ್ಲಿ ಅಭಿವೃದ್ದಿ ಹೊಂದಿರಿ.
- Job 18:15 ಯೋಬನು 18:15ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು.