Job · chapter 25 · verse 2
Job 25:2 in Kannada
ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ.
Dore tanavoo hedarikeyoo aatanondige ive; tanna unnata sthalagalalli aatanu samaadhaana maaduttaane.
Job 25:2 in English
- King James Version (KJV)
- Dominion and fear [are] with him, he maketh peace in his high places.
- World English Bible (WEB)
- “Dominion and fear are with him. He makes peace in his high places.
- American Standard Version (ASV)
- Dominion and fear are with him; He maketh peace in his high places.
- Bible in Basic English (BBE)
- Rule and power are his; he makes peace in his high places.
- Darby Translation (DBY)
- Dominion and fear are with him; he maketh peace in his high places.
- Webster's Bible (WBS)
- Dominion and fear [are] with him, he maketh peace in his high places.
- Young's Literal Translation (YLT)
- The rule and fear [are] with Him, Making peace in His high places.
Read in context
- 1ಆ ಮೇಲೆ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನಂದರೆ --
- 2ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ.
- 3ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ?
- 4ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ?
Cross references
- Colossians 1:20 ಕೊಲೊಸ್ಸೆಯವರಿಗೆ 1:20ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.
- Revelation 6:16 ಪ್ರಕಟನೆ 6:16ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
- 2 Corinthians 5:18–21 2 ಕೊರಿಂಥದವರಿಗೆ 5:18–21ಎಲ್ಲವುಗಳು ದೇವರವುಗಳಾಗಿವೆ; ಆತನು ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಮಾಧಾನಪಡಿಸಿಕೊಂಡು ಸಮಾಧಾನದ ವಿಷಯವಾದ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ. ಅದೇನಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೆ ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನಪಡಿಸಿ ಕೊಳ್ಳುತ್ತಿದ್ದನೆಂಬದೇ; ಆ ಸಮಾಧಾನದ ವಾಕ್ಯವನ್ನು ನಮ್ಮ ವಶಕ್ಕೆ ಕೊಟ್ಟಿದ್ದಾನೆ. ದೇವರೇ ನಮ್ಮ ಮೂಲಕ ನಿಮ್ಮನ್ನು ಬೇಡಿ ಕೊಳ್ಳುತ್ತಾನೋ ಎಂಬಂತೆ ನಾವು ಈಗ ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೊಂದಿಗೆ ಸಮಾ ಧಾನವಾಗಿರೆಂದು ಕ್ರಿಸ್ತನಿಗೆ ಬದಲಾಗಿ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ.ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು. ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Ephesians 1:20–21 ಎಫೆಸದವರಿಗೆ 1:20–21ಬಲಾತಿಶಯವು ಕ್ರಿಸ್ತನಲ್ಲಿ ತೋರಿಬಂದಿದೆ; ಹೇಗಂ ದರೆ ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು.
- Daniel 4:34–37 ದಾನಿಯೇಲನು 4:34–37ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು. ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು. ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು. ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Isaiah 57:19 ಯೆಶಾಯ 57:19ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
- Psalm 99:1–3 ಕೀರ್ತನೆಗಳು 99:1–3ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ. ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ. ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
- Jude 1:25 ಯೂದನು 1:25ಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್.
- Job 9:2–10 ಯೋಬನು 9:2–10ಸತ್ಯವು ಹೀಗೆ ಇರುವದೆಂದು ಬಲ್ಲೆನು. ಆದರೆ ಮನುಷ್ಯನು ದೇವರ ಮುಂದೆ ನೀತಿವಂತ ನಾಗುವದು ಹೇಗೆ? ಆತನ ಸಂಗಡ ವ್ಯಾಜ್ಯವಾಡಲು ಅವನು ಇಚ್ಛಿಸುವದಾದರೆ, ಆತನಿಗೆ ಸಾವಿರದಲ್ಲಿ ಒಂದಕ್ಕೂ ಅವನು ಉತ್ತರಕೊಡಲಾರನು. ಆತನು ಹೃದಯದಲ್ಲಿ ಜ್ಞಾನಿಯೂ ಬಲದಲ್ಲಿ ಶಕ್ತನೂ ಆಗಿದ್ದಾನೆ; ಆತನಿಗೆ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು? ಪರ್ವತಗಳನ್ನು ಅವು ಗಳಿಗೆ ತಿಳಿಯದ ಹಾಗೆ ನೂಕುತ್ತಾನೆ; ತನ್ನ ಸಿಟ್ಟಿನಲ್ಲಿ ಅವುಗಳನ್ನು ತಿರುಗಿಸುತ್ತಾನೆ. ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾನೆ; ಅದರ ಸ್ತಂಭಗಳು ನಡುಗುತ್ತವೆ. ಉದಯಿಸದ ಹಾಗೆ ಸೂರ್ಯನಿಗೆ ಅಪ್ಪಣೆಕೊಡುತ್ತಾನೆ; ನಕ್ಷತ್ರಗಳಿಗೆ ಮುದ್ರೆಹಾಕುತ್ತಾನೆ; ಆತನೊಬ್ಬನೇ ಆಕಾಶಗಳನ್ನು ಹರಡಿಸುತ್ತಾನೆ; ಸಮುದ್ರದ ತೆರೆಗಳ ಮೇಲೆ ನಡೆಯುತ್ತಾನೆ. ಸಪ್ತ ತಾರೆಗಳನ್ನೂ ಮೃಗಶಿರವನ್ನೂ ವೃಷಭ ರಾಶಿಯನ್ನೂ ದಕ್ಷಿಣದ ಕೋಣೆಗಳನ್ನೂ ಮಾಡಿದಾತನು ಆತನೇ. ಆತನು ಕಂಡುಹಿಡಿಯಲಾರದಂಥ ಮಹತ್ಕಾರ್ಯ ಗಳನ್ನೂ ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುತ್ತಾನೆ.
- Ephesians 2:16–17 ಎಫೆಸದವರಿಗೆ 2:16–17ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ. ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
- Job 26:5–14 ಯೋಬನು 26:5–14ಸತ್ತು ಹೋದವುಗಳೂ ಅವುಗಳ ನಿವಾಸಿಗಳೂ ನೀರುಗಳ ಕೆಳಗೆ ರೂಪಿಸಲ್ಪಡುತ್ತವೆ. ಆತನ ಮುಂದೆ ನರಕವು ಬೆತ್ತಲೆಯಾಗಿದೆ; ನಾಶನಕ್ಕೆ ಮರೆ ಇಲ್ಲ. ಉತ್ತರವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾನೆ; ಭೂಮಿ ಯನ್ನು ಏನೂ ಇಲ್ಲದ್ದರ ಮೇಲೆ ತೂಗ ಹಾಕಿದ್ದಾನೆ. ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು; ಸಿಂಹಾ ಸನದ ಮುಖವನ್ನು ಹಿಂದೆಗೆಯುತ್ತಾನೆ; ಅದರ ಮೇಲೆ ತನ್ನ ಮೇಘವನ್ನು ವಿಸ್ತರಿಸುತ್ತಾನೆ. ಹಗಲು ರಾತ್ರಿ ಮುಗಿಯುವ ವರೆಗೆ ಆತನು ನೀರಿನ ಸುತ್ತಲೂ ಮೇರೆ ಯನ್ನು ಕಟ್ಟಿದ್ದಾನೆ. ಆಕಾಶದ ಸ್ತಂಭಗಳು ಅಲ್ಲಾಡು ತ್ತವೆ; ಆತನ ಗದರಿಕೆಗೆ ಆಶ್ಚರ್ಯಪಡುತ್ತವೆ. ತನ್ನ ಶಕ್ತಿಯಿಂದ ಸಮುದ್ರವನ್ನು ಭೇದಿಸುತ್ತಾನೆ. ತನ್ನ ವಿವೇ ಕದಿಂದ ಗರ್ವಿಷ್ಟನನ್ನು ಹೊಡೆಯುತ್ತಾನೆ. ಆತನ ಆತ್ಮನಿಂದ ಆಕಾಶವು ಶೃಂಗಾರವಾಗಿದೆ; ಆತನ ಕೈ ಓಡುವ ಸರ್ಪವನ್ನು ರೂಪಿಸಿತು.ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು. ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು.
- Matthew 28:18 ಮತ್ತಾಯನು 28:18ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;