Job · chapter 25 · verse 3
Job 25:3 in Kannada
ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ?
Aatana sainyagalige lekka unto? Aatana belaku yaara mele mooduvadilla?
Job 25:3 in English
- King James Version (KJV)
- Is there any number of his armies? and upon whom doth not his light arise?
- World English Bible (WEB)
- Can his armies be counted? On whom does his light not arise?
- American Standard Version (ASV)
- Is there any number of his armies? And upon whom doth not his light arise?
- Bible in Basic English (BBE)
- Is it possible for his armies to be numbered? and on whom is not his light shining?
- Darby Translation (DBY)
- Is there any number of his troops? and upon whom doth not his light arise?
- Webster's Bible (WBS)
- Is there any number of his armies? and upon whom doth not his light arise?
- Young's Literal Translation (YLT)
- Is their [any] number to His troops? And on whom ariseth not His light?
Read in context
- 1ಆ ಮೇಲೆ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನಂದರೆ --
- 2ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ.
- 3ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ?
- 4ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ?
- 5ಇಗೋ, ಚಂದ್ರನಾದರೂ ಹೊಳೆಯು ವದಿಲ್ಲ. ನಕ್ಷತ್ರಗಳಾದರೂ ಆತನ ದೃಷ್ಟಿಗೆ ನಿರ್ಮಲವಾ ಗಿರುವದಿಲ್ಲ.ಮನುಷ್ಯನೆಂಬ ಹುಳವೂ ಮನುಷ್ಯನ ಮಗನೆಂಬ ಕ್ರಿಮಿಯೂ ಎಷ್ಟು ಮಾತ್ರದವನು?
Cross references
- James 1:17 ಯಾಕೋಬನು 1:17ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.
- Matthew 5:45 ಮತ್ತಾಯನು 5:45ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.
- Psalm 148:2–4 ಕೀರ್ತನೆಗಳು 148:2–4ಆತನ ದೂತರೆಲ್ಲರೇ, ಆತನನ್ನು, ಸ್ತುತಿಸಿರಿ; ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ; ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ. ಆಕಾಶಗಳ ಆಕಾಶಗಳೇ, ಆಕಾಶಗಳ ಮೇಲೆ ಇರುವ ನೀರುಗಳೇ, ಆತನನ್ನು ಸ್ತುತಿಸಿರಿ.
- Genesis 1:3–5 ಆದಿಕಾಂಡ 1:3–5ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು. ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು. ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
- Daniel 7:10 ದಾನಿಯೇಲನು 7:10ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟು ಬಂದಿತು; ಸಹಸ್ರ ಸಹಸ್ರ ವಾಗಿ ಆತನಿಗೆ ಸೇವೆಮಾಡಿದರು. ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ಕೂತು ಕೊಂಡರು. ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.
- John 1:4 ಯೋಹಾನನು 1:4ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು.
- Isaiah 40:26 ಯೆಶಾಯ 40:26ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು.
- Matthew 26:53 ಮತ್ತಾಯನು 26:53ನಾನು ಈಗ ನನ್ನ ತಂದೆಗೆ ಪ್ರಾರ್ಥಿಸಲಾರನೆಂದೂ ಆತನು ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡ ಲಾರನೆಂದೂ ನೀನು ನೆನಸುತ್ತಿಯೋ?
- Revelation 5:11 ಪ್ರಕಟನೆ 5:11ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.
- John 1:9 ಯೋಹಾನನು 1:9ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು.
- Genesis 1:14–16 ಆದಿಕಾಂಡ 1:14–16ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ; ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು. ಅದು ಹಾಗೆಯೇ ಆಯಿತು. ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು.
- Psalm 19:4–6 ಕೀರ್ತನೆಗಳು 19:4–6ಭೂಮಿಯ ಮೇಲೆಲ್ಲಾ ಅವು ಗಳ ಪ್ರಭುತ್ವವೂ ಭೂಲೋಕದ ಅಂತ್ಯದ ವರೆಗೆ ಅವುಗಳ ನುಡಿಗಳೂ ಹರಡಿವೆ; ಅವುಗಳಲ್ಲಿ ಆತನು ಸೂರ್ಯನಿಗೆ ಗುಡಾರವನ್ನು ಹಾಕಿದ್ದಾನೆ. ಅವನು ಮದಲಿಂಗನ ಹಾಗೆ ತನ್ನ ಕೊಠಡಿಯಿಂದ ಹೊರಟುಬಂದು ಪರಾಕ್ರಮಶಾಲಿಯ ಹಾಗೆ ಓಡಲು ಸಂತೋಷಿಸುತ್ತಾನೆ. ಆಕಾಶದ ಅಂತ್ಯದಿಂದ ಹೊರಟು ಅದರ ಅಂತ್ಯಗಳ ವರೆಗೆ ಸುತ್ತುತ್ತಾನೆ; ಅವನ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.