Job · chapter 27 · verse 15
Job 27:15 in Kannada
ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು.
Ava nige ulidavaru maranadalli hoonalpaduvaru; avana vidhavegalu alade iruvaru.
Job 27:15 in English
- King James Version (KJV)
- Those that remain of him shall be buried in death: and his widows shall not weep.
- World English Bible (WEB)
- Those who remain of him will be buried in death. His widows will make no lamentation.
- American Standard Version (ASV)
- Those that remain of him shall be buried in death, And his widows shall make no lamentation.
- Bible in Basic English (BBE)
- When those of his house who are still living come to their end by disease, they are not put into the earth, and their widows are not weeping for them.
- Darby Translation (DBY)
- Those that remain of him shall be buried by death, and his widows shall not weep.
- Webster's Bible (WBS)
- Those that remain of him shall be buried in death: and his widows shall not weep.
- Young's Literal Translation (YLT)
- His remnant in death are buried, And his widows do not weep.
Read in context
- 13ಇದು ದುಷ್ಟ ಮನುಷ್ಯನಿಗೆ ದೇವರಿಂದ ಬಂದ ಪಾಲಾಗಿದೆ; ಬಲಾತ್ಕಾರಿಗಳು ಸರ್ವ ಶಕ್ತನಿಂದ ಹೊಂದುವ ಬಾಧ್ಯತೆ ಇದೇ.
- 14ಅವನ ಮಕ್ಕಳು ಹೆಚ್ಚಿದರೆ ಖಡ್ಗಕ್ಕೆ ಗುರಿಯಾಗುವರು; ಅವನ ಸಂತ ತಿಯವರು ರೊಟ್ಟಿಯಿಂದ ತೃಪ್ತಿಹೊಂದರು.
- 15ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು.
- 16ಅವನು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟು ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿ ಕೊಂಡಾಗ್ಯೂ
- 17ಸಿದ್ಧ ಮಾಡಿಕೊಳ್ಳುತ್ತಾನಷ್ಟೇ; ನೀತಿವಂತನು ಉಟ್ಟುಕೊಳ್ಳು ತ್ತಾನೆ; ಬೆಳ್ಳಿಯನ್ನು ನಿರಪರಾಧಿಯು ಪಾಲಿಡುತ್ತಾನೆ.
Cross references
- Psalm 78:64 ಕೀರ್ತನೆಗಳು 78:64ಅವರ ಯಾಜಕರು ಕತ್ತಿಯಿಂದ ಸಂಹಾರವಾದರು; ಅವರ ವಿಧವೆಯರು ಗೋಳಾಡಲಿಲ್ಲ.
- 1 Kings 16:3–4 1 ಅರಸುಗಳು 16:3–4ಇಗೋ, ನಾನು ಬಾಷನ ಸಂತತಿಯನ್ನೂ ಅವನ ಮನೆಯ ಸಂತತಿಯನ್ನೂ ತೆಗೆದು ಹಾಕಿ ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆ ಮಾಡುವೆನು. ಬಾಷನ ಕಡೆಯವನಲ್ಲಿ ಪಟ್ಟಣದೊಳಗೆ ಸಾಯುವ ವನನ್ನು ನಾಯಿಗಳು ತಿನ್ನುವವು. ಅವನ ಕಡೆಯವನಲ್ಲಿ ಹೊಲದೊಳಗೆ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು.
- 1 Kings 14:10–11 1 ಅರಸುಗಳು 14:10–11ಆದದರಿಂದ ಇಗೋ, ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟು ಕೊಂಡವರನ್ನೂ ಕಡಿದು ಬಿಟ್ಟು ಅದು ತೀರುವ ವರೆಗೆ ಮನುಷ್ಯನು ಕಸವನ್ನು ಹೇಗೆ ತೆಗೆದು ಹಾಕುತ್ತಾನೋ ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಜನಶೇಷವನ್ನು ತೆಗೆದು ಹಾಕುತ್ತೇನೆ. ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಕರ್ತನು ಹೇಳಿದ್ದಾನೆ.
- 1 Kings 21:21–24 1 ಅರಸುಗಳು 21:21–24ನೀನು ಕರ್ತನ ದೃಷ್ಟಿ ಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡ ದ್ದರಿಂದ ಇಗೋ, ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನ ಸಂತತಿಯನ್ನು ತೆಗೆದುಹಾಕಿ ಅಹಾಬ ನಿಗೆ ಒಬ್ಬ ಗಂಡಸಾದರೂ ಇಸ್ರಾಯೇಲಿನಲ್ಲಿ ಬಚ್ಚಿಡ ಲ್ಪಟ್ಟವನಾದರೂ ಉಳಿದವನಾದರೂ ಇರದ ಹಾಗೆ ತೆಗೆದುಬಿಡುವೆನು. ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ ಅಹೀಯನ ಮಗನಾದ ಬಾಷನ ಮನೆಯ ಹಾಗೆಯೂ ಮಾಡುವೆನು ಅಂದನು. ಈಜೆಬೆಲ ಳನ್ನು ಕುರಿತು ಕರ್ತನು--ನಾಯಿಗಳು ಈಜೆಬೆಲಳನ್ನು ಇಜ್ರೇಲಿನ ಗೋಡೆಯ ಬಳಿಯಲ್ಲಿ ತಿನ್ನುವವು. ಅಹಾಬನವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಹೇಳುತ್ತಾನೆ ಅಂದನು.
- Jeremiah 22:18 ಯೆರೆಮೀಯ 22:18ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.